ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಪಲ್ ಕಂಪನಿ ಹೆಸರಲ್ಲಿ ನಕಲಿ ವಸ್ತು ಮಾರಾಟ, ಇಬ್ಬರ ಬಂಧನ

|
Google Oneindia Kannada News

ಬೆಂಗಳೂರು, ಜನವರಿ 21: ಆಪಲ್ ಕಂಪನಿಯ ಮೊಬೈಲ್ ಫೋನ್ ವಸ್ತುಗಳಿಗೆ ನಕಲಿ ಲೋಗೋ ಹಾಕಿ, ಮಾರಾಟ ಮಾಡುತ್ತಿರುವ ತಂಡವೊಂದಿದೆ ಎಂದು ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ. ಕಳಪೆ ದರ್ಜೆಯ ವಸ್ತುಗಳಿಗೆ ಆಪಲ್ ಕಂಪನಿಯ ಲೋಗೋ ಬಳಸಿ, ಮಾರಾಟ ಮಾಡಿರುವುದು ತನಿಖಾಧಿಕಾರಿ ವಿಜಯ್ ಕುಮಾರ್ ಅವರಿಗೆ ಕಂಡುಬಂದಿದೆ.

ಚಾರ್ಜರ್, ಬ್ಯಾಟರಿ, ಯುಎಸ್ ಬಿ ಕೇಬಲ್, ಹೆಡ್ ಫೋನ್ ಗಳು, ಏರ್ ಪಾಡ್ಸ್, ಮೊಬೈಲ್ ಫೋನ್ ಕವರ್ ಗಳು ಮತ್ತಿತರ ವಸ್ತುಗಳನ್ನು ಎಸ್.ಪಿ. ರಸ್ತೆಯಲ್ಲಿರುವ ಐ-ಚಾಯ್ಸ್ ಟೆಲಿಕಾಮ್ ಹಾಗೂ ಪ್ರಕಾಶ್ ಟೆಲಿಕಾಮ್ ನಿಂದ ಮಾರಾಟ ಮಾಡಲಾಗುತ್ತಿತ್ತು. ಇಬ್ಬರೂ ಮಾರಾಟಗಾರರ ಗೋಡೌನ್ ಒಂದೇ ಎಂಬುದು ಕಂಡುಬಂದಿದ್ದು, ಪೊಲೀಸರು ದಾಳಿ ನಡೆಸಿ, ನಾಲ್ಕು ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Apple logo used to sell substandard products, two arrested

285 ಕೋಟಿ ವಂಚನೆ ಪ್ರಕರಣದಲ್ಲಿ ತಗಲ್ಹಾಕಿಕೊಂಡವನು ಎಂಥ ಖತರ್ನಾಕ್!285 ಕೋಟಿ ವಂಚನೆ ಪ್ರಕರಣದಲ್ಲಿ ತಗಲ್ಹಾಕಿಕೊಂಡವನು ಎಂಥ ಖತರ್ನಾಕ್!

ಮಳಿಗೆಗಳ ಮಾಲೀಕರಾ ಪ್ರವೀಣ್ ಸಿಂಗ್, ದಿಲೀಪ್ ಕುಮಾರ್ ಎಂಬಿಬ್ಬರನ್ನು ಬಂಧಿಸಲಾಗಿದೆ. ಕಾಪಿರೈಟ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಿಫಿನ್ ನ ಅಧಿಕಾರಿಗಳು ಗ್ರಾಹಕರ ಸೋಗಿನಲ್ಲಿ ಹೋಗಿ, ವಸ್ತುಗಳ ಖರೀದಿಗೆ ಚೌಕಾಶಿ ನಡೆಸಿದ್ದಾರೆ. ನಕಲಿ ವಸ್ತುಗಳನ್ನು ಬಿಕ್ ಸಮೇತ ಖರೀದಿ ಮಾಡಿ, ಅವುಗಳನ್ನೇ ಸಾಕ್ಷ್ಯ ಎಂಬಂತೆ ಪೊಲೀಸರಿಗೆ ನೀಡಿದ್ದಾಗಿ ತಿಳಿದುಬಂದಿದೆ.

English summary
A team working for Apple Inc has lodged a police complaint against two shops for allegedly selling cellphone accessories with the fake logo of the multinational technology company. Report from Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X