ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Bengaluru KR Market: ಫ್ಲೈಓವರ್‌ನಿಂದ ದುಡ್ಡು ಎಸೆದವ ಕೊರೊನಾ ವೇಳೆ 'ಬಿಕ್ಷೆ ಬೇಡಿದ್ದ'

ಇತ್ತೀಚೆಗಷ್ಟೇ ನಗರದ ಕೆ.ಆರ್‌. ಮಾರುಕಟ್ಟೆ ಮೇಲ್ಸೇತುವೆಯಿಂದ ಹಣ ಎಸೆದು ಭಾರಿ ಸುದ್ದಿಯಾಗಿದ್ದ ಈವೆಂಟ್ ಮ್ಯಾನೇಜ್‌ಮೆಂಟ್‌ ಕಂಪನಿ ಮಾಲೀಕ ತಾನು, ಕೊರೊನಾ ಸಂಕ್ರಾಮಿಕದ ಸಂದರ್ಭದಲ್ಲಿ 'ಬಿಕ್ಷೆ ಬೇಡಿರುವುದಾಗಿ' ಹೇಳಿಕೊಂಡಿದ್ದಾನೆ.

|
Google Oneindia Kannada News

ಬೆಂಗಳೂರು, ಜನವರಿ 27: ಇತ್ತೀಚೆಗಷ್ಟೇ ನಗರದ ಕೆ.ಆರ್‌. ಮಾರುಕಟ್ಟೆ ಮೇಲ್ಸೇತುವೆಯಿಂದ ಹಣ ಎಸೆದು ಭಾರಿ ಸುದ್ದಿಯಾಗಿದ್ದ ಈವೆಂಟ್ ಮ್ಯಾನೇಜ್‌ಮೆಂಟ್‌ ಕಂಪನಿ ಮಾಲೀಕ ತಾನು, ಕೊರೊನಾ ಸಂಕ್ರಾಮಿಕದ ಸಂದರ್ಭದಲ್ಲಿ 'ಬಿಕ್ಷೆ ಬೇಡಿರುವುದಾಗಿ' ಹೇಳಿಕೊಂಡಿದ್ದಾನೆ.

ಹೌದು, ಕೆ.ಆರ್.ಮಾರ್ಕೆಟ್ ಮೇಲ್ಸೇತುವೆಯಿಂದ 10ರೂ. ನೋಟುಗಳನ್ನು ಎಸೆದ ಈವೆಂಟ್ ಮ್ಯಾನೇಜ್‌ಮೆಂಟ್‌ ಕಂಪನಿ ಮಾಲೀಕ ಅರುಣ್ ವಿಡಿಯೋ ಭಾರಿ ವೈರಲ್ ಆಗಿತ್ತು. ಘಟನೆ ಬಳಿಕ ಸ್ಥಳದಿಂದ ತೆರಳಿದ್ದ ಆತನನ್ನು ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದಿದ್ದರು.

ಕೋವಿಡ್ ಸೋಂಕು ಪುರುಷರಲ್ಲಿ ವೀರ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು: ಏಮ್ಸ್ ಅಧ್ಯಯನಕೋವಿಡ್ ಸೋಂಕು ಪುರುಷರಲ್ಲಿ ವೀರ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು: ಏಮ್ಸ್ ಅಧ್ಯಯನ

ಅರುಣ್ ಕೋವಿಡ್ ವೇಳೆ 'ತಾನು ಭಿಕ್ಷುಕ ಉದ್ಯಮಿ' ಸೇರಿದಂತೆ ವಿವಿಧ ರೀತಿಯ ಸಾಹಸಗಳನ್ನು ಮಾಡಿರುವುದಾಗಿ ಹೇಳಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ವ್ಯಾಪಾರ ಆರಂಭಿಸಿಲು ಸುಮಾರು 10ಸಾವಿರ ರೂಪಾಯಿ ಹಣದ ಅವಶ್ಯಕತೆ ಇತ್ತು. ಹೀಗಾಗಿ ಸಿಟಿ ಮಾರುಕಟ್ಟೆ ಸಿಗ್ನಲ್‌ನಲ್ಲಿ ಭಿಕ್ಷೆ ಬೇಡಿದ್ದೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ನನಗೆ ಜನರಿಗೆ ಒಳಿತು ಮಾಡುವ ಮನಸ್ಸಿದೆ. ನನಗೆ ಉತ್ತಮ ಅವಕಾಶ ಸಿಕ್ಕಾಗ ಮಾತ್ರ ಅದನ್ನು ಮಾಡಲು ಸಾಧ್ಯತೆ. ಎಲ್ಲರೂ ಒಟ್ಟಿಗೆ ಬೆಳೆಯಬೇಕು ಎಂಬುದು ನನ್ನ ಆಶಯ ಎಂದು ತಿಳಿಸಿದ್ದಾರೆ.

Arun throw money in Bengaluru KR market recently he begged during Corona

ಆಫ್‌ಲೈನ್ ಇಲ್ಲವೇ ಆನ್‌ಲೈನ್‌ನಲ್ಲಿ ಮೊದಲು ನನ್ನನ್ನು ಮಾರ್ಕೆಟ್ ಮಾಡಿಕೊಳ್ಳಬೇಕು. ನೂರಾರು ಜನರನ್ನು ಒಟ್ಟುಗೂಡಿಸಿ ಭಾಷಣ ಮಾಡುವ ಮೂಲಕ ನನ್ನನ್ನು ಮಾರುಕಟ್ಟೆಗೆ ತರಲು ಆಗದು. ಆನ್‌ಲೈನ್‌ನಲ್ಲಿ ನನ್ನನ್ನು ಮಾರ್ಕೆಟ್ ಮಾಡಿಕೊಂಡರೆ ನನ್ನ ಉದ್ದೇಶ ಎಲ್ಲರಿಗೂ ತಿಳಿಯುತ್ತದೆ. ಸದ್ಯ ಜನರ ಗಮನ ಸೆಳೆದಿರುವ ನಾನು, ಶೀಘ್ರವೇ ಎಲ್ಲಿರಗೂ ನನ್ನ ಉದ್ದೇಶ ಸಹ ತಿಳಿಸುತ್ತೇನೆ ಎಂದಿದ್ದಾರೆ.

ನಿರೂಪಕ ಅರುಣ್, ಮಾರ್ಕೆಟಿಂಗ್ ತಜ್ಞ, ಉತ್ತಮ ಭಾಷಣಕಾರ, ಮಾಜಿ ಕಬಡ್ಡಿ ಆಟಗಾರ ಎಂಸಿ/ವಿಜೆ ವಿ.ಅರುಣ್ ಎಂದು ಕರೆದುಕೊಳ್ಳುವ ಅರುಣ್ (30) ಬೆಂಗಳೂರಲ್ಲಿ 'ವಿ ಡಾಟ್ ನೈನ್ ಈವೆಂಟ್ಸ್' ಎಂಬ ಕಂಪನಿ ಹುಟ್ಟುಹಾಕಿದ್ದಾರೆ. ಅರುಣ್ ಸ್ಥಿರವಾಗಿದ್ದು, ಅವರು ಅಸ್ಥಿರವಲ್ಲ. ಉದ್ಯಮದಲ್ಲಿ ಯಶಸ್ವಿಯಾಗುವ ಹೆಬ್ಬಯಕೆ ಜೊತೆಗೆ ಜನರಿಗೆ ನೆರವಾಗಬೇಕು ಎಂದು ಉದ್ದೇಶ ಹೊಂದಿರುವ ವ್ಯಕ್ತಿ ಎಂದು ಅರುಣ್ ಅವರ ಸಹೋದ್ಯೋಗಿ ತಿಳಿಸಿದ್ದಾರೆ.

Arun throw money in Bengaluru KR market recently he begged during Corona

ಸದ್ಯ ಈ ಅರುಣ್ ಕಳೆದ ಜನವರಿ 24 ರಂದು ಕೆ.ಆರ್. ಮಾರುಕಟ್ಟೆ ಮೇಲ್ಸೇತುವೆ ಮೇಲೆ ನಿಂತು ಹಣ ಎಸೆದಿದ್ದರು. ಅವರ ಸ್ನೇಹಿತರ ಈ ವಿಡಿಯೋ ಮಾಡಿದ್ದರು. ಈ ಬಗ್ಗೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಅರುಣ್‌ನನ್ನು ವಶಕ್ಕೆ ಪಡೆದಿದ್ದರು. ಬಳಿಕ ಆತ ಪ್ರಚಾರಕ್ಕಾಗಿ ಹಣ ಎಸೆದಿದ್ದಾರೆ. ಅರುಣ್‌ ಬೆಂಗಳೂರಿನಲ್ಲಿ ಈವೇಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆ ಮಾಲೀಕ ಎಂಬ ಅಂಶಗಳನ್ನು ಪೊಲೀಸರು ತಿಳಿಸಿದ್ದರು. ಸದ್ಯ ಅರುಣ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಹೇಳಿದ್ದರು.

English summary
Arun throw money in Bengaluru KR market recently he begged during Corona,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X