ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ದುಬೈನ ಪ್ರಜ್ಞಾ ಅನಂತ್ ಭರತನಾಟ್ಯ ರಂಗಪ್ರವೇಶ

By Prasad
|
Google Oneindia Kannada News

ಭಾವ ರಾಗ ತಾಳಗಳ ಸಮ್ಮಿಳನದ ದೈವೀಕ ನೃತ್ಯ ಕಲೆಯೇ ಭರತನಾಟ್ಯ. ಉದಯೋನ್ಮುಖ ಕಲಾವಿದೆ ಕು. ಪ್ರಜ್ಞಾ ಅನಂತ್ ನಾಟ್ಯದ ಎಲ್ಲಾ ಸ್ತರಗಳ ಏಕವ್ಯಕ್ತಿ ಪ್ರದರ್ಶನ ನೀಡುವ ರಂಗಪ್ರವೇಶವನ್ನು ಆಗಸ್ಟ್ 04, 2018ರ ಸಂಜೆ ಬೆಂಗಳೂರಿನಲ್ಲಿ ನೆರವೇರಿಸಲಿದ್ದಾರೆ.

ಸಂಯುಕ್ತ ಅರಬ್ ಸಂಸ್ಥಾನದ ದುಬೈ ನಿವಾಸಿ ಅನಂತ್ ರಘುನಾಥ್ ಹಾಗು ಶ್ರೀಲೇಖಾ ಅನಂತ್ ಅವರ ಸುಪುತ್ರಿ ಪ್ರಜ್ಞಾ, ದುಬೈನ ಜೆಮ್ಸ್ ಫೌಂಡರ್ಸ್ ಸ್ಕೂಲ್ ನಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದು, ತನ್ನ 5ನೇ ವಯಸ್ಸಿನಿಂದ ದುಬೈಯ ಸಂಕೀರ್ಣ ನೃತ್ಯ ಶಾಲೆಯ ನಿರ್ದೇಶಕಿ, ಗುರು, ವಿದುಷಿ ಸಪ್ನಾ ಕಿರಣ್ ರಲ್ಲಿ ನೃತ್ಯಾಭ್ಯಾಸ ನಡೆಸುತ್ತಿದ್ದಾರೆ.

ದುಬೈನಲ್ಲಿ ವಿಜೃಂಭಣೆಯ ನೃತ್ಯ ಶಾಲೆ ವಾರ್ಷಿಕೋತ್ಸವ
ಸಮರ್ಥ ಗುರು ಮಾತ್ರ ಒಬ್ಬ ಪರಿಪೂರ್ಣ ಶಿಷ್ಯನನ್ನು ಬೆಳೆಸಬಲ್ಲ ಎನ್ನುವಂತೆ ನಾಟ್ಯ, ರಂಗ ನಟನೆ, ನೃತ್ಯ ನಿರ್ದೇಶನ, ಪ್ರದರ್ಶನ ಹೀಗೆ ಬಹುಮುಖ ಪ್ರತಿಭೆಗಳ ಆಗರವಾಗಿರುವ ಗುರು ಸಪ್ನಾರವರ ಗರಡಿಯಲ್ಲಿ ಚಿಗುರುತ್ತಿರುವ ಪ್ರಜ್ಞಾ, ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿದ್ದಾರೆ. ಚೆಸ್, ಅಬಾಕಸ್ ಮುಂತಾದ ಬುದ್ಧಿಮತ್ತೆಗೆ ಇಂಬು ನೀಡುವಂತಹ ಸ್ಪರ್ಧೆಗಳಲ್ಲಿ ಬಹಳಷ್ಟು ಪುರಸ್ಕಾರಗಳನ್ನು ಪಡೆದಿದ್ದಾರೆ.

Arangetram by Prajna Ananth, dancer from Dubai in Bengaluru

ಈಗಾಗಲೇ ವಿದೇಶದ ದುಬೈ, ಶಾರ್ಜಾ, ಅಬುಧಾಬಿಗಳಲ್ಲಿ ಸಮೂಹ ನೃತ್ಯ ಪ್ರದರ್ಶನ ನೀಡಿರುವ ಪ್ರಜ್ಞಾ, ಇತ್ತೀಚಿಗೆ ವಿಶೇಷವಾಗಿ ಉಡುಪಿ ಶ್ರೀಕೃಷ್ಣ ಮಠದಲ್ಲಿ, ಪರ್ಯಾಯ ಪೀಠದ ಪಲಿಮಾರು ಶ್ರೀಗಳ ಸಮ್ಮುಖದಲ್ಲಿ ಸಮೂಹ ನೃತ್ಯ ಪ್ರದರ್ಶನ ಮಾಡಿದ್ದರು.
Arangetram by Prajna Ananth, dancer from Dubai in Bengaluru

ದಕ್ಷಿಣ ಭಾರತದ ಪಾರಂಪರಿಕ ನೃತ್ಯ ಕಲೆ ಭರತನಾಟ್ಯವನ್ನು ವಿದೇಶದ ಸಂಯುಕ್ತ ಅರಬ್ ಸಂಸ್ಥಾನದ ದುಬೈಯಲ್ಲಿ ಕಲಿತ 'ಸಂಕೀರ್ಣ'ದ ವಿದ್ಯಾರ್ಥಿನಿ, ಭರವಸೆಯ ಕಲಾವಿದೆ ಪ್ರಜ್ಞಾ ಅನಂತ್ ಆಗಸ್ಟ್ 4ರ ಸಂಜೆ 5.30 ರಿಂದ ಬೆಂಗಳೂರು ನಗರದ ಕೆಆರ್‌ ರಸ್ತೆಯಲ್ಲಿರುವ ಗಾಯನ ಸಮಾಜದ ಸಭಾಂಗಣದಲ್ಲಿ ಏಕವ್ಯಕ್ತಿ ಪ್ರದರ್ಶನದ ರಂಗಪ್ರವೇಶ ನೆರವೇರಿಸಲಿದ್ದಾರೆ.
English summary
Bharatanatyam arangetram by Prajna Ananth, dancer from Dubai at Gayana Samaja in Bengaluru on August 4. She is learning bharatanatyam under the tutilage of Sapna Kiran in Dubai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X