• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಂತರಿಕ್ಷ್-ದೇವಾಸ್ ಕೇಸ್ : ಬೆಂಗಳೂರು ಮೂಲದ ಕಂಪನಿಗೆ ಭಾರಿ ದಂಡ

|

ಬೆಂಗಳೂರು, ಫೆಬ್ರವರಿ 03: ಫೆಮಾ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಬೆಂಗಳೂರು ಮೂಲದ ದೇವಾಸ್ ಮಲ್ಟಿಮೀಡಿಯಾ ಕಂಪನಿಗೆ 1585 ಕೋಟಿ ರು ದಂಡ ವಿಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇಡಿ) ಪ್ರಕಟಣೆ ಹೊರಡಿಸಿದೆ.

ಇಸ್ರೋದ ಕೆಲವು ಮಾಜಿ ಉದ್ಯೋಗಿಗಳು ಸೇರಿಕೊಂಡು 2005ರಲ್ಲಿ ದೇವಾಸ್ ಎಂಬ ಸಂಸ್ಥೆ ಸ್ಥಾಪಿಸಿದ್ದರು. ಈ ಸಂಸ್ಥೆ ಹಾಗೂ ಇಸ್ರೋದ ವಾಣಿಜ್ಯ ವಿಭಾಗದ ಸಂಸ್ಥೆ ಅಂತರಿಕ್ಷ್ ಕಾರ್ಪೋರೇಷನ್ ಜತೆ ಒಪ್ಪಂದವಾಗಿತ್ತು. ಈ ಒಪ್ಪಂದ ಪ್ರಕಾರ, 2 ಉಪಗ್ರಹಗಳ ಬ್ಯಾಂಡ್ ವಿಡ್ತ್ ಅನ್ನು ಡಿಜಿಟಲ್ ಮಿಡಿಯಾ ಹಾಗೂ ಬ್ರಾಡ್ ಕಾಸ್ಟಿಂಗ್ ವಿಷಯಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ದೇವಾಸ್ ಮಲ್ಟಿಮೀಡಿಯಾದ ಡಿಜಿಟಲ್ ಮೀಡಿಯಾ ಹಾಗೂ ಬ್ರಾಡ್ ಕಾಸ್ಟಿಂಗ್ ಗೆ ನೀಡಬೇಕಿತ್ತು.

ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆಯಲ್ಲಿ ಮಹಿಳೆ

ಆದರೆ, ದೇವಾಸ್ ನ ನಿರ್ದೇಶಕರು, ವಿದೇಶಿ ವಿನಿಮಯ ಕಾಯ್ದೆ (ಫೆಮಾ) ಉಲ್ಲಂಘನೆ ಮಾಡಿ ಅಕ್ರಮವಾಗಿ 579 ಕೋಟಿ ರು ಹೂಡಿಕೆ ಮಾಡಿರುವುದು ಪತ್ತೆಯಾಗಿತ್ತು. 2012ರಲ್ಲಿ ಕಂಪನಿ ವಿರುದ್ಧ ಇಡಿ ದೂರು ದಾಖಲಿಸಿತ್ತು. ಇದಕ್ಕೆ ಇಡಿಯ ವಿಶೇಷ ಕೋರ್ಟ್ ಸಮ್ಮತಿ ನೀಡಿದೆ. ಹೀಗಾಗಿ, ದೇವಾಸ್ ಮಲ್ಟಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ಡಿಎಂಪಿಎಲ್, ಫೆಮಾ ಹಾಗೂ ಎಫ್​ಡಿಐ ನಿಮಯ ಉಲ್ಲಂಘಿಸಿರುವುದು ಸಾಬೀತಾಗಿದೆ. ಈ ನಿಟ್ಟಿನಲ್ಲಿ 1585.20 ಕೋಟಿ ರು ದಂಡ ವಿಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An Adjudicating Authority under the Foreign Exchange Management Act (FEMA) has imposed a penalty of over 1585 crore rupees on Devas Multimedia in connection with the violation of foreign exchange laws in the Antrix-Devas deal case.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more