ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀರಿನ ಸಮಸ್ಯೆ, ಆರ್ಟ್ ಆಫ್ ಲಿವಿಂಗ್‌ನಿಂದ ಸಮಾವೇಶ

|
Google Oneindia Kannada News

ಬೆಂಗಳೂರು, ಡಿಸೆಂಬರ್ 03 : ದೇಶವನ್ನು ಕಾಡುತ್ತಿರುವ ತೀವ್ರ ನೀರಿನ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಲು 'ಆರ್ಟ್ ಆಫ್ ಲಿವಿಂಗ್' ಸಂಸ್ಥೆಯು ಮಾಡುತ್ತಿರುವ ಯತ್ನದ ಒಂದು ಅಂಗವಾಗಿ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ.

ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಕೇಂದ್ರದಲ್ಲಿ ಡಿಸೆಂಬರ್ 5 ಮತ್ತು 6ರಂದು 'ನದಿಗಳ ಪುನಶ್ಚೇತನದ ಸಮಾವೇಶವನ್ನು' ಆಯೋಜನೆ ಮಾಡಲಾಗಿದೆ. ಇಂಟರ್ ನ್ಯಾಷನಲ್ ಅಸೋಷಿಯೇಶನ್ ಫಾರ್ ಹ್ಯೂಮನ್ ವಾಲ್ಯೂಸ್ ಜೊತೆ ಜಂಟಿಯಾಗಿ ಈ ಸಮಾವೇಶ ಆಯೋಜನೆ ಮಾಡಲಾಗಿದೆ.

ಶ್ರೀ ರವಿಶಂಕರ್ ಭೇಟಿಯಿಂದ ಬಗೆಹರಿಯುತ್ತಾ ಅಯೋಧ್ಯಾ ವಿವಾದ?ಶ್ರೀ ರವಿಶಂಕರ್ ಭೇಟಿಯಿಂದ ಬಗೆಹರಿಯುತ್ತಾ ಅಯೋಧ್ಯಾ ವಿವಾದ?

Art of living to host river rejuvenation conference on Dec 5 and 6

ಕಳೆದ 4 ದಶಕಗಳಲ್ಲೆ ಇರದಷ್ಟು ತೀವ್ರವಾಗಿರುವ ನೀರಿನ ಸಮಸ್ಯೆಯನ್ನು ನೀಗಿಸಲು ವೈಜ್ಞಾನಿಕವಾದ ಮತ್ತು ಸುಸ್ಥಿರವಾದ ದಾರಿಗಳನ್ನು ಕಂಡುಕೊಳ್ಳುತ್ತಿರುವ ನಿಟ್ಟಿನಲ್ಲಿ ಇದು ಮಹತ್ವದ್ದಾಗಿದೆ. ಈ ಖಂಡದ 54% ದಷ್ಟು ಭಾಗ ನೀರಿನ ಅಭಾವದಿಂದ ಬಳಲುತ್ತಿದೆ ಮತ್ತು ಅನೇಕ ನದಿಗಳು ಇಂಗಿ ಹೋಗಿ ಧೂಳಿನ ಮಡುವಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ 2025ರಷ್ಟರಲ್ಲಿ ಇಡೀ ದೇಶವು ತೀವ್ರ ನೀರಿನ ಸಮಸ್ಯೆಯನ್ನು ಅನುಭವಿಸಲಿದೆ.

ಕಾವೇರಿ ನೀರಿನ ಸಂಪರ್ಕ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಹಾಕಿಕಾವೇರಿ ನೀರಿನ ಸಂಪರ್ಕ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ

ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರಾದ ಗುರುದೇವ್ ಶ್ರೀ ರವಿಶಂಕರರು, 'ಜೀವನದ ಆಧಾರವೇ ನೀರು. ನೀರನ್ನು ಮತ್ತು ನೀರಿನ ಮೂಲಗಳನ್ನು ಸಂರಕ್ಷಿಸುವುದೇ ಪ್ರಮುಖ ವಾಗಬೇಕು. ಇಡೀ ದೇಶಗಳಲ್ಲಿ ನೀರಿನ ದೇಹಗಳನ್ನು, ಮೂಲವನ್ನು ಪರಿಸರ ಸ್ನೇಹಿ ರೀತಿಗಳಿಂದ ಸಂರಕ್ಷಿಸುವ ರೀತಿಗಳನ್ನು ಈ ಸಮಾವೇಶ ರೂಪಿಸಲಿದೆ' ಎಂದು ಹೇಳಿದರು.

ಮಂಡ್ಯ: ಭಾರೀ ಮಳೆಗೆ ತುಂಬಿ ಹರಿಯುತ್ತಿರುವ ಕೆರೆಕಟ್ಟೆಗಳುಮಂಡ್ಯ: ಭಾರೀ ಮಳೆಗೆ ತುಂಬಿ ಹರಿಯುತ್ತಿರುವ ಕೆರೆಕಟ್ಟೆಗಳು

ಎರಡು ದಿವಸಗಳ ಈ ಸಮಾವೇಶದಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಜ್ಞಾನಿಗಳು, ತಜ್ಞರು, ಭಾಗೀದಾರರು, ನಿಯಮರೂಪಕರು ಭಾಗವಹಿಸಲಿದ್ದು, ಈಗಿರುವ ಜಲಸಂಪನ್ಮೂಲಗಳ ಸಂರಕ್ಷಣೆ, ನೀರಿನ ಸೌಲಭ್ಯಗಳ ಸುಸ್ಥಿರವಾದ ಸಂರಕ್ಷಣೆಗಾಗಿ ನಕ್ಷೆವನ್ನು ರೂಪಿಸುವುದರೊಡನೆ, ಇದುವರೆಗೂ ಚಾಲ್ತಿಯಲ್ಲಿರುವ ನದಿ ಪುನಶ್ಚೇತನ ಮಾದರಿಗಳ ಆರ್ಥಿಕ-ಸಾಮಾಜಿಕ ಪ್ರಭಾವದ ಬಗ್ಗೆಯೂ ಚರ್ಚಿಸಲಿದ್ದಾರೆ.

2013ರಿಂದಲೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ನದಿಗಳ ಪುನಶ್ಚೇತನಕ್ಕಾಗಿ ಶ್ರಮಿಸುತ್ತಿದ್ದು, ಇದುವರೆಗೂ ಮರಣಶಯ್ಯೆಯಲ್ಲಿರುವ ನಾಲ್ಕು ರಾಜ್ಯಗಳ (ಮಹಾರಾಷ್ಟ್ರ, ಕರ್ನಾಟಕ, ತಮಿಳು ನಾಡು ಮತ್ತು ಕೇರಳದ) 33 ನದಿಗಳ ಪುನಶ್ಚೇತನ ಕಾರ್ಯದಲ್ಲಿ ತೊಡಗಿದೆ. 3,000ಹಳ್ಳಿಗಳಿಗೆ ಇದರಿಂದ ಲಾಭವಾಗಿದೆ. ನೀರಿಗಾಗಿ ನಡೆಸುತ್ತಿರುವ ಕಾರ್ಯಕ್ಕೆ ಈ ಸಮಾವೇಶವು ಮತ್ತಷ್ಟು ಪುಷ್ಟಿ ನೀಡಲಿದೆ.

English summary
As part of the ongoing efforts to bring about a long-lasting and inclusive solution to the country's water problems, the Art of Living is hosting a conference on “River Rejuvenation” on 5th and 6th December at its center in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X