ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಟೆಗದ್ದೆ ರವಿ ಅವರ 'ತಂತ್ರ' ಚಿತ್ರಕಲಾ ಪ್ರದರ್ಶನ ಯಶಸ್ವಿ

By Nayana
|
Google Oneindia Kannada News

ಬೆಂಗಳೂರು, ಏಪ್ರಿಲ್ 30 : ಬೆಂಗಳೂರಿನ ಫಿಡೆಲಿಟಸ್ ಗ್ಯಾಲರಿಯಲ್ಲಿ ಮುಖ್ಯ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಕೋಟೆಗದ್ದೆ ರವಿ ಅವರ ಕಲಾಕೃತಿಗಳ ಪ್ರದರ್ಶನ 'ತಂತ್ರ' ಗೋವಾದಲ್ಲಿ ಯಶಸ್ವಿಯಾಗಿ ಜರುಗಿತು.

ವಾಗತ್ತೋರ್ ಬೀಚ್‌ ರಸ್ತೆಯಲ್ಲಿರುವ ಉಜ್ವಲ್ ಕಲಾ ಗ್ಯಾಲರಿಯಲ್ಲಿ ಏಪ್ರಿಲ್ 18ರಿಂದ 22ರವರೆಗೆ ನಡೆಯಿತು. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ಬೆಂಗಳೂರಿನ ಫಿಡಿಲಿಟಸ್ ಗ್ಯಾಲರಿಯು ಈ ಪ್ರದರ್ಶನವನ್ನು ಪ್ರಸ್ತುತಪಡಿಸಿತ್ತು.

ಗೋವಾದಲ್ಲಿ ಕೋಟೆಗದ್ದೆ ರವಿ ಅವರ 'ತಂತ್ರ' ಚಿತ್ರಕಲಾ ಪ್ರದರ್ಶನಗೋವಾದಲ್ಲಿ ಕೋಟೆಗದ್ದೆ ರವಿ ಅವರ 'ತಂತ್ರ' ಚಿತ್ರಕಲಾ ಪ್ರದರ್ಶನ

ಕೋಟೆಗದ್ದೆ ರವಿ ಅವರ ಸುಮಾರು 23 ಕಲಾಕೃತಿಗಳನ್ನೊಳಗೊಂಡ ಪ್ರದರ್ಶನವು 'ತಂತ್ರ' ಎಂಬ ಶಿರೋನಾಮೆಯಲ್ಲಿ ಮೊದಲ ಬಾರಿಗೆ ಗೋವಾದಲ್ಲಿ ಆಯೋಜಿಸಲಾಗಿದ್ದು ಪ್ರತಿದಿನ ಬೆಳಗ್ಗೆ 10.30ರಿಂದ ರಾತ್ರಿ 7ರವರೆಗೆ ಐದು ದಿನಗಳ ಕಾಲ ಪ್ರದರ್ಶಿಸಲ್ಪಟ್ಟವು.

Artist Kotegadde Ravi art exhibition Tantra inaugurated

18 ಏಪ್ರಿಲ್ 2018ರಂದು ಬೆಳಗ್ಗೆ 11ಕ್ಕೆ ಉದ್ಘಾಟನೆಗೊಂಡ ಪ್ರದರ್ಶನಕ್ಕೆ ಪಣಜಿಯ ಇನ್‌ಸ್ಟಿಟ್ಯೂಟ್ ಆಫ್
ಮರಿಜಸ್ ಬ್ರಿಗಾಂಜ್ ನ ಚೇರಮನ್ ಸಂಜಯ್ ಹರ್ಮಾಲ್ಕರ್ ಚಾಲನೆ ನೀಡಿದರು.

ಗೋವಾದ ಓಜೋನ್ ಗ್ರುಪ್‌ನ ಉಪಾಧ್ಯಕ್ಷ ಗಜಾನನ ಕರ್ಕರೆ ಹಾಗೂ ಬೆಂಗಳೂರಿನ ಫಿಡೆಲಿಟಸ್ ಕಾರ್ಪ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಚ್ಯುತ್ ಗೌಡ ಅತಿಥಿಗಳಾಗಿ ಆಗಮಿಸಿದ್ದರು. ಜೊತೆಗೆ ಫಿಡಿಲಿಟಸ್ ಗ್ಯಾಲರಿಯ ಮುಖ್ಯಸ್ಥರು ಹಾಗು ಸಹೋದ್ಯೋಗಿಗಳು ಜೊತೆಗೆ ಗೋವಾದ ಕಲಾ ಪ್ರೇಮಿಗಳು ಈ ಪ್ರದರ್ಶನಕ್ಕೆ ಸಾಕ್ಷಿಗಳಾಗಿದ್ದರು.

Artist Kotegadde Ravi art exhibition Tantra inaugurated

ಕಲಾವಿದರ ಪರಿಚಯ : ಕೋಟೆಗದ್ದೆ ರವಿ ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಚಿಕ್ಕ ಗ್ರಾಮ ಕೋಟೆಗದ್ದೆಯವರು. ತಮ್ಮೂರಲ್ಲೇ ಶಿಕ್ಷಣ ಮುಗಿಸಿ ನಂತರ ಮೈಸೂರಿನ ಡಿಎಂಎಸ್ ಲಲಿತ ಕಲಾ ಮಹಾ ಸಂಸ್ಥಾನದಿಂದ ಲಲಿತಕಲೆಯಲ್ಲಿ ಪದವಿ ಪಡೆದರು.

ಅಕ್ರೈಲಿಕ್ ಮಾದ್ಯಮದಲ್ಲಿ ಕ್ಯಾನ್ವಾಸ್‌ನ ಮೇಲೆ ಸಮಕಾಲೀನ ಶೈಲಿಯಲ್ಲಿ ಸೃಜನಾತ್ಮಕ ಕಲಾಕೃತಿಗಳನ್ನು ರಚಿಸುವ ರವಿಯವರು ಒಬ್ಬ ಪ್ರಯೋಗಶೀಲ ಕಲಾವಿದ ಕೂಡ. ಭಾರತೀಯ ಸಂಸ್ಕೃತಿ ಆದ್ಯಾತ್ಮ ಹಾಗು ಪೌರಾಣಿಕ ವಿಷಯಗಳನ್ನು ಸಮಕಾಲೀನ ಶೈಲಿಗೆ ಒಗ್ಗಿಸುವಲ್ಲಿ ಪ್ರರಿಣಿತರಾಗಿರುವ ಹಾಗು ಈಗಾಗಲೇ ಚಿತ್ರಕಲಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ರವಿ ದೇಶದ ಹಲವಾರು ಭಾಗಗಳಲ್ಲಿ ತಮ್ಮ ಕಲಾ ಪ್ರದರ್ಶನದ ಮೂಲಕ ಹೆಸರು ಮಾಡಿದ್ದಾರೆ.

English summary
Department of Kannada and culture and fidelitus Gallery have jointly organising art exhibition 'TANTRA' by creative artist Kotegadde Ravi was inaugurated in Goa. Chairman of Goa institute of manazes briganza Sanjay Harmalkar inaugurated the exhibition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X