ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಟಿ ಅಶ್ವಿನಿ ಗೌಡರಿಂದ 'ಆರ್ಟಿಸನ್ಸ್ ಬಜಾರ್' ಗೆ ಚಾಲನೆ

|
Google Oneindia Kannada News

ಬೆಂಗಳೂರು ಜನವರಿ 25 2018: ದೇಶದ ವಿವಿಧ ಭಾಗಗಳ ಕರಕುಶಲಕಾರರು ಹಾಗೂ ಕಲಾವಿದರ ಕೈಚಳಕದಲ್ಲಿ ಅನಾವರಣಗೊಂಡಿರುವ ತರತರಹದ ಸೀರೆಗಳು, ಕುರ್ತಿಗಳು, ಕಲಾಂಕಾರಿ ಮತ್ತು ಕೋಲ್ಕತ್ತಾ ಬ್ಯಾಗ್ ಗಳು, ಕನ್ನೂರ್ ಕಾಟನ್ ಕರ್ಟನ್‍ಗಳು, ತರತರಹದ ಬೆಡ್ ಶೀಟ್‍ಗಳು ಚಿತ್ರಕಲಾ ಪರಿಷತ್ ನಲ್ಲಿ ಇಂದಿನಿಂದ ಪ್ರಾರಂಭವಾಗಿರುವ ಆರ್ಟಿಸನ್ಸ್ ಬಜಾರ್ ನ ವಿಶೇಷತೆಗಳು.

ನಟಿ ಅಶ್ವಿನಿ ಗೌಡ ಅವರು ಇಂದು ಭಾರತ ದೇಶದ ಮೂಲೆ ಮೂಲೆಗಳಲ್ಲಿರುವ ಅತ್ಯಂತ ಹೆಮ್ಮೆಯ ಕರಕುಶಲ ಕಲಾವಿದರನ್ನು ಒಂದೇ ವೇದಿಕೆಯಡಿಯಲ್ಲಿ ತರುವ ಉದ್ದೇಶದಿಂದ, ಗ್ರಾಂಡ್ ಫ್ಲಿಯಾ ಮಾರ್ಕೆಟ್, ಚಿತ್ತಾರದ ಸಹಯೋಗದಲ್ಲಿ ಆಯೋಜಿಸಲಾಗಿರುವ "ಆರ್ಟಿಸನ್ಸ್ ಬಜಾರ" ಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ದೇಶದ ಎಲ್ಲಾ ಕರಕುಶಲ ಕರ್ಮಿಗಳ ಕೈಚಳಕದ ಅನಾವರಣವನ್ನು ಒಂದೇ ವೇದಿಕೆಯ ಅಡಿಯಲ್ಲಿ ಕಾಣಬಹುದಾಗಿದೆ. ವಿವಿಧ ರಾಜ್ಯಗಳ ಸೀರೆಗಳಂತೂ ಎಲ್ಲರ ಗಮನ ಸೆಳೆಯಲಿವೆ ಎಂದರು.

Artisans Bazaar Lifestyle Utility products from Artisans

ಚಿತ್ರಕಲಾ ಪರಿಷತ್ : ಕರಕುಶಲಕಾರರ ಚಿತ್ರಕಲಾ ಪರಿಷತ್ : ಕರಕುಶಲಕಾರರ "ಆರ್ಟಿಸನ್ಸ್ ಬಜಾರ್" ಗೆ ಬನ್ನಿ

ಜನವರಿ 25 ರಿಂದ ಫೆಬ್ರವರಿ 3 ರ ವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್‍ನಲ್ಲಿ ದೇಶದ ವಿವಿಧ ಭಾಗಗಳ ಕರಕುಶಲಕಾರರಿಂದ ಆಯೋಜನೆಗೊಳ್ಳುತ್ತಿರುವ ಆರ್ಟಿಸನ್ಸ್ ಬಜಾರ್ ನಡೆಯಲಿದೆ. ದೇಶದ ವಿವಿಧ ಭಾಗಗಳ ನೂರಕ್ಕೂ ಹೆಚ್ಚು ಕಲಾವಿದರ ಈ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಭಾಗವಹಿಸಲಿದ್ದು, 100 ಮಳಿಗೆಗಳ ಇರಲಿವೆ.

Artisans Bazaar Lifestyle Utility products from Artisans

ಈ ಬಜಾರ್ ನಲ್ಲಿ ದೇಶದ ಮೂಲೆ ಮೂಲೆಯ ಕಲಾವಿದರ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಲಿದೆ. ಒರಿಸ್ಸಾ, ರಾಜಸ್ತಾನ್, ಟ್ರೈಬಲ್ ಇನ್ನಿತರೆ ಆಭರಣಗಳು. ವುಡನ್ ಫೌಂಟೇನ್, ವುಡನ್ ವಾಚಗಳು, ವುಡನ್ ಡ್ರೈಫ್ರೂಟ ಬಾಕ್ಸ್‍ಗಳು. ತರತರಹದ ಪಿಂಗಾಣಿ ವಸ್ತುಗಳು, ಎಲ್ಲಾ ರಾಜ್ಯಗಳ ಕಲಾವಿದರು ನಿರ್ಮಿಸಿರುವ ತರತರಹದ ಸೀರೆಗಳು, ಎಲ್ಲಾ ತರಹದ ಕುರ್ತಿಗಳು. ಕಲಾಂಕರಿ, ಕೊಲ್ಕೊತ್ತಾ ಬ್ಯಾಗಗಳು, ಕನ್ನೂರ್ ಕಾಟನ್ ಕರ್ಟನ್‍ಗಳು, ತರತರಹದ ಬೆಡ್ ಶೀಟ್‍ಗಳು ಈ ಬಾರಿಯ ಹೈಲೈಟ್.

Artisans Bazaar Lifestyle Utility products from Artisans

ಅಲ್ಲದೆ, ಇಲ್ಲಿ ಹುಲ್ಲಿನ ಆಂಧ್ರಪ್ರದೇಶದ ಪಪೆಟ್‍ಗಳು, ಹಾಸು, ಬೆಳ್ಳಿಯ ಸೂಕ್ಷ ಕೆತ್ತನೆಯ ಆಭರಣಗಳು, ಸೆಣಬಿನ ಚಪ್ಪಲಿ, ಅಂದದ ಆಟಿಕೆಗಳು, ಜವಳಿ ಮತ್ತು ಕಚೇರಿಗೆ ಉಪಯುಕ್ತ ಸಾಮಾಗ್ರಿಗಳು ಸೇರಿದಂತೆ ಅನೇಕ ಕರಕುಶಲ ವಸ್ತುಗಳು ಲಭ್ಯವಿದೆ. ಪುರಾನಾ ಸಾಹು ಅವರ ಕಣ್ಮನಸೆಳೆಯುವ ಪುರಾತನ ಹಿತ್ತಾಳೆಯ ಕರಕುಶಲವಸ್ತುಗಳು. ಅಲ್ಲದೆ ಅವರ ಸೌರ ಚಿತ್ರಕಲಾಕೃತಿಗಳು ಇಲ್ಲಿ ಲಭ್ಯ. ಪೌರ್ಣ ಚಂದ್ರ ಮೊಹಪಾತ್ರ ಅವರ ಬೆಳ್ಳಿಯ ಆಭರಣಗಳು ಆಧುನಿಕತೆಯ ಹಿನ್ನಲೆಯಲ್ಲಿ ಪುರಾತನ ಸೊಬಗನ್ನು ಬಿಂಬಿಸಲಿವೆ. ಪೆಂಡೆಟ್‍ಗಳು, ಬಳೆಗಳು, ಹೇರ್ ಪಿನ್‍ಗಳು ಅಲ್ಲದೆ ಮುತ್ತಿನ ಆಭರಣದ ಕುಂಕುಮ ಬಾಕ್ಸ್‍ಗಳು ಇಲ್ಲಿ ಲಭ್ಯವಿವೆ.

English summary
Artisans Bazaar, and exhibition organised by Chittara has brought together artisans from across the country with art, craft, handloom and lifestyle products. The exhibition is on from January 25 to February 3 from 11 am to 7.30 pm at Chitrakala Pasrishath on Kumara Krupa Road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X