ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ವಸ್ತು ಸಂಗ್ರಹಾಲಯಕ್ಕೆ ದೊರೆಯಲಿದೆ ಡಿಜಿಟಲ್‌ ಸ್ಪರ್ಶ

By Nayana
|
Google Oneindia Kannada News

ಬೆಂಗಳೂರು, ಜೂನ್‌ 27: ಕೆಂಪೇಗೌಡ ಜಯಂತಿ ಹತ್ತಿರಬರುತ್ತಿದ್ದಂತೆಯೇ ಒಂದು ದಿನ ಮೊದಲು ಎಚ್ಚೆತ್ತ ಬಿಬಿಎಂಪಿ ಕೆಂಪೇಗೌಡ ವಸ್ತು ಸಂಗ್ರಹಾಲಯದ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿದೆ.

ಮೇಯೋಹಾಲ್‌ನಲ್ಲಿರುವ 135 ವರ್ಷ ಹಳೆಯ ವಸ್ತು ಸಂಗ್ರಹಾಲಯ ಇದಾಗಿದೆ. ವಸ್ತುಸಂಗ್ರಹಾಲಯದ ಹಲವು ಭಾಗಗಳಲ್ಲಿ ನೀರು ಸೋರುತ್ತಿತ್ತು. ವಸ್ತು ಸಂಗ್ರಹಾಲಯವನ್ನು 7.5 ಕೋಟಿ ರೂ, ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಬಿಬಿಎಂಪಿ ಮೇಯರ್‌ ಸಂಪತ್‌ರಾಜ್‌ ತಿಳಿಸಿದ್ದಾರೆ.

ಕೆಂಪೇಗೌಡರ ಕನಸಿನ ಬೆಂಗಳೂರು ಮರು ನಿರ್ಮಾಣವಾಗಬೇಕು: ಸಂಸದ ರಾಜೀವ್‌ ಕೆಂಪೇಗೌಡರ ಕನಸಿನ ಬೆಂಗಳೂರು ಮರು ನಿರ್ಮಾಣವಾಗಬೇಕು: ಸಂಸದ ರಾಜೀವ್‌

ವಸ್ತುಸಂಗ್ರಹಾಲಯಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಕೆಂಪೇಗೌಡ ಮತ್ತು ಅವರ ವಂಶಸ್ಥರು ಬೆಂಗಳೂರಿಗೆ ನೀಡಿದ ಕೊಡುಗೆಯನ್ನು ಪ್ರವಾಸಗರಿಗೆ ತಿಳಿಸಿಕೊಡಲು ಸಂಗ್ರಹಾಲಯಕ್ಕೆ ಡಿಜಿಟಲ್‌ ಸ್ಪರ್ಶ ನೀಡುವ ಮೂಲಕ ಮೇಲ್ದರ್ಜೆಗೆ ಏರಿಸಲಾಗುತ್ತದೆ. ಅದಕ್ಕಾಗಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.

Apathy, ants nibble away at Kempegowda museum’s glory

ಕೆಂಪೇಗೌಡರ ಸಾಧನೆ ತಿಳಿಸಲು ಡಿಜಿಟಲ್‌ ಲೈಟಿಂಗ್‌ ಮೂಲಕ 20 ನಿಮಿಷ್ಗಳ ವಿಡಿಯೋ ಚಿತ್ರ, ವಂಶಸ್ಥರಿಗೆ ಸೇರಿದ ವಸ್ತುಗಳನ್ನು ಸಂಗ್ರಹಿಸಿ ಪ್ರದರ್ಶಿಸಲಾಗುವುದು. ಸಂಗ್ರಹಾಲಯದ ಭದ್ರತೆಗಾಗಿ ಒಳಗೆ ,ತ್ತು ಹೊರಗೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ. ನಗರದ ಎಲ್ಲಾ ಗ್ರಂಥಾಲಯಹಳಲ್ಲೂ ಕೆಂಪೇಗೌಡರ ಇತಿಹಾಸ ತಿಳಿಸುವ ತಲಾ 5 ಪುಸ್ತಕಗಳನ್ನು ವಿತರಿಸಲಾಗುತ್ತದೆ ಎಂದು ಹೇಳಿದರು.

ಕೆಂಪೇಗೌಡರಿಗೆ ಸಂಬಂಧಿಸಿದ ಸವ್ತುಗಳ ಯಾರ ಬಳಿ ಇದ್ದರೂ ಅದನ್ನು ಬಿಬಿಎಂಪಿಗೆ ನೀಡಿದರೆ ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತದೆ ಎಂದರು.

English summary
A day before the state is set to observe Kempegowda Jayanti, the BBMP on Tuesday woke up to the task of restoring the Kempegowda museum located on the first floor of the 135-year-old Mayo Hall building.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X