ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಿಲಿಟರಿಯಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ: ಇಬ್ಬರ ಬಂಧನ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 11: ಸೇನೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ಲಕ್ಷಾಂತರ ಹಣ ಪಡೆದು ನಕಲಿ ಅಪಾಯಿಂಟ್‌ಮೆಂಟ್‌ ಆರ್ಡರ್ ನೀಡುತ್ತಿದ್ದ ವಂಚಕರನ್ನು ಬೆಂಗಳೂರು ಪೊಲೀಸರು ಸೆರೆ ಹಿಡಿದಿದ್ದಾರೆ.

ಭಾರತೀಯ ಸೇನೆಯಲ್ಲಿ ಉದ್ಯೋಗ ಕೊಡಿಸುತ್ತೇವೆ ಎಂದು ಯಾರಾದರೂ ಹೇಳಿದರೆ ಖಂಡಿತ ಅದು ಸುಳ್ಳು ನಂಬಬೇಡಿ, ನಿಮ್ಮ ಸ್ವಂತ ಬಲವನ್ನು ಪ್ರದರ್ಶಿಸಿ ಸೇನೆಗೆ ಸೇರಿಕೊಳ್ಳಿ.

ಬೆಸ್ಕಾಂನಿಂದ 317 ರುಪಾಯಿ ವಾಪಸ್ ಪಡೆಯಲು 16 ಸಾವಿರ ಕಳ್ಕೊಂಡ ಮಹಿಳೆ ಬೆಸ್ಕಾಂನಿಂದ 317 ರುಪಾಯಿ ವಾಪಸ್ ಪಡೆಯಲು 16 ಸಾವಿರ ಕಳ್ಕೊಂಡ ಮಹಿಳೆ

ಇಂತಹ ಒಂದು ತಂಡವನ್ನು ಬೆಂಗಳೂರು ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೇನೆಯಲ್ಲಿ ಉದ್ಯೋಗ ಕೊಡಿಸುತ್ತೇವೆ ಎಂದು ಹೇಳಿ ವಂಚನೆ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಪ್ರತಿ ಅಭ್ಯರ್ಥಿಯಿಂದ ಎರಡು ಲಕ್ಷ ಬೇಡಿಕೆ ಇಡುತ್ತಿದ್ದ ವಂಚಕರು ಮೊದಲ ಹಂತದಲ್ಲಿ 40 ಸಾವಿರ ರೂ ಪಡೆದು ನಕಲಿ ಅಪಾಯಿಂಟ್‌ಮೆಂಟ್‌ ಆರ್ಡರ್‌ ನೀಡುತ್ತಿದ್ದರು.

Army recruitment fraud: Two arrested

ಆರೋಪಿಗಳಾದ ಕೃಷ್ಣರಾಜನ್‌, ಜ್ಯೋತಿಲಕ್ಷ್ಮಿ, ಸುಜಾತ, ಮೆಹಬೂಬ್‌ಬಾಷ ವಿರುದ್ಧ ಪ್ರಕರಣ ದಾಖಲಾಗಿತ್ತು. ಇವರಲ್ಲಿ ಕೃಷ್ಣರಾಜನ್‌ ಮತ್ತು ಸುಜಾತರನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ. ಊಟಿ ಇನ್ನಿತರೆ ಪ್ರದೇಶಗಳಿಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸುತ್ತಿದ್ದರು ಎಂದು ದೀಪು ಶಂಕರ ಅವರು ಹೆಬ್ಬಾಳ ಪೊಲೀಸರಿಗೆ ದೂರು ನೀಡಿದ್ದರು.

ಅಂತರ ಜಿಲ್ಲಾ ದೇವಸ್ಥಾನ ಕಳವು ಜಾಲ ಬೇಧಿಸಿದ ಮಂಗಳೂರು ಪೊಲೀಸರು ಅಂತರ ಜಿಲ್ಲಾ ದೇವಸ್ಥಾನ ಕಳವು ಜಾಲ ಬೇಧಿಸಿದ ಮಂಗಳೂರು ಪೊಲೀಸರು

ವಂಚಕರು ಹಲವರಿಗೆ ಈ ರೀತಿ ಮೋಸ ಮಾಡಿರುವುದಾಗಿ ಅವರು ತಿಳಿಸಿದ್ದರು. ಸುಜಾತ ಎಂಬಾಕೆ ಈ ಹಿಂದೆಯೂ ಕೆಲಸ ಕೊಡಿಸುವುದಾಗಿ ವಂಚಿಸಿರುವ ಸಂಬಂಧ ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಇಬ್ಬರು ವಂಚಕರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

English summary
Two fraudulent army recruitment agents were arrested in Bengaluru by Hebbal police, who cheated many youths collecting Rs. 2lakhs from each candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X