ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮುದ್ವತಿ, ಅರ್ಕಾವತಿ ನದಿಗಳಿಗೆ ಬಫರ್ ಜೋನ್ ನಿಗದಿ

|
Google Oneindia Kannada News

ಬೆಂಗಳೂರು, ಜುಲೈ 24: ಕುಮುದ್ವತಿ ಹಾಗೂ ಅರ್ಕಾವತಿ ನದಿಗೆ ಬಫರ್ ಜೋನ್ ನಿಗದಿಪಡಿಸಲಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ , ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಎಲ್ಲಾ ನಗರ ಯೋಜನಾ ಪ್ರಾಧಿಕಾರಗಳು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚನೆ ನೀಡಿದೆ.

ಜೊತೆಗೆ ಬೆಂಗಳೂರು ಮಹಾನಗರ ಪ್ರದೇಶ ಪರಿಷ್ಕೃತ ರಚನಾ ನಕ್ಷೆ 2031ರಲ್ಲಿ ನಗರಾಭಿವೃದ್ಧಿ ಇಲಾಖೆಯ ನಿಯಮಾವಳಿಗಳನ್ನು ಅಳವಡಿಕೆ ಮಾಡಿಕೊಳ್ಳುವಂತೆ ಆದೇಶಿಸಿದೆ.

ದುಬಾರೆಯಲ್ಲಿ ಪ್ರವಾಸಿಗರಿಂದ ರಿವರ್ ರ್‍ಯಾಫ್ಟಿಂಗ್ ಸಾಹಸದುಬಾರೆಯಲ್ಲಿ ಪ್ರವಾಸಿಗರಿಂದ ರಿವರ್ ರ್‍ಯಾಫ್ಟಿಂಗ್ ಸಾಹಸ

ತಿಪ್ಪಗೊಂಡನಹಳ್ಳಿ ಜಲಾಶಯ ಹಾಗೂ ಜಲಾನಯನ ಪ್ರದೇಶದಲ್ಲಿ ಬರುವ ಅರ್ಕಾವತಿ ಮತ್ತು ಕುಮದ್ವತಿ ನದಿ ವ್ಯಾಪ್ತಿಗೆ ಬಫರ್ ಜೋನ್ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

Arkavati and kumadwati rivers buffer zone finalized

ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶ ಸಂರಕ್ಷಣೆಗಾಗಿ 2003ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಮುಂದುವರೆಸುವ ಕುರಿತು ಹೈಕೋರ್ಟ್ ಸ್ಪಷ್ಟನೆ ಕೇಳಿದ ಹಿನ್ನೆಲೆಯಲ್ಲಿ ಜೂನ್ 26 ರಂದು ನಡೆದ ಸಂಪುಟ ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ, ಬಫರ್ ಜೋನ್ ನಿಗದಿಪಡಿಸಿ ಕ್ಮಕೈಗೊಳ್ಳುವಂತೆ ನಿರ್ಣಯ ತೆಗೆದುಕೊಳ್ಳಲಾಗಿತ್ತು.

ನಗರಾಭಿವೃದ್ಧಿ ಇಲಾಖೆ 2003ರಲ್ಲಿ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಹೊರಡಿಸಿದ್ದ ಆದೇಶದಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದ ಪ್ರಥಮ ಮತ್ತು ದ್ವಿತೀಯ ವಲಯದ ವ್ಯಾಪ್ತಿ ಪ್ರದೇಶದಲ್ಲಿ ಅಂತರ್ಜಲ ಕಲುಷಿತಗೊಳ್ಳದಂತೆ ಕಾಪಾಡುವುದು, ಮೀನುಗಾರಿಕೆ, ಗಣಿಗಾರಿಕೆ ಅವಕಾಶ ನೀಡುವಂತಿಲ್ಲ.

ಜಲಾಶಯದ ವ್ಯಾಪ್ತಿಯಲ್ಲಿ ತ್ಯಾಜ್ಯ ಸುರಿಯುವಂತಿಲ್ಲ, ತ್ಯಾಜ್ಯ ನೀರನ್ನು ಸಂಸ್ಕರಿಸದೇ ಬಿಡುವಂತಿಲ್ಲ ಹಾಗೂ ನಿರ್ಮಾಗೊಳ್ಳುವ ನೂತನ ಕಟ್ಟಡದಲ್ಲಿ ಕಡ್ಡಾಯವಾಗಿ ಮಳೆ ನೀರು ಸಂಗ್ರಹಣೆ ವ್ಯವಸ್ಥೆ ಕೈಗೊಳ್ಳಬೇಕು. ಸಾವಯವ, ರಾಸಾಯನಿಕ ಗೊಬ್ಬರ ಮತ್ತು ಔಷಧಿಯೇತರ ಕೃಷಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಲಾಗಿದೆ.

ಕೆರೆಯ ತುದಿಯಿಂದ 30 ಮೀಟರ್ ಪ್ರಾಥಮಿಕ ನೈಸರ್ಗಿಕ ರಾಜಕಾಲುವೆ ಅಂಚಿನಿಂದ 30 ಮೀಟರ್, ದ್ವಿತೀಯ ದರ್ಜೆ ಕಾಲುವೆಯ ತುದಿಯಿಂದ 15 ಮೀಟರ್, ತೃತೀಯ ದರ್ಜೆಯ ಕಾಲುಎಯ ತುದಿಯಿಂದ 10 ಮೀಟರ್ ಬಫರ್ ಜೋನ್ ಇರಬೇಕು ಎಂದು ನಿಗದಿಪಡಿಸಿ ಆದೇಶ ಹೊರಡಿಸಿದೆ.

English summary
State government finalised the bigger zone of Arkavati and Kumadwati river belt,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X