ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರ್ಕಾವತಿ ಬಡಾವಣೆಗೆ ಇನ್ನು ಮೂರು ತಿಂಗಳಲ್ಲಿ ವಿದ್ಯುತ್ ಸಂಪರ್ಕ!

|
Google Oneindia Kannada News

ಬೆಂಗಳೂರು, ಏಪ್ರಿಲ್ 02: ಅರ್ಕಾವತಿ ಬಡಾವಣೆಗೆ ಚುನಾವಣೆ ಆರಂಭದಲ್ಲಿ ಕಾಯಕಲ್ಪದ ಭಾಗ್ಯ ದೊರೆತಿದೆ. ಕಾನೂನು ತೊಡಕಿನಿಂದಾಗಿ ನೆನಗುದಿಗೆ ಬಿದ್ದದ್ದ ಅರ್ಕಾವತಿ ಬಡಾವಣೆಗೆ ಮರುಜೀವ ಬಂದಂತಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಬಡಾವಣೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಟೆಂಡರ್ ಕರೆದಿದ್ದ ಬಿಡಿಎ, ಇದೀಗ ಕಾಮಗಾರಿ ಆರಂಭಿಸಿದೆ. ಅಭಿವೃದ್ಧಿ ಕಾಮಗಾರಿ ಭಾಗವಾಗಿ ಮುಂದಿನ 3 ತಿಂಗಳೊಳಗಾಗಿ ಸಂಪೂರ್ಣ ವಿದ್ಯುತ್ ಸಂಪರ್ಕ ವ್ಯವಸ್ಥೆ ಮಾಡಲಿದೆ. ಈ ಸಂಬಂಧ ವಿದ್ಯುತ್ ತಂತಿ, ಕಂಬ ಇತ್ಯಾದಿ ಕಾಮಗಾರಿಗಳಿಗೆ ಚಾಲನೆ ದೊರೆತಿದೆ.

ಕೆಂಪೇಗೌಡ ಬಡಾವಣೆಯಲ್ಲಿ ಬಿಡಿಎಯಿಂದ ನಿವೇಶನ ಹಂಚಿಕೆ ಕೆಂಪೇಗೌಡ ಬಡಾವಣೆಯಲ್ಲಿ ಬಿಡಿಎಯಿಂದ ನಿವೇಶನ ಹಂಚಿಕೆ

ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಬಂಧ ಅಗತ್ಯ ಸಾಮಗ್ರಿಗಳನ್ನು ಪೂರೈಸಲಾಗುತ್ತಿದ್ದು, ಕಾಮಗಾರಿಗಾಗಿ ಖಾಸಗಿ ಸಂಸ್ಥೆ ಜತೆ 221 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದೆ. ಚುನಾವಣಾ ನೀತಿ ಸಂಹಿತೆ ಜಾರಿ ಮುನ್ನವೇ ಕಾಮಗಾರಿ ಆರಂಭಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Arkavati layout will get electrification in 3months

ಬಡಾವಣೆಯಲ್ಲಿ ಬರುವ ಪ್ರದೇಶಗಳು: ಬಳ್ಳಾರಿ ರಸ್ತೆ, ಓಲ್ಡ್ ಮದ್ರಾಸ್ ರಸ್ತೆಯ ಜಕ್ಕೂರು, ರಾಜನಹಳ್ಳಿ, ಸಂಪಿಗೆ ಹಳ್ಳಿ, ಥಣಿಸಂದ್ರ, ಹೆಣ್ಣೂರು, ಕೆ.ನಾರಾಯಣಪುರ ಹಾಗೂ ಬೈರತಿ ಕಾರ್ಖಾನೆ ಸೇರಿ 13ಗ್ರಾಮಗಳು ಅರ್ಕಾವತಿ ಬಡಾವಣೆ ವ್ಯಾಪ್ತಿಗೆ ಬರಲಿವೆ.

English summary
After many protests finally BDA decides to give electric facilities to Arkavati layout. According to officers it will be done by 3 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X