ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

61 ಯೋಜನೆಯ ₹3829 ಕೋಟಿ ಬಂಡವಾಳ ಹೂಡಿಕೆ ಅನುಮೋದನೆ- ಸಚಿವ ನಿರಾಣಿ

|
Google Oneindia Kannada News

ಬೆಂಗಳೂರು, ಜುಲೈ 29: ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಗೆ ವಿಶೇಷ ಗಮನ ಹರಿಸುತ್ತಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ, ₹3829.46 ಕೋಟಿ ಮೊತ್ತದ ಬಂಡವಾಳ ಹೂಡಿಕೆಯ ಒಟ್ಟು 61ಯೋಜನೆಗಳಿಗೆ ಅನುಮೋದನೆ ನೀಡಿದ್ದಾರೆ.

ಶುಕ್ರವಾರ ಬೆಂಗಳೂರಿನ ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ನಡೆದ ರಾಜ್ಯ ಮಟ್ಟದ 133ನೇ ಏಕಗವಾಕ್ಷಿ ಸಮಿತಿಯ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.

ಬಿಎಸ್ಎಫ್ ಉದ್ಯೋಗ: PUC ಪಾಸಾದವರಿಗೆ 29200 ರೂ. ವೇತನ! ಬಿಎಸ್ಎಫ್ ಉದ್ಯೋಗ: PUC ಪಾಸಾದವರಿಗೆ 29200 ರೂ. ವೇತನ!

ಒಟ್ಟು 61 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ₹3829. 46 ಕೋಟಿ ಮೊತ್ತದ ಹೊಡಿಕೆ ಮಾಡುವುದರಿಂದ ರಾಜ್ಯದಲ್ಲಿ ಸುಮಾರು 19150 ಉದ್ಯೋಗಗಳು ಸೃಷ್ಠಿಯಾಗಲಿವೆ ಎಂದು ಸಚಿವ ಮುರುಗೇಶ್ ಆರ್ ನಿರಾಣಿ ಅವರು ತಿಳಿಸಿದ್ದಾರೆ. ₹50 ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯ ಒಟ್ಟು 13 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಸಮಿತಿಯು ಒಪ್ಪಿಗೆ ನೀಡಿದೆ. ಇದರಿಂದ ಅಂದಾಜು ₹2979.35 ಕೋಟಿ ಹೂಡಿಕೆಯಾಗಿ 16158 ಉದ್ಯೋಗ ಸೃಜನೆಯಾಗಲಿವೆ ಎಂದು ಹೇಳಿದರು.

Approved 61 Industrial Projects With Job Opportunities For 19510 Says Murugesh Nirani

ಇದೇ ವೇಳೆ ₹15 ಕೋಟೆಯಿಂದ ₹50 ಕೋಟಿ ಒಳಗಿನ 42 ಯೋಜನೆಗೆ ಹಸಿರು ನಿಶಾನೆಯನ್ನು ನೀಡಲಾಗಿದೆ. ₹774.51 ಕೋಟಿ ಹೂಡಿಕೆಯೊಂದಿಗೆ 3352 ಉದ್ಯೋಗ ಲಭಿಸಲಿವೆ. ಹೆಚ್ಚುವರಿ ಬಂಡವಾಳ ಹೂಡಿಕೆಯ ಒಟ್ಟು 6 ಯೋಜನೆಯಿಂದ ₹75.60 ಕೋಟಿ ಹೂಡಿಕೆಯಾಗಲಿದೆ.

ಕೋವಿಡ್ 19 ಬಳಿಕ ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ

ರಾಜ್ಯದಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಬಂದು ಎಲ್ಲಾ ‌ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಮರುಕಳಿಸಿರುವುದರಿಂದ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಯತ್ತ ಸಚಿವ ನಿರಾಣಿ ಅವರು ಅವಿರತ ಪ್ರಯತ್ನ ನಡೆಸುತ್ತಿದ್ದಾರೆ. ಉದ್ಯಮಿಗಳ ಆಕರ್ಷಣೆ , ಕೈಗಾರಿಕೆಗಳ ಪುನಶ್ಚೇತನ, ಬಂಡವಾಳ ಹೂಡಿಕೆ ಮಾಡುವವರಿಗೆ ವಿಶ್ವ ದರ್ಜೆಯ ಮೂಲಭೂತ ಸೌಕರ್ಯ ಸೇರಿದಂತೆ ಕೈಗಾರಿಕಾ ವಲಯದಲ್ಲಿ ಅಮೂಲಾಗ್ರ ಬದಲಾವಣೆ ಮುನ್ನುಡಿ ಬರೆಯುತ್ತಿದ್ದಾರೆ. ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಮಣರೆಡ್ಡಿ, ಇಲಾಖೆಯ ಆಯುಕ್ತೆ, ಗುಂಜನ್ ಕೃಷ್ಣ , ಕೆಐಎಎಡಿಬಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವಶಂಕರ್, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Approved 61 Industrial Projects With Job Opportunities For 19510 Says Murugesh Nirani

ಅನುಮೋದನೆ ನೀಡಿರುವ ಯೋಜನೆಗಳು:

* ಟೊಯೋಟಾ ಕಿರ್ಲೋಸ್ಕರ್ ಆಟೋ ಪಾಟ್ಸ್೯ ₹445 ಕೋಟಿಹೂಡಿಕೆ, 1198 ಉದ್ಯೋಗ ಸೃಷ್ಟಿ
* ಮೈಕ್ರಾನ್ ಟೆಕ್ನಾಲಜಿ ಆಪರೇಷನ್ ಇಂಡಿಯಾ ಎಲ್ ಎಲ್ ಪಿ. ₹397 ಕೋಟಿ ಹೂಡಿಕೆ ಹಾಗೂ 797 ಉದ್ಯೋಗ
* ಸೀತರಾಮಂ ಇಸ್ಟಾಟ್ ಪ್ರೈ. ಲಿ. ₹376 ಕೋಟಿ ಹೂಡಿಕೆ. 400 ಉದ್ಯೋಗ
* ಜಿಂದಾಲ್ ಇಂಡಸ್ಟ್ರೀಸ್ ಹೀಸಾರ್ ಪ್ರೈ. ಲಿ, ₹340 ಕೋಟಿ ಹೂಡಿಕೆ, 310 ಉದ್ಯೋಗ
* ಸೂರಾಜ್ ಆಗ್ರೋ ಡಿಸ್ಡೀಲಿಸ್ ಲಿ ₹185 ಕೋಟಿ ಹೂಡಿಕೆ, 170 ಉದ್ಯೋಗ
* ನಹಾರಾಸ್ ಎಂಜಿನಿಯರಿಂಗ್ ಇಂಡಿಯಾ ಪ್ರೈ.ಲಿ ₹120 ಕೋಟಿ ಹೂಡಿಕೆ, 353 ಉದ್ಯೋಗ
* ಶ್ರೀ ಬ್ರಮ್ಮೇಶ್ವರಿ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಮಾಗೂರ್, ₹112 ಕೋಟಿ ಹೂಡಿಕೆ, 80 ಉದ್ಯೋಗ
* ಲೂಜಾನ್ ಫಾರ್ಮಾ ಪ್ರೈ‌.ಲಿ. ₹97.50 ಕೋಟಿ ಹೂಡಿಕೆ,246 ಉದ್ಯೋಗ
* ಎನ್.ಎಸ್.ಪಿ. ಡಿಸ್ಟಿಲರಿ ಪ್ರೈ.ಲಿ ₹64.64 ಕೋಟಿ ಹೂಡಿಕೆ,116 ಉದ್ಯೋಗ
* ಸ್ಟ್ರೀಂಗ್ ಬಯೋ ಪ್ರೈ. ಲಿ ₹75 ಕೋಟಿ, 48 ಉದ್ಯೋಗ
* ಋಷಿಲ್ ಡೆಕೋರ್ ಲಿ ₹72.76 ಕೋಟಿ ಹೂಡಿಕೆ, 310 ಉದ್ಯೋಗ

Recommended Video

ಕರಾವಳಿಕಿಚ್ಚು:ಫಾಸಿಲ್ ಏನ್ ಮಾಡಿದ್ದ?ಕೊಲೆಯಾಗಿದ್ದು ಯಾಕೆ? | OneIndia Kannada

English summary
The State Industries Department on Friday Approved 61 industrial projects worth Rs 3829.46 crore that would generate job opportunities over 19510. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X