ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಂಗೋಲಿ ಮೆಟ್ರೋ ಕೇಂದ್ರದಲ್ಲಿ ಚಳಿಗಾಲದ ಚಿತ್ರಕಲೆ ಪ್ರದರ್ಶನ

|
Google Oneindia Kannada News

ಕಲೆ ಎನ್ನುವುದು ಮನುಷ್ಯನ ಭಾವನೆಗಳು ಅಥವಾ ಅರಿವಿನ ಮೇಲೆ ಪರಿಮಾಣವಾಗುವ ಹಾಗೆ ಬುದ್ಧಿ ಪೂರ್ವಕವಾಗಿ ಜೋಡಿಸಲಾದ ಅಂಶಗಳು ಎನ್ನಬಹುದು.

ಹೇಗೆ ಮನುಷ್ಯನ ವೈವಿಧ್ಯಮಯ ಕಲ್ಪನಾ ಸೃಷ್ಟಿಯ ಭಾವನೆಗಳ, ಅಭಿವ್ಯಕ್ತಿಸುವ ಒಂದು ಪ್ರಕಾರ ಛಾಯಾಚಿತ್ರ ಕಲೆ (photography)

ಹಿರಿಯರು ಹೇಳಿದಂತೆ ನಾವು ಕಾಣುವ ಒಂದೊಂದು ಅಂಶದಲ್ಲೂ ಚೆಲುವಿದೆ, ಅದ ಆನಂದಿಸುವ ಕಣ್ಣುಗಳಿಗೆ.

ಅನಂದವ ಆಸ್ವಾದಿಸುತ ಕ್ಯಾಮೆರಾದಲ್ಲಿ ಸೆರೆಹಿಡಿವ ಚಾತುರ್ಯ, ಸೃಜನಶೀಲತೆ, ಅದನೋಡುವ ದೃಷ್ಟಿಕೋನ, ಆ ಅನಂದವ ಸವಿದ ಅನುಭವಾಗಳೇ ಚಿತ್ರಕರನ ಚಿತ್ರಪಟದ ಜೀವಾಳ.

ಚೆಲುವಿನ ಆಸ್ವಾದನೆಯ ಗುಣ ಪ್ರತಿಯೊಬ್ಬ ವ್ಯಕ್ತಿಯ ದೃಷ್ಟಿಕೋಣಕನುಗುಣವಾಗಿ ಸ್ವಾತಂತ್ರವಾಗಿದೆ. Artsy tales, ನಾಲ್ಕು ಚಿತ್ರಕಾರರ ವಿಭಿನತೆಯೊಟ್ಟಿಗೆ, ಛಾಯಾಚಿತ್ರ ನಿರ್ಮಾಣದ ಸೂಕ್ಷ್ಮತೆಯ ಅನುಭದ ಅನಂದವ ಪ್ರಪಂಚಕ್ಕೆ ತೆರೆದಿಡುವ ಪ್ರಯತ್ನ.

Artsy Tales 3 Day Photography and Art Exhibition

ಎಲ್ಲವನ್ನು ವಿವರಿಸಲಾಗದು,
ತೂಕದ ತಕ್ಕಡಿಯಲ್ಲಿ ತೂಗಲಾಗದು.
ನೆನೆದು ಮೇಲಕುಹಕಬಹುದಷ್ಟೇ,
ಮರೆಯದ ಮಧುರ ಕ್ಷಣಗಳ.
ನಮ್ಮ ಕಣ್ಣಲಿ ಕ್ಲಿಕ್ಕಿಸಿದ,
ಮಾಸದ ಮನಸಿನ ಮುಗುಳುನಾಗೆಯ.
ಒಂದು ಚಿತ್ರಪಟದ ತೃಪ್ತಿಗಾಗಿ,
ದಿನವಿಡೀ ಕಾದು ಕುಳಿತ ಸಂಭ್ರಮವ.

- ಬನ್ನಿ, 23-25 ನವೆಂಬರ್, ರಂಗೋಲಿ ಮೆಟ್ರೋ ಆರ್ಟ್ ಕೇಂದ್ರ, ಎಂಜಿ ರಸ್ತೆ, ಮೆಟ್ರೋ ಸ್ಟೇಷನ್, ಬೆಂಗಳೂರು
ಮಾಸದೆ ಅಚ್ಚಿಳಿದ ಚಿತ್ರಪಟಗಳೊಂದಿಗೆ ಭೇಟಿಯಾಗಲು,
ಚಿತ್ರಕಾರರ ಚೈತನ್ಯವ, ಚಿತ್ರಪಟದ ಚೆಲುವ ಇಮ್ಮಡಿಗೊಳಿಸಲು.

Artist profiles

ಸುದರ್ಶನ್ ರಮೇಶ್- ನೆನಪಿನ ಬುತ್ತಿಗೆ ಚಿತ್ರಪಟಗಳೊಂದಿಗೆ ಜೀವವಿತ್ತು ಜೋಡಿಸುವುದು ನನ್ನ ಹವ್ಯಾಸ, ಪ್ರಕೃತಿ-ಪರಿಸರ ಚಿತ್ರಗಳ ಕ್ಯಾಮೆರಾ ಕಣ್ಣಲಿ ಸೆರೆಹಿಡಿಯುತ್ತ ನಾನು ಛಾಯಾಚಿತ್ರಕರ ಎಂದೆನಿಸಿಕೊಂಡೆ, ನಾಕಂಡ ಸೌಂದರ್ಯವ, ಅದರೊಟ್ಟಿಗಿನ ಸಂಭಾಷಣೆಯ ಕತೆಯ ನಿರೂಪಣೆಯೇ ನನ್ನ ಚಿತ್ರಪಟಗಳ ಸಾರಾಂಶ.

ಸಜೀಶ್ ರಾಧಾಕೃಷ್ಣನ್- ಛಾಯಾಚಿತ್ರಕಾರನಾಗಿ ನಾನು, ನನ್ನ ಚಿತ್ರಪಟಗಳಲ್ಲಿ ಪ್ರಕೃತಿಯ ಸೌಂದರ್ಯವ ಸೆರೆಹಿಡಿಯುತ, ವನ್ಯ ಜೀವಿಗಳ ಚಲನವಲನ ಅಧ್ಯಯನ ಮಾಡುತ್ತೇನೆ. ಈ ಹಾದಿಯಲ್ಲಿ ನಡೆಯುತ್ತ ಇದುವರೆಗೂ ಹಲವಾರು ಗೌರವಾನ್ವಿತ ಪ್ರಶಸ್ತಿಗಳು ದೊರಕಿವೆ, ಬಹುಮುಖ್ಯವಾಗಿ international monochrome photography award 2017 ಅಲ್ಲಿ ನನ್ನ ಹೆಸರು ಉಲ್ಲೇಖವಾಗಿದೆ.

ಮಾಲಾ ಚಂದ್ರಶೇಖರ್ : ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬ ಗಾದೆ ಮಾತಿದೆ. ದೇಶಗಳ ಸುತ್ತಲು, ಸುತ್ತಿ ಬಂದ ದೇಶದ ಸರೋವರ, ಶಿಖರ, ಶಿಲ್ಪಕಲೆಗಳ ಸೊಬಗ ಸಾಲಲ್ಲಿ ಬಣ್ಣಿಸುವ ನನ್ನ ಲೇಖನಿಯೊಟ್ಟಿಗೆ ಮನಚುಂಬಿಸುವ ಒಂದು ಚಿತ್ರಪಟಕೆ ಹಾತೊರೆದು ದಿನವಿಡೀ ಕುಳಿತ ಕ್ಯಾಮೆರಾ ನನ್ನದು.

ಕಾರ್ತಿಕ್ ಸಂಪ್ರತಿ : ನಮ್ಮ ಕರ್ನಾಟಕದ ಪಕ್ಷಿ ಪರಿಸರ, ವನ್ಯ ಜೀವ ಜಂತುಗಳ ಆವಾಸ್ಥಾನ ಎಂದೇ ಹೇಳಬಹುದಾದ ಪಶ್ಚಿಮಘಟ್ಟ ನಾನಾ ಆಸಕ್ತಿ ಕೌತುಕತೆಗೆ ನೀರೆರೆದು ಪೋಷಿಸಿದ ಭೂಮಿ. ನನ್ನೊಳಗಿನ ಸೂಕ್ಷ್ಮತೆಯ ಆನಂದಿಸುವ ಮೊಳಕೆಯೊಡೆದ ಮನಕೆ ವಿಷಯವ ಕೊಟ್ಟು, ಸೂಕ್ಷ್ಮ ಹಾಗೂ ಸೃಜನಶೀಲ (fine art and creative) ಛಾಯಾಚಿತ್ರದೆಡೆಗೆ ತನ್ನದೇ ದೃಷ್ಟಿಕೋನದ ಆಯಾಮ ನೀಡಿದೆ.

English summary
Artsy Tales brings to you a 3 day- Winter exhibition this November, showcasing such stories in the form photographs and fine arts to you. The collection varies and are captured from across the world and are on display at Rangoli Metro Art Center.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X