ಯಶವಂತಪುರ ಎಪಿಎಂಸಿ ಬಂದ್: ಬೇಳೆ, ತರಕಾರಿ ಮಾರಾಟದಲ್ಲಿ ವ್ಯತ್ಯಯ

ಬೆಂಗಳೂರು, ಜು.25: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶವ್ಯಾಪಿ ಮುಷ್ಕರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಟೋಲ್ ಮುಕ್ತ, ಡೀಸೆಲ್ ದರ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಯುತ್ತಿದೆ.
ಹೋರಾಟಗಾರರು ಬುಧವರಾ (ಜು.25)ರಂದು ಯಶವಂತಪುರ ಎಪಿಎಂಸಿ ಯಾರ್ಡ್ ಬಂದ್ ಮಾಡಲು ನಿರ್ಧರಿಸಿದ್ದಾರೆ.
ಗುರುವಾರದಿಂದ ರಾಷ್ಟ್ರವ್ಯಾಪಿ ಲಾರಿ-ಟ್ರಕ್ ಮುಷ್ಕರಕ್ಕೆ ಕರೆ
ಇಷ್ಟು ದಿನ ಜನಸಾಮಾನ್ಯರಿಗೆ ತೊಂದರೆಯಾಗಬಾರದು ಎಂದು ಮುಷ್ಕರ ನಡೆಸಿದ್ದೆವು, ಇನ್ನು ಕಾಯಲು ಸಾಧ್ಯವಿಲ್ಲ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ. ಲಾರಿ ಮುಷ್ಕರದಿಂದ ಸರಕು ಸಾಗಣೆ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗಿ ಬೆಂಗಳೂರಿಗೂ ಮುಷ್ಕರದ ಬಿಸಿ ತಟ್ಟಲಿದೆ.
ಮುಷ್ಕರದಿಂದಾಗಿ ಈಗಾಗಲೇ ಕೈಗಾರಿಕಾ ಕಚ್ಚಾವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಕಾಣಿಸಿಕೊಂಡಿದ್ದು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಮಂಗಳವಾರ ಹೊರರಾಜ್ಯದಿಂದ ನಗರಕ್ಕೆ ಬರಬೇಕಿದ್ದ ಸರಕು ಸಾಗಣೆ ವಾಹನಗಳ ಸಂಖ್ಯೆ ಕಡಿಮೆಯಾಗಿದೆ.
ಸಾಮಾನ್ಯ ದಿನಗಳಲ್ಲಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ನಗರದ ಎಪಿಎಂಸಿ ಯಾರ್ಡ್ಗೆ ಸುಮಾರು 100 ಲೋಡ್ ಆಲೂಗಡ್ಡೆ, , 200 ಲೋಡ್ ಈರುಳ್ಳಿ ಬರುತ್ತದೆ. ಆದರೆ ಮುಷ್ಕರದಿಂದಾಗಿ ಮಂಗಳವಾರ ಸುಮಾರು 100 ಕ್ಕೂ ಹೆಚ್ಚು ಲೋಡ್ ಈರುಳ್ಳಿ ಆಲೂಗಡ್ಡೆ ಸಾಗಣೆ ಲಾರಿಗಳು ಬಂದಿಲ್ಲ ಎಂದು ತಿಳಿದು ಬಂದಿದೆ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !