ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಧಾ ಕೆಎಎಸ್ ಮನೆ ದಾಳಿ, ಎಸಿಬಿ ಕೊಟ್ಟ ಫುಲ್ ಡಿಟೈಲ್ಸ್

|
Google Oneindia Kannada News

ಬೆಂಗಳೂರು, ನ. 9: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದಲ್ಲಿ ಭೂ ಒತ್ತುವರಿ ಅಧಿಕಾರಿಯಾಗಿದ್ದ ಡಾ. ಸುಧಾ ಅವರ ಮನೆ, ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ನಡೆಸಿದ ದಾಳಿ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರಿನ ಶಾಂತಿನಗರದಲ್ಲಿರುವ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಆಡಳಿತಾಧಿಕಾರಿ ಡಾ.ಬಿ.ಸುಧಾ (ಕೆ.ಎ.ಎಸ್) ಅವರ ವಿರುದ್ದ ಅಕ್ರಮ ಆಸ್ತಿಗಳ ಗಳಿಕೆ ಆರೋಪ ಕೇಳಿಬಂದಿತ್ತು. ಇದಕ್ಕೆ ಸಂಬಂಪಟ್ಟಂತೆ ಶನಿವಾರದಂದುಬೆಂಗಳೂರು, ಮೈಸೂರು ಹಾಗೂ ಉಡುಪಿ ಜಿಲ್ಲೆಯ ಒಟ್ಟು 7 ಸ್ಥಳಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ ಹಾಗೂ ಸಿಬ್ಬಂದಿಯವರ 6 ವಿವಿಧ ತಂಡಗಳಿಂದ ಶೋಧನೆ ಕಾರ್ಯವನ್ನು ಕೈಗೊಂಡರು.

ಮನೆ, ಕಚೇರಿಯಲ್ಲಿ ದಾಳಿ ನಡೆಸಿದ ವೇಳೆಯಲ್ಲಿ ಈ ಕೆಳಕಂಡಂತೆ ಚರ ಮತ್ತು ಸ್ಥಿರಾಸ್ತಿಗಳು ಪತ್ತೆಯಾಗಿದ್ದು ಇವುಗಳ ಬಗ್ಗೆ ತನಿಖೆ ಮುಂದುವರೆದಿರುತ್ತದೆ.

Anti-Corruption Bureau update on raids KAS officer B Sudhas house

* ಆರೋಪಿತರು ಮತ್ತು ಅವರ ಕುಟುಂಬ ಸದಸ್ಯರು ಹಾಗು ಅವರಿಗೆ ಪರಿಚಯವಿರುವ ಇತರೆ ವ್ಯಕ್ತಿಗಳ ಹೆಸರಿನಲ್ಲಿರುವ ಸುಮಾರು 200ಕ್ಕೂ ಹೆಚ್ಚು ಸ್ವತ್ತಿಗೆ ಸಂಬಂಧಪಟ್ಟ ದಾಖಲಾತಿಗಳು, ಆಸ್ತಿಗಳ ಕ್ರಯ ಪತ್ರಗಳು, ಜಿಪಿಎ ಪತ್ರಗಳು, ಕೆಲವು ಒಪ್ಪಂದದ ಕರಾರು ಪತ್ರಗಳು ಮತ್ತು ಇತರೆ ದಾಖಲಾತಿಗಳು ದೊರೆತ್ತಿರುತ್ತವೆ.
* ಆರೋಪಿತರು ಮತ್ತು ಬೇರೆ ವ್ಯಕ್ತಿಗಳ ಹೆಸರಿನಲ್ಲಿ ವಿವಿಧ ಬ್ಯಾಂಕ್‍ಗಳಲ್ಲಿ ಸುಮಾರು 50 ಬ್ಯಾಂಕ್ ಖಾತೆಗಳ ವಿವರಗಳು, ಸುಮಾರು 50 ಕ್ಕೂ ಅಧಿಕ ಚೆಕ್ ಲೀಫ್‍ಗಳು ದೊರೆತಿವೆ.
* ಆರೋಪಿತರು ಮತ್ತು ಅವರೊಂದಿಗೆ ವ್ಯವಹಾರದ ಸಂಬಂಧ ಸಂಪರ್ಕದಲ್ಲಿರುವ ವ್ಯಕ್ತಿಗಳ ಮನೆಯಲ್ಲಿ ರೂ. 36,89,000/- ನಗದು ಹಣ ದೊರೆತ್ತಿರುತ್ತದೆ.
* ಆರೋಪಿ ಡಾ||.ಬಿ.ಸುಧಾ ಮತ್ತು ಅವರಿಗೆ ಸಂಬಂಧಪಟ್ಟ ಇತರೆ ವ್ಯಕ್ತಿಗಳ ಬ್ಯಾಂಕ್‍ಖಾತೆಗಳಲ್ಲಿ ಸುಮಾರು 3.5 ಕೋಟಿ ರೂ.ಗಳು ಠೇವಣಿಗಳು ಪತ್ತೆಯಾಗಿರುತ್ತದೆ.
* ಆರೋಪಿತರು ಮತ್ತು ಅವರಿಗೆ ಸಂಬಂಧಪಟ್ಟ ಇತರೆ ವ್ಯಕ್ತಿಗಳ ಮನೆಯಲ್ಲಿ ಸುಮಾರು 3.7 ಕೆ.ಜಿ ಚಿನ್ನಾಭರಣಗಳು ಮತ್ತು ಸುಮಾರು 10.5 ಕೆ.ಜಿ ಗಳು ಬೆಳ್ಳಿಯ ವಸ್ತಗಳು ಪತ್ತೆಯಾಗಿರುತ್ತದೆ.

Recommended Video

Joe Biden Family Connection with India : ನಮ್ ಕುಟುಂಬದವರು ಇನ್ನೂ ಮುಂಬೈ ಅಲ್ಲಿ ಇದಾರೆ! | Oneindia Kannada

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲೆಗಳ ಪರಿಶೀಲನಾ ಕಾರ್ಯ ಕೈಗೊಂಡಿದ್ದು, ಸುಧಾ ಅವರ ಆಪ್ತರ ಮನೆ ಪರಿಶೀಲನೆಯೂ ಜಾರಿಯಲ್ಲಿದ್ದು, ಪ್ರಕರಣದಲ್ಲಿ ತನಿಖೆ ಮುಂದುವರೆದಿರುತ್ತದೆ ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದಾರೆ.

English summary
Anti-Corruption Bureau has issued a latest update on raids KAS officer B Sudha's house in Bengaluru. Sudha was the land acquisition officer at Bangalore Development Authority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X