• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉತ್ತಮ ರೈತ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದ ಬೆಂಗಳೂರು ಕೃಷಿ ವಿವಿ

By Gururaj
|

ಬೆಂಗಳೂರು, ಆಗಸ್ಟ್ 30 : ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಉತ್ತಮ ರೈತ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು ವಿವಿ ವ್ಯಾಪ್ತಿಗೆ ಬರುವ 10 ಜಿಲ್ಲೆಗಳ ಆಸಕ್ತ ರೈತ ಹಾಗೂ ರೈತ ಮಹಿಳೆಯರು ಅರ್ಜಿಗಳನ್ನು ಸಲ್ಲಿಸಬಹುದು.

ಈ ಪ್ರಶಸ್ತಿಗಳನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲದಲ್ಲಿ ನವೆಂಬರ್ 15 ರಿಂದ 18ರ ತನಕ ನಡೆಯುವ ಕೃಷಿಮೇಳದಲ್ಲಿ ನೀಡಲಾಗುತ್ತದೆ. ಉತ್ತಮ ರೈತ ಮತ್ತು ರೈತ ಮಹಿಳೆ ಪ್ರಶಸ್ತಿಗೆ ಅಂಚೆ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಪುಷ್ಪ ಕೃಷಿಯಿಂದ ಲಾಭಗಳಿಸಿದ ಕೊಪ್ಪಳ ರೈತ

ಅರ್ಜಿ ನಮೂನೆಯು ಆಯಾ ಜಿಲ್ಲೆಗಳ ಜಂಟಿ ಕೃಷಿ ನಿರ್ದೇಶಕರ ಕಚೇರಿ, ವಿಸ್ತರಣಾ ನಿರ್ದೇಶಕರ ಕಚೇರಿ, ಹೆಬ್ಬಾಳ, ಬೆಂಗಳೂರು ಕೃಷಿ ವಿಜ್ಞಾನ ಕೇಂದ್ರಗಳು (ಹಾಡೋನಹಳ್ಲಿ, ದೊಡ್ಡಬಳ್ಳಾಪುರ, ಚಂದುರಾಯನಹಳ್ಳಿ-ಮಾಗಡಿ, ಕಂದಲಿ-ಹಾಸನ, ಕೊನೇಹಳ್ಳಿ-ತಿಪಟೂರು, ವಿ.ಸಿ.ಫಾರಂ-ಮಂಡ್ಯ, ಕುರುಬೂರು ಫಾರಂ-ಚಿಂತಾಮಣಿ ಮತ್ತು ಹರದನಹಳ್ಳಿ-ಚಾಮರಾಜನಗರ, ವಿಸ್ತರಣಾ ಶಿಕ್ಷಣ ಘಟಕ (ನಾಗನಹಳ್ಳಿ-ಮೈಸೂರು) ನಲ್ಲಿ ದೊರೆಯುತ್ತದೆ.

ಸಾಲದ ಋಣದಿಂದ ಬಿಡುಗಡೆ: ದುರ್ಬಲ ವರ್ಗದವರಿಗೆ ರಾಜ್ಯ ಸರ್ಕಾರದ ಕೊಡುಗೆ

ರಾಜ್ಯ ಮಟ್ಟದ ಪ್ರಶಸ್ತಿಗಳು

1. ದಿವಂಗತ ಶ್ರೀ ಸಿ. ಭೈರೇಗೌಡ ರಾಜ್ಯ ಮಟ್ಟದ ರೈತ ಪ್ರಶಸ್ತಿ

2. ಡಾ. ಎಂ.ಹೆಚ್. ಮರೀಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕ ರೈತ ಪ್ರಶಸ್ತಿ.

3. ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ

4. ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ

5. ಕೆನರಾ ಬ್ಯಾಂಕ್ ಪ್ರಾಯೋಜಿತ ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಹಾಗೂ ರೈತ ಮಹಿಳೆ ಪ್ರಶಸ್ತಿ.

ಪ್ರವಾಹದ ಅಘಾತದಿಂದ ಅನ್ನದಾತ ಹೊರಬಂದಿಲ್ಲ..!

ಜಿಲ್ಲಾ ಮಟ್ಟದ ಪ್ರಶಸ್ತಿಗಳು

1. ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ

2. ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ.

ತಾಲ್ಲೂಕು ಮಟ್ಟದ ಪ್ರಶಸ್ತಿಗಳು

1. ತಾಲ್ಲೂಕು ಮಟ್ಟದ ಅತ್ಯುತಮ ಯುವ ರೈತ ಪ್ರಶಸ್ತಿ

2. ತಾಲ್ಲೂಕು ಮಟ್ಟದ ಅತ್ಯುತಮ ಯುವ ರೈತ ಮಹಿಳೆ ಪ್ರಶಸ್ತಿ.

ಭರ್ತಿಮಾಡಿದ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 12/10/2018. ಹೆಚ್ಚಿನ ವಿವರಗಳಿಗೆ ವಿಸ್ತರಣಾ ನಿರ್ದೇಶಕರ ಕಚೇರಿ, ಕೃಷಿ ವಿಶ್ವವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು - 560 024 ಇವರನ್ನು ಸಂಪರ್ಕಿಸಬಹುದು.

ಅರ್ಜಿ ನಮೂನೆಯು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವೆಬ್‍ ಸೈಟ್‌ನಲ್ಲೂ ಸಿಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangalore agriculture university invites application for the Best farmer and various awards. People can send applications before October 12, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more