ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಕುಸಿತ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 17 : ಬೆಂಗಳೂರಿನ ಈಜಿಪುರದಲ್ಲಿ ಕಟ್ಟಡ ಕುಸಿದು 7 ಮಂದಿ ಸಾವನ್ನಪ್ಪಿರುವ ಕಹಿ ನೆನಪು ಮಾಸುವ ಮುನ್ನವೇ ನಗರದಲ್ಲಿ ಮತ್ತೊಂದು ಕಟ್ಟಡ ಕುಸಿದಿದೆ.

ಸಿಲಿಂಡರ್ ಸ್ಫೋಟ, ಕಟ್ಟಡ ಕುಸಿತ, 7 ಮಂದಿ ದುರ್ಮರಣಸಿಲಿಂಡರ್ ಸ್ಫೋಟ, ಕಟ್ಟಡ ಕುಸಿತ, 7 ಮಂದಿ ದುರ್ಮರಣ

ನಗರದ ಯಶವಂಪುರ ವಾರ್ಡ್ ನಂಬರ್ 37ರಲ್ಲಿ ಚಿಕ್ಕರಾಮಣ್ಣ ಎಂಬುವರಿಗೆ ಸೇರಿದ ಕಟ್ಟಡ ಇಂದು (ಮಂಗಳವಾರ) ಬೆಳಗ್ಗೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Another one building Collapse in Bengaluru

25ವರ್ಷಗಳ ಹಳೆ ಕಟ್ಟಡ ಇದಾಗಿದ್ದು, ಹಲವು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂಧಾಗಿ ಕಟ್ಟಡ ಶಿಥಿಲಗೊಂಡು ಕುಸಿದಿದೆ ಎನ್ನಲಾಗಿದೆ.

ಹಳೆ ಕಟ್ಟಡದಲ್ಲಿ ಕೆಳಗಡೆ ಎರಡು ಅಂಗಡಿಗಳು ಇದ್ದು, ಮೇಲೆ ಒಂದು ಮನೆಯನ್ನ ಬಾಡಿಗೆಗೆ ನೀಡಲಾಗಿತ್ತು. ಕೆಳ ಅಂಗಡಿಗಳಿಗೆ ಮಳೆ ನೀರು ನುಗ್ಗಿ ತಳಹದಿ ಕುಸಿದ ಪರಿಣಾಮ ಕಟ್ಟಡ ವಾಲಿದೆ.

Another one building Collapse in Bengaluru

ಮೇಲೆ ಬಾಡಿಗೆ ಮನೆಯಲ್ಲಿದ್ದ ಟಿವಿ, ಫ್ರಿಡ್ಜ್ ಹಾಗು ಗೃಹೋಪಯೋಗಿ ವಸ್ತುಗಳು ನಾಶವಾಗಿವೆ. ಘಟನೆ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಸ್ಥಳೀಯ ಕಾರ್ಪೊರೇಟರ್ ಬಿ.ಕೆ.ವೆಂಕಟೇಶ್ ಮತ್ತು ಬಿಬಿಎಂಪಿ ಎಇಇ ಉಮೇಶ್ ಹಾಗೂ ಯಶವಂತಪುರ ಪೊಲೀಸರು ಭೇಟಿ ನೀಡಿ ಪರಿಶೀಲಿನೆ ನಡೆಸಿದರು.

English summary
After Ejipura tragedy, another one building adjacent to Rajakaluve collapses at Yeshwanthpur in Bengaluru, on October 17th. no casualties in the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X