ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರ್ಕಾವತಿ ಫೈಟ್ : ಸರ್ಕಾರದಿಂದ 1 ಲಕ್ಷ ಪುಟಗಳ ದಾಖಲೆ ಸಲ್ಲಿಕೆ

|
Google Oneindia Kannada News

ಬೆಂಗಳೂರು, ಫೆ.9 : ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್‌ಗೆ ಸಂಬಂಧಿಸಿದಂತೆ ಪ್ರತಿಕ್ಷಗಳು ದಾಖಲೆ ಬಿಡುಗಡೆ ಮಾಡುತ್ತಿವೆ. ಇತ್ತ ರಾಜ್ಯ ಸರ್ಕಾರ ಇಂದು ಡಿನೋಟಿಫಿಕೇಶನ್‌ ಕುರಿತ ಒಂದೂವರೆ ಲಕ್ಷ ಪುಟದ ದಾಖಲೆಯನ್ನು ನ್ಯಾಯಮೂರ್ತಿ ಕೆಂಪಣ್ಣ ಅವರ ವಿಚಾರಣಾ ಆಯೋಗಕ್ಕೆ ಸಲ್ಲಿಕೆ ಮಾಡಲಿದೆ.

ಭಾನುವಾರ ನವದೆಹಲಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಮಾಹಿತಿ ನೀಡಿದ್ದು, ಸೋಮವಾರ ದಾಖಲೆಗಳನ್ನು ಸಲ್ಲಿಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿನ ಪ್ರತಿಪಕ್ಷಗಳು ಅನಾರೋಗ್ಯದಿಂದ ಬಳಲುತ್ತಿವೆ. ಸರ್ಕಾರದ ಉತ್ತಮ ಕೆಲಸವನ್ನು ಸಹಿಸಲಾಗದೆ ಅರ್ಕಾವತಿ ಹಗರಣದ ಕತೆ ಕಟ್ಟುತ್ತಿವೆ ಎಂದು ಆರೋಪಿಸಿದ್ದಾರೆ.

Arkavathy

ಅರ್ಕಾವತಿ ಡಿನೋಟಿಫಿಕೇಷನ್ ಹಗರಣಗಳು ನಡೆದಿರುವುದು ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ ಅವರು, ಕುಮಾರಸ್ವಾಮಿ ಬರೆದಿರುವ ಪುಸ್ತಕದಲ್ಲಿ ಹುಳಿ ಉಪ್ಪು ಖಾರ ಯಾವುದೂ ಇಲ್ಲ ಎಂದು ಲೇವಡಿ ಮಾಡಿದರು. [ಅರ್ಕಾವತಿ ಹಗರಣದಲ್ಲಿ ಸಿಂಗ್ ಪಾಲಿದೆ]

ಬರಲಿಗೆ ಮತ್ತೊಂದು ಅರ್ಕಾವತಿ ಪುಸ್ತಕ : ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್‌ಗೆ ಸಂಬಂಧಿಸಿದಂತೆ ಎಚ್.ಡಿ.ಕುಮಾರಸ್ವಾಮಿ 490 ಪುಟಗಳ ಪುಸ್ತಕವನ್ನು ಈಗಾಗಲೇ ಬಿಡುಗಡೆ ಮಾಡಿದ್ದಾರೆ. ಸದ್ಯ, ಕಾಂಗ್ರೆಸ್ ಸಹ ಕಿರು ಪುಸ್ತಕವನ್ನು ಹೊರತರಲಿದೆ. [ಅರ್ಕಾವತಿ ಕರ್ಮಕಾಂಡ : ಕುಮಾರಸ್ವಾಮಿ ಪುಸ್ತಕದಲ್ಲೇನಿದೆ?]

ಬಿಜೆಪಿ ಮತ್ತು ಜೆಡಿಎಸ್ ಅರ್ಕಾವತಿ ಹಗರಣಕ್ಕೆ ಸಂಬಂಧಿಸಿದಂತೆ ಜನರನ್ನು ತಪ್ಪುದಾರಿಗೆ ಎಳೆಯುತ್ತಿವೆ. ಸುಳ್ಳು ದಾಖಲೆಗಳನ್ನು ಬಿಡುಗಡೆ ಮಾಡಿದ ಅದನ್ನು ಸತ್ಯವೆಂದು ಬಿಂಬಿಸಲು ಪ್ರಯತ್ನಿಸುತ್ತಿವೆ. ಆದ್ದರಿಂದ ವಾಸ್ತವಾಂಶಗಳನ್ನು ಒಳಗೊಂಡ ಕಿರು ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತದೆ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಸಿ.ಎಂ.ಧನಂಜಯ ಹೇಳಿದ್ದಾರೆ.

ಹಗರಣದ ತನಿಖೆಗೆ ನ್ಯಾ.ಕೆಂಪಣ್ಣ ಆಯೋಗವನ್ನು ಸರ್ಕಾರ ರಚನೆ ಮಾಡಿದೆ. ಅಲ್ಲಿಗೆ ದಾಖಲಾತಿಗಳನ್ನು ನೀಡುವ ಬದಲು ಪ್ರತಿಪಕ್ಷಗಳು ಹೇಳಿಕೆ ನೀಡುತ್ತಿವೆ. ಮಾಜಿ ಸಿಎಂ ಕುಮಾರಸ್ವಾಮಿ ದಿನಕ್ಕೊಂದು ಹೇಳಿಕೆ ನೀಡಿ ಜನರಲ್ಲಿ ಗೊಂದಲ ಉಂಟುಮಾಡುತ್ತಿದ್ದಾರೆ ಎಂದು ಧನಂಜಯ ಅವರು ಆರೋಪಿಸಿದ್ದಾರೆ.

English summary
Karnataka Chief Minister Siddaramaiah said, all documents related to Arkavathi Layout land issue would be submitted to Justice Kempanna Commission on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X