ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಟೋ ಚಾಲಕರ ಬೆಂಬಲ ಕೋರಿದ ಆರುಂಧತಿ ನಾಗ್

By Mahesh
|
Google Oneindia Kannada News

ಬೆಂಗಳೂರು, ಏ.14: ಬೆಂಗಳೂರಿಗೆ ಉತ್ತಮ ಸಾರಿಗೆ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಉತ್ತಮ ಯೋಜನೆಗಳನ್ನು ಹಾಕಿಕೊಂಡಿರುವ ನಂದನ್ ನಿಲೇಕಣಿ ಅವರನ್ನು ನೀವು ಬೆಂಬಲಿಸಿ ಅವರು ದುಡ್ಡು ಮಾಡಲು ರಾಜಕೀಯಕ್ಕೆ ಬಂದಿಲ್ಲ, ಇರುವ ದುಡ್ಡು ದಾನ ಮಾಡುತ್ತಾರೆ ಎಂದು ನಟಿ ಅರುಂಧತಿ ನಾಗ್ ಅವರು ಆಟೋರಿಕ್ಷಾ ಚಾಲಕರನ್ನು ಉದ್ದೇಶಿಸಿ ಮತ ಯಾಚನೆ ಮಾಡಿದರು.

ನಿಮ್ಮೆಲ್ಲರ ಗುರು ಶಂಕರ್ ನಾಗ್ ಬದುಕಿದ್ರೆ ಅವರು ಕೂಡಾ ನಂದನ್ ಅವರನ್ನು ಬೆಂಬಲಿಸುತ್ತಿದರು. ನಂದನ್ ಅವರು ಸಮರ್ಥ ಅಭ್ಯರ್ಥಿ, ನಿಮ್ಮೆಲ್ಲರ ಸಮಸ್ಯೆಗೆ ಅವರು ಖಂಡಿತವಾಗಿ ಪರಿಹಾರ ನೀಡಬಲ್ಲರು ಎಂದು ಅರುಂಧತಿ ನಾಗ್ ಹೇಳಿದರು.

ಬೆಂಗಳೂರಿಗೆ ಉತ್ತಮ ಸಾರಿಗೆ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ, ಆಟೋ ಚಾಲಕರೊಂದಿಗೆ ಸಂವಾದ ಮಾಡಿದರು. ನಂದನ್ ಅವರೊಂದಿಗೆ ಅವರ ಪತ್ನಿ ರೋಹಿಣಿ ಮತ್ತು ಆಟೋಚಾಲಕರಿಗೆ ಸದಾ ಸ್ಫೂರ್ತಿಯಾಗಿರುವ ದಿ. ಶಂಕರ್ ನಾಗ್ ಅವರ ಪತ್ನಿ ಹಾಗೂ ಖ್ಯಾತ ರಂಗಕರ್ಮಿ, ರಂಗಶಂಕರದ ಶ್ರೀಮತಿ ಅರುಂಧತಿ ನಾಗ್ ಕೂಡ ಇದ್ದರು. [ಇನ್ನಷ್ಟು ಚಿತ್ರಗಳಿಗೆ ಗ್ಯಾಲರಿ ನೋಡಿ]

ಆಟೋ ಚಾಲಕರೊಂದಿಗೆ ಮಾತನಾಡಿದ ಅರುಂಧತಿಯವರು ಇದೇ ಮೊದಲ ಬಾರಿಗೆ ತಾವು ರಾಜಕೀಯ ಪಕ್ಷವೊಂದರ ಅಭ್ಯರ್ಥಿಗಾಗಿ ಮತ ಹಾಕಬೇಕೆಂದು ಕೋರಲು ಬಂದಿರುವುದಾಗಿ ಹೇಳಿದರು. ಈ ಚುನಾವಣೆ ತುಂಬ ಮಹತ್ವದ್ದು ಎಂದ ಅರುಂಧತಿಯವರು, ನಂದನ್ ಅವರಂತಹ ಪ್ರಾಮಾಣಿಕ, ಸಾಮರ್ಥ್ಯವಿರುವ, ಬದ್ಧತೆಯಿರುವ ವ್ಯಕ್ತಿಯ ಪರವಾಗಿ ನನ್ನಂತಹವರು ಮುಂದೆ ಬಂದು ಮಾತನಾಡಲು ಇದು ಸಕಾಲ ಎಂದರು.

ಶಂಕರ್ ಇಂದು ಬದುಕಿದ್ದರೆ ನಂದನ್ ಗೆ ಮತ

ಶಂಕರ್ ಇಂದು ಬದುಕಿದ್ದರೆ ನಂದನ್ ಗೆ ಮತ

ಅರುಂಧತಿಯವರು ನೆರೆದಿದ್ದ ಎಲ್ಲ ಆಟೋ ಚಾಲಕರು ಅವರ ಸ್ನೇಹಿತವಲಯದ ಚಾಲಕರಲ್ಲಿ ಇನ್ನೂ 500 ಜನರನ್ನಾದರೂ ಭೇಟಿಯಾಗಿ, ಉತ್ತಮ ಬೆಂಗಳೂರು ಮತ್ತು ಒಳ್ಳೆಯ ರಾಜಕೀಯದ ಅಗತ್ಯದ ಕುರಿತು ಮನಗಾಣಿಸಬೇಕೆಂದು ಹೇಳಿದರು. ಶಂಕರ್ ಇಂದು ಬದುಕಿದ್ದರೆ, ಖಂಡಿತವಾಗಿಯೂ ನಂದನ್ ಅವರನ್ನು ಬೆಂಬಲಿಸುತ್ತಿದ್ದರು ಎಂದು ಭಾವುಕರಾಗಿ ಹೇಳಿದರು.

ರಿಕ್ಷಾವಾಲಗಳ ಸಮಸ್ಯೆ ಬಗೆಹರಿಸುವೆ

ರಿಕ್ಷಾವಾಲಗಳ ಸಮಸ್ಯೆ ಬಗೆಹರಿಸುವೆ

ನಂದನ್ ನಿಲೇಕಣಿಯವರು ಇದೇ ಸಂದರ್ಭದಲ್ಲಿ ಮಾತನಾಡುತ್ತ, ತಾವು ಸಂಸದರಾಗಿ ಗೆದ್ದರೆ, ಮೂರು ತಿಂಗಳಿನ ಒಳಗೆ ಆಟೋ ಚಾಲಕರ ಪ್ರತಿನಿಧಿಗಳೊಂದಿಗೆ ಸಭೆ ಮಾಡಿ, ಅವರ ಮುಖ್ಯ ಸಮಸ್ಯೆಗಳನ್ನು ಬಗೆಹರಿಸುವುದಾಗಿ ವಾಗ್ದಾನ ಮಾಡಿದರು.

ಸಮಗ್ರ ಪರಿಹಾರ ರೂಪಿಸುವುದು ಅಗತ್ಯವಿದೆ

ಸಮಗ್ರ ಪರಿಹಾರ ರೂಪಿಸುವುದು ಅಗತ್ಯವಿದೆ

ಸಾರಿಗೆ ಸಮಸ್ಯೆಗಳನ್ನು ಒಂದು ಸಮಗ್ರ ರೀತಿಯಲ್ಲಿ ಬಗೆಹರಿಸಿಕೊಳ್ಳದಿದ್ದರೆ, ಈ ಸಮಸ್ಯೆಗಳು ಮತ್ತೆ ತಲೆ ಎತ್ತುತ್ತವೆ. ನಮ್ಮ ಸಾರಿಗೆ ಸಮಸ್ಯೆಗಳು ನಗರಾದ್ಯಂತ ಇದ್ದು, ಇದಕ್ಕೆ ಸಮಗ್ರ ಪರಿಹಾರ ರೂಪಿಸುವುದು ಅಗತ್ಯವಿದೆ ಎಂದು ನಂದನ್ ಹೇಳಿದರು.

ಜಯನಗರದಲ್ಲಿ ನಂದನ್ ಜತೆ ಪ್ರಚಾರ

ಜಯನಗರದಲ್ಲಿ ನಂದನ್ ಜತೆ ಪ್ರಚಾರ

ಸಾರ್ವಜನಿಕ ಸಭೆಯಲ್ಲಿ ನಂದನ್ ಅವರ ಪತ್ನಿ ರೋಹಿಣಿ ಅಲ್ಲದೆ ಕಾಂಗ್ರೆಸ್ ಮುಖಂಡರಾದ ಕೆ ಎಂ ನಾಗರಾಜ್ ಮತ್ತು ಸ್ಥಳೀಯ ಕಾರ್ಪೋರೇಟರ್ ಶ್ರೀಮತಿ ಗಂಗಾಂಬಿಕೆ ಮಲ್ಲಿಕಾರ್ಜುನ್ ಕೂಡ ಉಪಸ್ಥಿತರಿದ್ದರು.

ಮಾರ್ಗ ಮಧ್ಯದಲ್ಲೂ ಪ್ರಚಾರ ಕಾರ್ಯ

ಮಾರ್ಗ ಮಧ್ಯದಲ್ಲೂ ಪ್ರಚಾರ ಕಾರ್ಯ

ಟ್ರಾಫಿಕ್ ಸಿಗ್ನಲ್ ನಲ್ಲಿ ನಂದನ್ ಅವರ ಕಾರು ನಿಂತಿದ್ದ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಆಟೋರಿಕ್ಷಾ ಚಾಲಕನನ್ನು ಮಾತನಾಡಿಸುತ್ತಿರುವ ನಂದನ್

English summary
Nandan Nilekani, Congress party candidate from Bangalore South parliamentary constituency met several auto rickshaw drivers and sought their support for his candidature. His wife Rohini and Arundathi Nag, founder of Ranga Shankara and wife of late Shankar Nag, who remains an iconic figure for thousands of auto drivers in Bangalore joined him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X