ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪೋಲೊ ಚಿಕಿತ್ಸಾಲಯಗಳಾದ್ಯಂತ ''ಸುರಕ್ಷಿತ ಒಪಿಡಿ'' ಜಾರಿ

|
Google Oneindia Kannada News

ಬೆಂಗಳೂರು, ಜೂನ್ 17: ಅಪೊಲೊ ಕ್ಲಿನಿಕ್ ರೋಗನಿರ್ಣಯ ಸೇವೆಗಳಿಗಾಗಿ ಭೇಟಿ ನೀಡುವವರಿಗೆ ಮತ್ತು ಸಮಾಲೋಚನೆಗಳನ್ನು ಪಡೆಯಲು ಬರುವವರಿಗೆ ಸುರಕ್ಷಿತ ಒಪಿಡಿಗಳನ್ನು (ಹೊರರೋಗಿ ವಿಭಾಗಗಳು) ಘೋಷಿಸಿದೆ. ಅಪೋಲೊ ಕ್ಲಿನಿಕ್ಸ್ ಪ್ರಾಥಮಿಕ ಆರೋಗ್ಯ ಚಿಕಿತ್ಸಾಲಯಗಳಿ ಕಳೆದ 36 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ. ಈ ಕೊವಿಡ್-19 ಕಾಲದಲ್ಲಿ, ಸುರಕ್ಷಿತ ಸೌಲಭ್ಯನೀಡುವಲ್ಲಿ ರೋಗಿಯ ಸುರಕ್ಷಿತ ಅನುಭವವನ್ನು ಖಚಿತಪಡಿಸಿಕೊಳ್ಳಲು ಅಪೊಲೊ ಕ್ಲಿನಿಕ್ ಹೊರರೋಗಿ ಸೇವೆಗಳಲ್ಲಿ ಕಠಿಣವಾದ ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಅಪೊಲೊ ಕ್ಲಿನಿಕ್ ರೋಗನಿರ್ಣಯ ಸೇವೆಗಳಿಗಾಗಿ ಭೇಟಿ ನೀಡುವವರಿಗೆ ಮತ್ತು ಸಮಾಲೋಚನೆಗಳನ್ನು ಪಡೆಯಲು ಬರುವವರಿಗೆ ಸುರಕ್ಷಿತ ಒಪಿಡಿಗಳನ್ನು (ಹೊರರೋಗಿ ವಿಭಾಗಗಳು) ಘೋಷಿಸಿದೆ. ಈ ಪ್ರಯತ್ನವು ಅವರ ಸುರಕ್ಷತೆಯ ಬಗ್ಗೆ ರಕ್ಷಣೆ ಮತ್ತು ಸೋಂಕುಗಳು ಹರಡದೇ ಇರುವುದಕ್ಕಾಗಿ ಸಮಗ್ರ ಕ್ರಮಗಳನ್ನು ಅಳವಡಿಸಿಕೊಂಡಿದೆ. 2020 ರ ಜೂನ್‌ನಿಂದ ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನಾದ್ಯಂತ ಅಪೋಲೊ ಚಿಕಿತ್ಸಾಲಯಗಳಲ್ಲಿ ಸುರಕ್ಷಿತ ಒಪಿಡಿ ಉಪಕ್ರಮವನ್ನು ಜಾರಿಗೆ ತರಲಾಗಿದೆ.

COVID-19: ಮಕ್ಕಳ ಬಗ್ಗೆ ವಹಿಸಬೇಕಾದ ಸುರಕ್ಷತೆ ಹೇಗಿರಬೇಕು?COVID-19: ಮಕ್ಕಳ ಬಗ್ಗೆ ವಹಿಸಬೇಕಾದ ಸುರಕ್ಷತೆ ಹೇಗಿರಬೇಕು?

ಅಪೊಲೊ ಕ್ಲಿನಿಕ್‌ಗಳ ಸುರಕ್ಷಿತ ಒಪಿಡಿ ಉಪಕ್ರಮದ ಕುರಿತು ಮಾತನಾಡಿದ ಆನಂದೋ ವಾಸ್ಕರ್ ಸಿಒಒ, ''ಅಪೋಲೊ ಗ್ರೂಪ್ ಮತ್ತು ಅಪೋಲೊ ಕ್ಲಿನಿಕ್ ಆರೋಗ್ಯ ರಕ್ಷಣೆಯಲ್ಲಿ ಉನ್ನತ ಗುಣಮಟ್ಟದ ಸೇವೆಯನ್ನು ಸ್ಥಿರವಾಗಿ ನೀಡುತ್ತಾ ಬಂದಿವೆ, ರೋಗಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆ ಹೆಚ್ಚುವರಿ ಮೈಲಿ ದೂರ ಹೋಗುತ್ತವೆ. ಸುರಕ್ಷಿತ ಒಪಿಡಿ ಉಪಕ್ರಮವು ರೋಗಿಯ ಅತ್ಯುನ್ನತ ಅನುಭವ ಮತ್ತು ಸುರಕ್ಷತೆಯ ಭರವಸೆಯನ್ನು ಸೃಷ್ಟಿಸುವ ಮತ್ತೊಂದು ಹೆಜ್ಜೆಯಾಗಿದೆ. ಈ ಸಾಂಕ್ರಾಮಿಕ ಭೀತಿಯ ಸಮಯದಲ್ಲಿ ಅಪೊಲೊ ಚಿಕಿತ್ಸಾಲಯಕ್ಕೆ ಭೇಟಿ ನೀಡುವವರ ಆತಂಕಗಳನ್ನು ಹೋಗಲಾಡಿಸುವ ಉದ್ದೇಶದಿಂದ ನಾವು ಈ ವಿಸ್ತಾರವಾದ ಕ್ರಮಗಳನ್ನು ಕೈಗೊಂಡಿದ್ದೇವೆ.''

ಕೊರೊನಾವೈರಸ್ ಸೋಂಕಿನಿಂದ ಮಗುವನ್ನು ರಕ್ಷಿಸುವುದು ಹೇಗೆ?ಕೊರೊನಾವೈರಸ್ ಸೋಂಕಿನಿಂದ ಮಗುವನ್ನು ರಕ್ಷಿಸುವುದು ಹೇಗೆ?

Apollo Clinic Launches Safe Opd With Covid-19 Safety Protocol

ಸುರಕ್ಷಿತ ಒಪಿಡಿ ಕ್ರಮಗಳಲ್ಲಿ ರೋಗಿಗಳ ತಾಪಮಾನಕ್ಕಾಗಿ ಕಡ್ಡಾಯವಾಗಿ ತಪಾಸಣೆ ಮಾಡುವುದನ್ನು ಒಳಗೊಂಡಿವೆ.
* ಐಸಿಎಂಆರ್ ನ ಮಾರ್ಗಸೂಚಿಗಳ ಪ್ರಕಾರ ಸುರಕ್ಷಿತ ಒಪಿಡಿ ಕ್ರಮಗಳನ್ನು ಅನುಸರಿಸಲಾಗುತ್ತದೆ:
* ನೋಂದಣಿ ಪ್ರದೇಶದಲ್ಲಿ ಗಾಜಿನ ಕೊಠಡಿಗಳು/ವಿಭಾಗಗಳು / ಪರದೆಗಳು, ಕನಿಷ್ಟ 6 ಅಡಿಗಳ ಕಡ್ಡಾಯವಾಗಿ ಸಾಮಾಜಿಕ ಅಂತರದಿಂದ ದೂರವಿರುವುದು;
* ಚಿಕಿತ್ಸಾಲಯಗಳಾದ್ಯಂತ ಅನೇಕ ಹಂತಗಳಲ್ಲಿ ಸ್ಯಾನಿಟೈಜರ್‌ಗಳ ಲಭ್ಯತೆ;
* ಕೋವಿಡ್ ರೋಗಲಕ್ಷಣ ಇರುವವರಿಗೆ ಮತ್ತು ಇತರ ರೋಗಿಗಳಿಗೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಕಟ್ಟುನಿಟ್ಟಾದ ಸುರಕ್ಷಾ ನಿಯಮಗಳು;
* ರೋಗಿಗಳು ಮತ್ತು ಕ್ಲಿನಿಕ್ ಸಿಬ್ಬಂದಿಗೆ ಏಕ ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳು. ಸೋಂಕನ್ನು ತಡೆಗಟ್ಟಲು ಎಲ್ಲಾ ಅಪೋಲೊ ಚಿಕಿತ್ಸಾಲಯಗಳನ್ನು ನಿಯಮಿತವಾಗಿ ಸ್ವಚ್ಚ ಗೊಳಿಸಲಾಗಿದೆ.

Covid-19 : PCOS ತಡೆಗಟ್ಟಲು ಆರೋಗ್ಯಕರ ಜೀವನಶೈಲಿ ಸಲಹೆಗಳುCovid-19 : PCOS ತಡೆಗಟ್ಟಲು ಆರೋಗ್ಯಕರ ಜೀವನಶೈಲಿ ಸಲಹೆಗಳು

Apollo Clinic Launches Safe Opd With Covid-19 Safety Protocol

ಎಲ್ಲಾ ವೈದ್ಯರು, ದಾದಿಯರು ಮತ್ತು ಸಿಬ್ಬಂದಿಗೆ ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇ) ಕಿಟ್‌ಗಳನ್ನು ಕನ್ನಡಕಗಳು, ಮುಖ ಕವಚ, ಗಾಜಿನ ಮುಖವಾಡ, ಕೈಗವಸುಗಳು,ಕವರಲ್‌ಗಳು / ನಿಲುವಂಗಿಗಳು, ತಲೆ ಮತ್ತು ಶೂ ಕವರ್‌ಗಳನ್ನು ನೀಡಲಾಗುತ್ತದೆ. ಅಪೊಲೊ ಚಿಕಿತ್ಸಾಲಯಗಳು ತಮ್ಮ ಸಿಬ್ಬಂದಿಗಳಿಗೆ ಎಲ್ಲಾ ಸಮಯದಲ್ಲೂ ಪಿಪಿಇ ಧರಿಸುವುದನ್ನು ಕಡ್ಡಾಯಗೊಳಿಸಿದೆ.

English summary
Apollo Clinics across the city have launched a Safe OPD with adequate COVID-19 safety protocol for addressing patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X