ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಂಬಾಕು ಸೇವನೆಯ ವಿರುದ್ಧ ಬೆಂಗಳೂರಿನಲ್ಲಿ ವಾಕಥಾನ್

By Prasad
|
Google Oneindia Kannada News

ಬೆಂಗಳೂರು, ಮೇ 31 : ಎನಿಮೇಶನ್, ವಿಎಫ್‌ಎಕ್ಸ್, ಮಲ್ಟಿಮೀಡಿಯಾ ಮತ್ತು ಗೇಮಿಂಗ್ ಕ್ಷೇತ್ರಗಳ ಮಂಚೂಣಿ ಸಂಸ್ಥೆ ಮಾಯಾ ಅಕಾಡೆಮಿ ಆಫ್ ಅಡ್ವಾನ್ಸ್ಡ್ ಸಿನಿಮ್ಯಾಟಿಕ್ಸ್ (ಮ್ಯಾಕ್), ವಿಶ್ವ ತಂಬಾಕು ಮುಕ್ತ ದಿನದ ಅಂಗವಾಗಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಮೂಡಿಸಲು ಮಂಗಳವಾರ ವಾಕಥಾನ್ ಸಂಘಟಿಸಿತ್ತು.

ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪಾಲಕರು ಹಾಗೂ ತಂಬಾಕು ವಿರೋಧಿ ಕಾರ್ಯಕರ್ತರು ಎಂ.ಜಿ.ರಸ್ತೆಯ ಮೆಟ್ರೋ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಆಯೋಜಿಸಲಾಗಿದ್ದ ನಡಿಗೆಯಲ್ಲಿ ಪಾಲ್ಗೊಂಡಿದ್ದರು.

ಧೂಮಪಾನವು ಭಾರತದಲ್ಲಿ ಪ್ರತಿವರ್ಷವೂ ಸುಮಾರು ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಬಲಿಪಡೆದುಕೊಳ್ಳುತ್ತಿದೆ. ಇದು ಕ್ಯಾನ್ಸರ್, ಮತ್ತು ಹೃದಯರೋಗಗಳಂತಹ ಸಾಂಕ್ರಾಮಿಕವಲ್ಲದ ರೋಗಗಳು ಹೆಚ್ಚಿನ ಪ್ರಮಾಣದಲ್ಲಿ ಉಂಟಾಗಲು (ಎನ್‌ಎಸ್‌ಡಿ) ಕಾರಣವಾಗಿದೆ. ಇದರಿಂದಾಗಿಯೇ ಶೇ.53ರಷ್ಟು ಸಾವುಗಳು ಸಂಭವಿಸುತ್ತಲಿವೆ. [ಧೂಮಪಾನಿಗಳು ಓದಲೇಬೇಕಾದ ಸಮೀಕ್ಷೆಯಿದು!]

Anti Tobacco Day : Walkathon by MAAC in Bengaluru

ಎಲ್ಲಕ್ಕೂ ಹೆಚ್ಚಿನದಾಗಿ, ಭಾರತದಲ್ಲಿ ಸಿಗರೇಟು ಸೇವನೆಯ ಕುರಿತಾಗಿ ಆರೋಗ್ಯ ಸಚಿವಾಲಯವು ಪ್ರಕಟಿಸಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ತಂಬಾಕು ಉಪಯೋಗಿಸುವವರ ಜನಸಂಖ್ಯೆ ನಿಧಾನವಾಗಿ ಕಡಿಮೆಯಾಗುತ್ತಿದ್ದರೂ, ಮಹಿಳೆಯರು ಧೂಮಪಾನ ವ್ಯಸನಕ್ಕೆ ಹೆಚ್ಚು ಬಲಿಯಾಗುತ್ತಿರುವದು ಕಂಡುಬರುತ್ತಿದೆ. ಯುನೈಟೆಡ್ ಸ್ಟೇಟ್ಸ್ ನಂತರ ಭಾರತವು ಮಹಿಳಾ ಧೂಮಪಾನಿಗಳನ್ನು ಹೆಚ್ಚಾಗಿ ಹೊಂದಿರುವ ಎರಡನೆಯ ದೊಡ್ಡ ರಾಷ್ಟ್ರವಾಗಿದೆ.

ರಾಷ್ಟ್ರಮಟ್ಟದ ಶೇ.35ರಷ್ಟು ತಂಬಾಕು ಸೇವನೆಯ ಪ್ರಮಾಣಕ್ಕೆ ಹೋಲಿಸಿದರೆ ಕರ್ನಾಟಕ ರಾಜ್ಯವು ಕಡಿಮೆ ಪ್ರಮಾಣವನ್ನು ಹೊಂದಿದೆಯಾದರೂ, ಕೇಂದ್ರ ಆರೋಗ್ಯ ಸಚಿವಾಲಯವು ನಡೆಸಿದ ಇತ್ತೀಚಿನ ಸರ್ವೆಯೊಂದರ ಪ್ರಕಾರ, ರಾಜ್ಯದಲ್ಲಿ ತಂಬಾಕು ಉಪಯೋಗಿಸುವ ಹೆಚ್ಚಿನ ಜನರು 19 ವರ್ಷ ವಯಸ್ಸಿನ ಒಳಗಿನವರು ಎಂಬ ಆಘಾತಕಾರಿ ಅಂಶ ತಿಳಿದು ಬರುತ್ತದೆ.

ಇಂದು ಜರುಗಿದ ವಾಕಥಾನ್ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪ್ಯಾಸಿವ್ ಸ್ಮೋಕಿಂಗ್ (ಪರೋಕ್ಷ ಧೂಮಪಾನ) ಕುರಿತು ಜನರಿಗೆ ಉತ್ಸಾಹದಿಂದ ಮಾಹಿತಿ ನೀಡಿದರು. ಪರಿಣಿತರ ಪ್ರಕಾರ ತಂಬಾಕು ಸಂಬಂಧಿತ ಮರಣಗಳಲ್ಲಿ ಸುಮಾರು ಶೇ.10ಷ್ಟು ಪ್ಯಾಸಿವ್ ಸ್ಮೋಕಿಂಗ್‌ನಿಂದ ಉಂಟಾಗುತ್ತವೆ. [ಸಿಗರೇಟು ಶಾಶ್ವತವಾಗಿ ಸುಟ್ಟಾಕಿ : ಸೆಲೆಬ್ರಿಟಿಗಳ ಕೂಗು]


ಮನೆ ಅಥವಾ ಕಚೇರಿಗಳ ಒಳಾವರಣದಲ್ಲಿ ಧೂಮಪಾನ ಮಾಡುವ ವ್ಯಕ್ತಿಯು ಸೃಷ್ಟಿಸುವ ತಂಬಾಕು ಸಹಿತ ಹೊಗೆಯ ತೆಳು ಪದರವು, ಇತರ ವ್ಯಕ್ತಿಗಳು ಕೂಡ ಅದನ್ನು ಸೇವಿಸುವಂತೆ ಮಾಡುತ್ತದೆ. ಸಿಗರೇಟಿನ ಹೊಗೆಯಲ್ಲಿರುವ ಈ ಎಲ್ಲ ವಿಷಕಾರಕಗಳು ಕಣ್ಣು, ಮೂಗು, ಗಂಟಲು, ಶ್ವಾಸಕೋಶಗಳಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತವೆ ಮತ್ತು ಗಂಬೀರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಲ್ಲವು.

ಈ ಸಂದರ್ಭದಲ್ಲಿ ಮಾತನಾಡಿದ ಮ್ಯಾಕ್‌ನ ಉಪಾಧ್ಯಕ್ಷ ಶಾಜನ್ ಸ್ಯಾಮ್ಯುಯೆಲ್ ಅವರು, ಜಾಗತಿಕವಾಗಿ, ಧೂಮಪಾನ ಮತ್ತು ತಂಬಾಕು ಸೇವನೆಯ ಪ್ರಮಾಣ ತಗ್ಗುತ್ತಲಿದೆ. ತಂಬಾಕು ಉಪಯೋಗವನ್ನು ತಗ್ಗಿಸಲು ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರ ಹೊರತಾಗಿಯೂ, ವಾಸ್ತವಿಕವಾಗಿ ಅಲ್ಲಿ ಹೆಚ್ಚಿನ ಅಂತರ ಇನ್ನೂ ಉಳಿದುಕೊಂಡಿದೆ ಎಂದರು. [ತಂಬಾಕು ಬೇಕಿದ್ರೆ ಸೇವಿಸಿ, ದುಷ್ಪರಿಣಾಮ ನೀವೇ ಅನುಭವಿಸಿ!]

English summary
Volunteers took part in a rally to mark the World No-Tobacco day in Bengaluru on May 31st, World No Tobacco Day. The walkathon was organized by Maac organization. The rally was organized to create awareness about health hazards of smoking and tobacco chewing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X