• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಗ/ಮಗಳು ವೈದ್ಯರಾಗಬೇಕಾ? ಹಂ... ವಿಚಾರ ಮಾಡಿ!

By ಮಾಲತಿ ಎ.
|

ನಮ್ಮ ದೇಶದಲ್ಲಿ ಜನರಿಗೆ ವೈದ್ಯರೆಂದರೆ ಎಲ್ಲಿಲ್ಲದ ಗೌರವ. ಹೇಗೆಂದರೆ ವೈದ್ಯರೆಂದರೆ ದೊಡ್ಡ ಮನೆಯಿರಬೇಕು, ದೊಡ್ದ ಕಾರ್ ಇರಬೇಕು, ಚೆನ್ನಾಗಿ ಖರ್ಚು ಮಾಡಬೇಕು... ಆದ್ರೆ ಚಿಕಿತ್ಸೆಗಾಗಿ ಬಂದ ರೋಗಿ ಹತ್ರ ದುಡ್ಡು ಮಾತ್ರ ತಗೋಬಾರ್ದು! ಬೇರೆ ಯಾವುದೇ ವೃತ್ತಿಪರರೂ ಮಾಡದ ಗ್ರಾಮೀಣ ಸೇವೆಯನ್ನು ವೈದ್ಯರು ಮಾತ್ರ ಮಾಡಬೇಕು. ದುಡ್ಡು ಮಾತ್ರ ಆಶಿಸಬಾರ್ದು.

ಒಮ್ಮೆ ನಮ್ಮ ಜನ ಅನ್ಕೊಳ್ಳೋ ರೀತಿ ವೈದ್ಯ ಆಗ್ಬೇಕು ಅಂದ್ರೆ ಯಾವ್ ರೀತಿ ಅಂತ ನೋಡೋಣ:

ವಯಸ್ಸು : 18

ಪಿ. ಯು.ಸಿ., ಸಿ.ಇ.ಟಿ. ಎರಡರಲ್ಲೂ ಅತ್ಯುತ್ತಮ ದರ್ಜೆಯಲ್ಲಿ, ಮೊದಲ್ನೇ ಕೆಲವು ಶ್ರೇಯಾಂಕ ತಗೊಂಡ ಕೆಲವೇ ಕೆಲವು ಮೂರ್ಖರಲ್ಲಿ ಒಬ್ಬರಾದ, ಬೇರೆ ಯಾವುದೇ ವೃತ್ತಿಯನ್ನ ಆರಿಸಿಕೊಳ್ಳೋಕೆ ಸಮರ್ಥರಾದ ಹುಡುಗ/ಹುಡುಗಿ, ಮನೆಯವರ ಒತ್ತಾಯ, ಪ್ರೆಸ್ಟೀಜ್ ಗಳಿಗೋಸ್ಕರ MBBS ಆರಿಸಿಕೊಳ್ತಾರೆ. ತುಂಬಾ ಕೆಲವು ಮಂದಿ ಮಾತ್ರ ನಾನು ವೈದ್ಯನಾಗಬೇಕೆಂಬ ಹಂಬಲದಿಂದ ಆರಿಸ್ಕೋತಾರೆ. ನಂತರ? [ವೈದ್ಯರಿಗೆ ಥ್ಯಾಂಕ್ಸ್ ಹೇಳಿದ ಟ್ವೀಟ್ ಲೋಕ]

ಸೇರುವ ಕಾಲೇಜಿನ ಶುಲ್ಕ :

ಸರಕಾರೀ ಕೋಟಾದಡಿಯಾದರೆ : ರು. 55,000 x 5 ವರ್ಷ = ರು. 2,75,000

ಕಾಮೆಡ್- ಕೆ ಕೋಟಾದಡಿಯಾದರೆ : ರು. 345,000 x 5 ವರ್ಷ ರು. 1,725,000

ಮ್ಯಾನೇಜ್ಮೆಂಟ್ ಕೋಟಾದಡಿಯಾದರೆ ರು. 80 ಲಕ್ಷ - 1 ಕೋಟಿ

ಇಷ್ಟು ಕೊಟ್ಟ ನಂತರ ಐದೂವರೆ ವರ್ಷಗಳು ಓದಿ, ಎಲ್ಲಾ ವರ್ಷಗಳೂ ಪಾಸಾದ್ರೆ, 1 ವರ್ಷ ಇಂಟರ್ನ್‌ಶಿಪ್, ಮತ್ತೊಂದ್ ವರ್ಷ ಕಡ್ಡಾಯ ಗ್ರಾಮೀಣ ಸೇವೆ ಮುಗಿಸಿದರೆ ಇವರನ್ನು ವೈದ್ಯ ಅಂತ ಕರೀತಾರೆ. ಹಲವಾರು ನಿಬಂಧನೆಗಳನ್ನು ತಿಳಿಸಿ ನೀವಿನ್ನು ಟ್ರೀಟ್ಮೆಂಟ್ ಕೊಡಬಹುದು ಅಂತ ಹೇಳ್ತಾರೆ.

ವಯಸ್ಸು : 25

ಈ ಹಂತದಲ್ಲಿ ಕೆಲಸ ಮಾಡ್ಲಿಕ್ಕೆ ಹೋದ್ರೆ ಸಿಗೋ ಸಂಬಳ:

ಖಾಸಗಿ ಆಸ್ಪತ್ರೆ - ರು. 18,000-25,000

ಸರಕಾರೀ ಸೇವೆ ನಗರದಲ್ಲಿ - ರು. 35,000

ಗ್ರಾಮೀಣ - ರು. 60,000

ಅಲ್ಲಿಗೆ ಮುಗೀತಾ? ಯಾರಾದ್ರೂ ನಿಮ್ಹತ್ರ ನಾನು ಡಾಕ್ಟ್ರು ಅಂದ್ ಕೂಡ್ಲೇ ಏನಂತೀರಿ? ಯಾವ್ ಡಾಕ್ಟ್ರು? ಕಣ್ಣಿಗಾ? ಕಿವಿಗಾ? ಮೂಳೆಗಾ? ಏನ್ ನಿಮ್ ಸ್ಪೆಷಲೈಸೆಷನ್ನು? ಅಂತ ಕೇಳ್ತೀರ. ಅಲ್ಲಿಗೆ ಮುಂದೆ ಓದಲೇಬೇಕು ಅಂತಾಯ್ತು. 1 - 5 ವರ್ಷ ಸ್ನಾತಕೋತ್ತರ ಸಿಇಟಿ ಪರೀಕ್ಷೆಗೆ ಓದಿ, 6000 ಸೀಟುಗಳಿಗೆ 1,20,000 ಜನ ಡಾಕ್ಟ್ರುಗಳು ಪರೀಕ್ಷೆ ಬರ್ದೂ ಬರ್ದೂ ಕೊನೆಗೆ ಎಲ್ಲೋ ಒಂದ್ ಕಡೆ ಸ್ಪೆಷಲೈಸೇಷನ್ ಅಂತ ತಗೊಂಡ್ರೆ...!

ವಯಸ್ಸು : 25-30

ಎಂಡಿ/ಎಂಎಸ್ - 3 ವರ್ಷ

ಸೇರುವ ಕಾಲೇಜಿನ ಶುಲ್ಕ :

ಸರಕಾರೀ ಕೋಟಾದಡಿಯಾದರೆ : ರು. 35,000 x 3 ವರ್ಷ = ರು. 105,000

ಕಾಮೆಡ್- ಕೆ ಕೋಟಾದಡಿಯಾದರೆ : ರು. 383,000 x 3 ವರ್ಷ = ರು.1,149,000

ಮ್ಯಾನೇಜ್ಮೆಂಟ್ ಕೋಟಾದಡಿಯಾದರೆ : ರು. 3 ಕೋಟಿ - ರು. 5 ಕೋಟಿ

ಮೂರು ವರ್ಷದಲ್ಲಿ ಸ್ಪೆಶಲೈಸೇಶನ್ ಮುಗಿಸಿದ್ರೆ ಮತ್ತೆ 3 ವರ್ಷ ಕಡ್ಡಾಯ ಗ್ರಾಮೀಣ ಸೇವೆ.

ವಯಸ್ಸು : 31-36 ವರ್ಷ

ಈಗ ಕೆಲಸಕ್ಕೆ ಸೇರಿದರೆ ಸಂಬಳ :

ಸರಕಾರೀ ಸೇವೆ - ರು.75,000 - 150,000

ಖಾಸಗಿ ಆಸ್ಪತ್ರೆ - ರು. 40,000 - 60,000

ಅಷ್ಟಕ್ಕೇ ನಿಲ್ಲೋದಿಲ್ಲ ನಮ್ ಓದೋ ಕಥೆ. ಸೂಪರ್ಸ್ಪೆಷಲೈಸ್ ಆಗ್ಬೇಕು ನೋಡಿ. ಮತ್ತೆ ಪಿಜಿ ಸಿಇಟಿ ಪರೀಕ್ಷೆಗೆ 1-5 ವರ್ಷ ಓದಬೇಕು. ನಮ್ ದೇಶದಲ್ಲಾದರೂ ಸರಿ ವಿದೇಶದಲ್ಲಾದರೂ ಸರಿ.

ಡಿಎಂ/ಎಂಸಿಎಚ್ - 3 ವರ್ಷ

ಇದು ಇಲ್ಲೀತನಕ ಸರಕಾರೀ ಸಂಸ್ಥೆಗಳಲ್ಲಿ ಮಾತ್ರ ಲಭ್ಯವಿದೆ. ಶುಲ್ಕ - ರು. 50,000 - 150,000 x 3 ವರ್ಷ = ರು. 150,000 - 450,000. 3 ವರ್ಷದಲ್ಲಿ ಇದೂ ಮುಗಿದರೆ ವಯಸ್ಸು 34-39 ವರ್ಷಗಳಾಗಿರುತ್ತೆ.

ಈಗ ಕೆಲಸಕ್ಕೆ ಸೇರಿದ್ರೆ ಸಂಬಳ:

ಸರಕಾರೀ ಸೇವೆ : ಎಂಡಿ/ಎಂಎಸ್ ಪಾಸಾದವರಿಗೆ ನೀಡಿದಷ್ಟೇ.

ಖಾಸಗೀ ಆಸ್ಪತ್ರೆ - ರು. 100,000

ಅಂದರೆ ಒಬ್ಬ ವ್ಯಕ್ತಿ ವೈದ್ಯನಾಗಬೇಕೆಂದರೆ 18ನೇ ವಯಸ್ಸಿನ ಅತೀ ಬುದ್ಧಿವಂತ ವ್ಯಕ್ತಿಯಾಗಿರಬೇಕು, 17ರಿಂದ-21 ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಬೇಕು. ಓದುವ ಅಷ್ಟೂ ವರ್ಷಗಳು ಎಲ್ಲರ ಕಣ್ಣಿಗೂ ಕಸದಂತೆ ಕಾಣುವ, ಊಟ-ನಿದ್ದೆಗಳಿಲ್ಲದ ಬದುಕು. ಅನಂತರವಷ್ಟೇ ಅವರ ವೃತ್ತಿ/ಸಂಪಾದನೆ 34-39 ವರ್ಷ ವಯಸ್ಸಾದಾಗ ಶುರುವಾಗುತ್ತದೆ. ಅದೂ ಚಿಲ್ರೆಯಂತಿರುವ ಸಂಬಳ. ಈಗ ಹೇಳಿ ನಿಮ್ಮ ಮಗ/ಮಗಳನ್ನು ವೈದ್ಯರಾಗಿಸಬೇಕೆಂದಿದ್ದೀರಾ? ಅವರು ವೈದ್ಯರಾಗುವುದು ಯಶಸ್ಸೋ ವೈಫಲ್ಯವೋ?

English summary
Want to make your child doctor? Think again! Malathi writes what it takes to be a doctor in India. They have to toppers in academics, pay hefty fees for studies, spend several years for specialization and then compulsorily work in rural area. Anyway, thanks to all the doctors on the occasion of World Doctor's Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X