ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಪಾದರಾಯನಪುರದಲ್ಲಿ ಮತ್ತೋರ್ವ ಗರ್ಭಿಣಿಗೆ ಕೊರೊನಾ ಸೋಂಕು

|
Google Oneindia Kannada News

ಬೆಂಗಳೂರು, ಮೇ 9: ನಗರದ ಪಾದರಾಯನಪುರದಲ್ಲಿ ಮತ್ತೋರ್ವ ಗರ್ಭಿಣಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮಧ್ಯಾಹ್ನ ಪಾದರಾಯನಪುರದ ಗರ್ಭಿಣಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಅದೇ ವ್ಯಾಪ್ತಿಯ ಮತ್ತೊಬ್ಬ ಗರ್ಭಿಣಿಗೆ ಸೋಂಕು ಕಾಣಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ಇಂದು ಬೆಂಗಳೂರಿನ ಒಟ್ಟು 16 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಪಾದರಾಯನಪುರ 10ನೇ ಕ್ರಾಸ್ ನಿವಾಸಿ 19 ವರ್ಷದ 8 ತಿಂಗಳು ಗರ್ಭಿಣಿಗೆ ಸೋಂಕು ತಗುಲಿದೆ. ಮಹಿಳೆಯ ಪತಿ (ರೋಗಿ 706)ಗೆ ಸಾಮೂಹಿಕ ಪರೀಕ್ಷೆಯಲ್ಲಿ ಕೊರೊನಾ ಸೋಂಕು ತಗುಲಿದ್ದು ಪತ್ತೆಯಾಗಿತ್ತು. ಪತಿಯ ಸಂಪರ್ಕದಲ್ಲಿದ್ದರಿಂದ ಸೋಂಕು ತಗುಲಿದೆ.

pregnant

ರಾಜ್ಯ ರಾಜಧಾನಿಯಲ್ಲಿ ಕೊರೊನಾ ಅಬ್ಬರಿಸುತ್ತಿದ್ದು, ಇಂದು ಇಬ್ಬರು ಗರ್ಭಿಣಿಯರಿಗೆ ಕೊರೊನಾ ಸೋಂಕು ತಗುಲಿದೆ. ಮಹಿಳೆ ಹೊಟ್ಟೆ ನೋವು ಎಂದು ನಗರದ ವಾಣಿ ವಿಲಾಸ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮವಾಗಿ ಮಹಿಳೆಯ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದರು.

ಪಾದರಾಯನಪುರದಲ್ಲಿ ಇಂದು ಮತ್ತೆ 3 ಪ್ರಕರಣಗಳು ದೃಢಪಟ್ಟಿವೆ, ಶುಕ್ರವಾರ ನಾಲ್ಕು ಪ್ರಕರಣಗಳು ಪತ್ತೆಯಾಗಿತ್ತು.

ಇದೀಗ ಮಹಿಳೆ ಕೊರೊನಾ ತಗುಲಿದ್ದು ದೃಢವಾಗಿದ್ದು, ವಾಣಿ ವಿಲಾಸ ಆಸ್ಪತ್ರೆಯಿಂದ ವಾಣಿ ವಿಲಾಸ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಹೊಂಗಸಂದ್ರದಲ್ಲಿ ಕ್ವಾರಂಟೈನ್ ಮುಗಿಸಿದ್ದ ಐವರಿಗೆ ಕೊರೊನಾಹೊಂಗಸಂದ್ರದಲ್ಲಿ ಕ್ವಾರಂಟೈನ್ ಮುಗಿಸಿದ್ದ ಐವರಿಗೆ ಕೊರೊನಾ

ಹೊಂಗಸಂದ್ರದಲ್ಲಿ ಕ್ವಾರಂಟೈನ್ ಮುಗಿಸಿದ್ದ ಐವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಬಿಹಾರಿ ಕೂಲಿ ಕಾರ್ಮಿಕನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 184 ಜನರನ್ನ ಹೋಟೆಲ್ ಕ್ವಾರಂಟೈನ್ ಮಾಡಲಾಗಿತ್ತು. ಇವರನ್ನು 14 ದಿನಗಳು ಕ್ವಾರಂಟೈನ್ ಮುಗಿದ ನಂತರ ಮತ್ತೆ ಟೆಸ್ಟ್ ಗೆ ಒಳಪಡಿಸಿದ್ದಾರೆ.

2ನೇ ಟೆಸ್ಟ್‌ನಲ್ಲಿ ಬರೋಬ್ಬರಿ 5 ಜನರಿಗೆ ಪಾಸಿಟಿವ್ ಬಂದಿದೆ. ಸೋಂಕು ಪತ್ತೆಯಾದ ಐದು ಜನರಲ್ಲಿ ಒಬ್ಬರು ಅಲ್ಲಿನ ಸ್ಥಳೀಯರು, ಮೂವರು ಕೂಲಿ ಕಾರ್ಮಿಕರು ಮತ್ತು ಒಬ್ಬರು ಕನ್ನಡಿಗರಿದ್ದಾರೆ.

English summary
Another pregnant woman has been confirmed infected with coronavirus in the city of Padarayanapura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X