ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದ ಸರ್ಕಾರಿ ದಿನಗೂಲಿ ನೌಕರರ ಖಾಯಂಗೊಳಿಸಲು ಮುಖ್ಯಮಂತ್ರಿಗೆ ಮನವಿ

|
Google Oneindia Kannada News

ಬೆಂಗಳೂರು, ಜನವರಿ 4: ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಖಾಯಂಗೊಳಿಸಬೇಕೆಂದು ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ. ಕೆ. ಕೋಳಿ, ಕಾರ್ಯಾಧ್ಯಕ್ಷ ಶೇಖ್ ಅಲಿ ಮತ್ತು ಪ್ರಧಾನ ಕಾರ್ಯದರ್ಶಿ ಶಿವಬಸಪ್ಪ ಸವದತ್ತಿ ಬೇಡಿಕೆಯ ಪತ್ರವನ್ನು ನೀಡಿ, ನ್ಯಾಯಾಲಯ ನಿಂದನಾ ಪ್ರಕರಣದಲ್ಲಿರುವ ಸರ್ಕಾರಿ ನೌಕರರನ್ನು ಸರ್ಕಾರದ ಮಟ್ಟದಲ್ಲಿ ಖಾಯಂ ಮಾಡಲು ತಯಾರಿ ನಡೆಸಿದ್ದಾರೆ. ಅಂದರಂತೆ ದಿನಗೂಲಿ ಸಂಘದ ನೌಕರರನ್ನು ಖಾಯಂಗೊಳಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿದಾಗ, ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದರು.

ದಿನಗೂಲಿ ನೌಕರರ ಸಂಘದ ಬೇಡಿಕೆ ಏನು?
ಕರ್ನಾಟಕ ರಾಜ್ಯ ಸರ್ಕಾರದಲ್ಲಿ ದಿನಗೂಲಿ ನೌಕರರಾಗಿ ಸುಮಾರು 30- 35 ವರ್ಷಗಳಿಂದ ಅತೀ ಕಡಿಮೆ ವೇತನ ಪಡೆದುಕೊಂಡು ಇಲ್ಲಿಯವರೆಗೆ ಸೇವೆಯನ್ನು ಸಲ್ಲಿಸುತ್ತಿದ್ದು, ಉಮಾದೇವಿ ಮತ್ತಿತರ ಪ್ರಕರಣದಲ್ಲಿ ಆದೇಶ ದಿನಾಂಕ: 10-04- 2006ರಲ್ಲಿ ನಾಲ್ಕು ಷರತ್ತುಗಳನ್ನು ಪೂರೈಸಿದ ದಿನಗೂಲಿ ನೌಕರರನ್ನು ಸಕ್ರಮಗೊಳಿಸಲು ಪರಿಗಣಿಸಬಹುದು ಎಂದು ತಿಳಿಸಲಾಗಿದೆ.

Appeal To the Chief Minister For Permanent the Govt Daily Wages Employees of The State

ಷರತ್ತುಗಳನ್ನು ಪೂರೈಸದೇ ಇರುವ ನೌಕರರನ್ನು ಸಕ್ರಮಗೊಳಿಸಲು ಸಾಧ್ಯವಿರುವುದಿಲ್ಲ ಎಂದು ಆದೇಶ ನೀಡಿದ್ದು, ನಂತರ 2012ರಲ್ಲಿ ತಮ್ಮ ಘನ ಸರ್ಕಾರವು "ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮ 2012' ಜಾರಿಗೆ ತಂದಿದ್ದು, 2013ರ ನಂತರ ಸರ್ಕಾರಗಳು ಅಧಿನಿಯವನ್ನು ಯಥಾವತ್ತಾಗಿ ಜಾರಿ ಮಾಡದೇ ನಮಗೆ ಅನ್ಯಾಯವಾಗಿರುತ್ತದೆ. ಅಧಿನಿಯವನ್ನು ಯಥಾವತ್ತಾಗಿ ಜಾರಿಗೆ ತರುವಂತೆ ಅಥವಾ ಸಕ್ರಮಗೊಳಿಸುವಂತೆ ಸಾಕಷ್ಟು ಬಾರಿ ಸಂಘದ ಪರವಾಗಿ ಮನವಿ ಸಲ್ಲಿಸಿದರು ಸಹ ಯಾವುದೇ ಕ್ರಮವನ್ನು ಜರುಗಿಸಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಅಲ್ಲದೇ ಸರ್ಕಾರವು ಒಂದು ಕಡೆ ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕೆಂದು ಯೋಜನೆಗಳನ್ನು ರೂಪಿಸುತ್ತದೆ. ಆದರೆ ತನ್ನಲ್ಲೇ ಜೀತ ಪದ್ಧತಿಯಂತೆ ನಮ್ಮನ್ನು ದಿನಗೂಲಿಯಾಗಿ ದುಡಿಸಿಕೊಳ್ಳುತ್ತಿದೆ. ಇದು ಯಾವ ನ್ಯಾಯ ಸ್ವಾಮಿ? ಎಂದು ದಿನಗೂಲಿ ನೌಕರರ ಸಂಘ ಪ್ರಶ್ನಿಸಿದೆ.

Appeal To the Chief Minister For Permanent the Govt Daily Wages Employees of The State


ಕರ್ನಾಟಕ ಸರ್ಕಾರದಲ್ಲಿ ಸುಮಾರು 2.50 ಲಕ್ಷ ಸಿ ಮತ್ತು ಡಿ ದರ್ಜೆ ಹುದ್ದೆಗಳು ಖಾಲಿ ಇದ್ದರೂ ಸಹ ನಮ್ಮ ಸೇವೆಗಳನ್ನು ಖಾಯಂಗೊಳಿಸದೇ ಸರ್ವೋಚ್ಚ ನ್ಯಾಯಾಲಯದ ಪ್ರಕರಣದ ತೀರ್ಪನ್ನು ಉಲ್ಲೇಖಿಸಿ ಪದೇ ಪದೇ ಅನ್ಯಾಯ ಮಾಡುತ್ತಾ ಬಂದಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಪ್ರಕರಣದ ತೀರ್ಪಿನ ನಂತರ ಅಧಿನಿಯಮ ಮಾಡಿ ಹಿಮಾಚಲ ಪ್ರದೇಶ, ಪಂಜಾಬ್ ರಾಜ್ಯ ಸರ್ಕಾರಗಳು ಅಲ್ಲಿನ ದಿನಗೂಲಿ ನೌಕರರನ್ನು ಖಾಯಂಗೊಳಿಸಿ ಆದೇಶಿಸಿವೆ ಎಂದು ಉಲ್ಲೇಖಿಸಿದರು.

ಕರ್ನಾಟಕ ರಾಜ್ಯದಲ್ಲಿ ಮಾತ್ರ ಸರ್ವೋಚ್ಚ ನ್ಯಾಯಾಲಯದ ನೆಪ ಹೇಳಿ ಬಡ ದಿನಗೂಲಿ ನೌಕರರಿಗೆ ಅನ್ಯಾಯ ಮಾಡಲಾಗುತ್ತಿದೆ. "ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮ 2012' ಜಾರಿಗೆ ಬಂದಾಗ ಹದಿಮೂರು ಸಾವಿರ ಇದ್ದ ನೌಕರರ ಸಂಖ್ಯೆ ನಿವೃತ್ತಿ ಹಾಗೂ ಮರಣದಿಂದಾಗಿ ಈಗ ಸುಮಾರು 6ರಿಂದ 7 ಸಾವಿರ ಮಾತ್ರ ಉಳಿದಿರುತ್ತಾರೆ. ಅವರುಗಳು ಸಹ 3-4 ವರ್ಷಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ.

ಹಿಮಾಚಲ ಪ್ರದೇಶ, ಪಂಜಾಬ್, ರಾಜ್ಯ ಸರ್ಕಾರಗಳ ಮಾದರಿಯಂತೆ ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮ 2012ಕ್ಕೆ ತಿದ್ದುಪಡಿ ತಂದು ನಾವುಗಳು 10 ವರ್ಷಗಳ ದಿನಗೂಲಿ ಸೇವೆಯನ್ನು ಪೂರ್ಣಗೊಳಿಸಿದ ದಿನಾಂಕದಿಂದ ಪೂರ್ವಾನ್ವಯವಾಗುವಂತೆ ಮಂಜೂರಾದ ಹುದ್ದೆಯಲ್ಲಿ ಸಕ್ರಮಗೊಳಿಸುವುದು. ಅನಿವಾರ್ಯವಾದಲ್ಲಿ ಸೂಪರ್‌ನ್ಯೂಮರಿ ಹುದ್ದೆಗಳನ್ನು ಸೃಷ್ಟಿಮಾಡಿ ನಮ್ಮ ಸೇವೆಗಳನ್ನು ಸಕ್ರಮಗೊಳಿಸುವುದು.

ಈಗ ಕ್ಷೇಮಾಭಿವೃದ್ಧಿ ದಿನಗೂಲಿ ನೌಕರರಿಗೆ ಪ್ರತ್ಯೇಕವಾಗಿ ಅನುದಾನವನ್ನು ನೀಡಿ ಪ್ರತಿ ತಿಂಗಳು ವೇತನ ನೀಡುತ್ತಿದ್ದು, ಸದರಿ ನೌಕರರನ್ನು ಮಂಜೂರಾದ ಹುದ್ದೆಯಲ್ಲಿ ಪರಿಗಣಿಸಿದರೆ ಕ್ಷೇಮಾಭಿವೃದ್ಧಿ, ದಿನಗೂಲಿ ನೌಕರರಿಗೆ ಪ್ರತ್ಯೇಕವಾಗಿ ನೀಡುವ ಅನುದಾನವು ಸರ್ಕಾರಕ್ಕೆ ಉಳಿತಾಯವಾಗುತ್ತದೆ. ಕಾರಣ "ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮ 2012'ಕ್ಕೆ ತಿದ್ದುಪಡಿ ತಂದು ದಿನಗೂಲಿ ನೌಕರರನ್ನು ಮಂಜೂರಾದ ಖಾಲಿ ಹುದ್ದೆಗಳಲ್ಲಿ ಸಕ್ರಮಗೊಳಿಸಲು ಸಂಘದ ಪರವಾಗಿ ಮುಖ್ಯಮಂತ್ರಿಗಳಲ್ಲಿ ವಿನಂತಿಸಲಾಯಿತು.

English summary
Appeal to the Chief Minister Basavaraj Bommai for Permanent the Govt Daily Wages Employees of the State.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X