• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನಲ್ಲೇ ತೆರೆದುಕೊಂಡ ಕ್ರಿಸ್ ಮಸ್ ಆಚರಣೆಯ 'ಹೊಸಲೋಕ'!

|
Google Oneindia Kannada News

ಬೆಂಗಳೂರು, ಡಿಸೆಂಬರ್.06: ಬೆಂಗಳೂರು ಅಂದರೆ ಹಾಗೆ. ಇದೊಂದು ರಂಗಿನ ಲೋಕ. ಇಲ್ಲಿ ಎಲ್ಲ ಅಭಿರುಚಿಯ ಜನರು ಇದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಎಲ್ಲ ಹಬ್ಬಗಳನ್ನೂ ಅದ್ಧೂರಿಯಾಗಿ ವಿಜೃಂಭಣೆಯಿಂದ ಆಚರಿಸುತ್ತಾರೆ.

ಇನ್ನು, ಡಿಸೆಂಬರ್ ತಿಂಗಳು ಎಂದರೆ ಮೊದಲಿಗೆ ನೆನಪಿಗೆ ಬರುವುದೇ ಕ್ರಿಸ್ ಮಸ್ ಹಬ್ಬ. ಈ ಹಬ್ಬ ಕೇವಲ ನಮ್ಮ ದೇಶವಷ್ಟೇ ಅಲ್ಲ, ವಿಶ್ವದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದರ ಮಧ್ಯೆ ಕ್ರಿಸ್ ಮಸ್ ಆಚರಣೆಗಾಗಿ ಬೆಂಗಳೂರಿನಲ್ಲಿ ಹೊಸ ಪ್ರಪಂಚವೇ ತೆರೆದುಕೊಂಡಿದೆ.

ಚಿತ್ರಕಲಾ ಪರಿಷತ್ತಿನಲ್ಲಿ ನ. 30 ರಂದು ಚೈನೀಸ್‌ ಲಯನ್‌ ಡ್ಯಾನ್ಸ್‌ ಚಿತ್ರಕಲಾ ಪರಿಷತ್ತಿನಲ್ಲಿ ನ. 30 ರಂದು ಚೈನೀಸ್‌ ಲಯನ್‌ ಡ್ಯಾನ್ಸ್‌

ಕ್ರಿಸ್ ಮಸ್ ಪ್ರಯುಕ್ತ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಆರ್ಟಿ ಜಾನ್ ಬಜಾರ್ ಪ್ರದರ್ಶನವನ್ನು ಉದ್ಘಾಟನೆ ಮಾಡಲಾಯಿತು. ಡಿಸೆಂಬರ್.06 ರಿಂದ ಡಿಸೆಂಬರ್.16ರವರೆಗೆ 10 ದಿನಗಳ ಕಾಲ ಪ್ರದರ್ಶನ ನಡೆಯಲಿದೆ.

ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ನಡೆಯಲಿರುವ ಆರ್ಟಿ ಜಾನ್ ಬಜಾರ್ ಪ್ರದರ್ಶನದಲ್ಲಿ ಕ್ರಿಸ್ ಮಸ್ ಹಬ್ಬಕ್ಕೆ ಮತ್ತಷ್ಟು ರಂಗು ತುಂಬುವಂತಾ ವಸ್ತುಗಳನ್ನು ಮಾರಾಟಕ್ಕೆ ಇರಿಸಲಾಗಿದೆ. ಈ ಪ್ರದರ್ಶನದಲ್ಲಿ ಮಣ್ಣಿನ ದೀಪ, ಹಿತ್ತಾಳೆ ದೀಪ, ಲಕ್ಷ್ಮಿ ದೀಪ, ಗಜರಾಜ ದೀಪ, ಹೀಗೆ ಹತ್ತು ಹಲವಾರು ಬಗೆಯ ದೀಪಗಳನ್ನು ಮಾರಾಟಕ್ಕೂ ಇರಿಸಲಾಗಿತ್ತು. ದೇಶದ ಎಲ್ಲಾ ಭಾಗದ ಕರಕುಶಲ ಕರ್ಮಿಗಳು ತಯಾರಿಸಿದ ವಿಭಿನ್ನ ಬಗೆಯ ದೀಪಗಳನ್ನು ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತಿದೆ.

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಚಳಿಗಾಲದ ಶಾಪಿಂಗ್‌ ಮೇಳ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಚಳಿಗಾಲದ ಶಾಪಿಂಗ್‌ ಮೇಳ

ಈ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಪ್ರಮುಖ ಆಕರ್ಷಣೆಯೇ ತಹರೇವಾರಿ ದೀಪಗಳು. ಒಂದೇ ವೇದಿಕೆಯಲ್ಲಿ ವಿಭಿನ್ನ ರೀತಿಯ ತಹರೇವಾರಿ ದೀಪಗಳನ್ನು ಖರೀದಿಸಬಹುದು. ಇದರ ಜೊತೆಗೆ ಹಬ್ಬಕ್ಕೆ ಬೇಕಾಗಿರುವ ಎಲ್ಲ ರೀತಿಯ ಸಾಮಗ್ರಿಗಳನ್ನು ಕೊಂಡುಕೊಳ್ಳಬಹುದು. ಅಲಂಕಾರಿಕ ವಸ್ತುಗಳ ಜೊತೆ ಬಟ್ಟೆ ಹಾಗೂ ಇನ್ನಿತರ ವಸ್ತುಗಳನ್ನು ಖರೀದಿಸಬಹುದು.

ಮಣ್ಣು, ಕಲ್ಲು, ಮರಗಳಿಂದ ತಯಾರಿಸಿದ ವಿಭಿನ್ನ ವಸ್ತುಗಳೇ ಮುಖ್ಯ ಆಕರ್ಷಣೆಯಾಗಿದ್ದವು. 100ಕ್ಕೂ ಹೆಚ್ಚು ಅಂಗಡಿಗಳಿದ್ದು, ದೇಶದ ಎಲ್ಲ ಭಾಗಗಳಿಂದ ಆಗಮಿಸಿದ ಕಲಾಕಾರರು ತಮ್ಮ ಕಲೆಯನ್ನು ಪ್ರದರ್ಶಿಸಲಿದ್ದಾರೆ.

English summary
The Special Arti-jan Bazaar Exhibition In Karnataka Chitrakala Parishat For Christmas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X