ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ಪಿಲ್ಲರ್‌ ಬೇರಿಂಗ್‌ನಲ್ಲಿ ದೋಷ, ಪ್ರಯಾಣಿಕರು ಕಂಗಾಲು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 16: ಮೆಟ್ರೋ ಪಿಲ್ಲರ್‌ಬೇರಿಂಗ್‌ನಲ್ಲಿ ದೋಷ ಕಂಡುಬಂದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಆದರೆ, ರೈಲು , ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಮೇಯೋಹಾಲ್ ಬಳಿಯ 174ನೇ ಸಂಖ್ಯೆಯ ಮೆಟ್ರೋ ಪಿಲ್ಲರ್ ಬೇರಿಂಗ್‌ನಲ್ಲಿ ದೋಷ ಕಂಡು ಬಂದಿದೆ.ಹಳೆ ಮಾರ್ಗವಾಗಿರುವುದರಿಂದ ಈ ರೀತಿಯ ಸಮಸ್ಯೆಗಳು ಸಹಜ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೆಟ್ರೋ ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಹೀಗೂ ಮಾಡಬಹುದುಮೆಟ್ರೋ ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಹೀಗೂ ಮಾಡಬಹುದು

ಈ ನಡುವೆ ಎಂಜಿ ರಸ್ತೆ ಮೆಟ್ರೋ ಮಾರ್ಗ ಕಂಬಗಳಲ್ಲಿ ಪದೇ ಪದೇ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಈ ಸಂಬಂಧ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ದೂರು ನೀಡಲು ಬಿಎಂಆರ್‌ಸಿಎಲ್ ಸಂಘ ನಿರ್ಧರಿಸಿದೆ.

 ಪರಿಶೀಲನೆ ಮಾಡಿದಾಗ ದೋಷ ಪತ್ತೆ

ಪರಿಶೀಲನೆ ಮಾಡಿದಾಗ ದೋಷ ಪತ್ತೆ

ಈ ಮಾರ್ಗದಲ್ಲಿ ಬಿಎಂಆರ್‌ಸಿಎಲ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದ ವೇಳೆ ದೋಷ ಪತ್ತೆಯಾಗಿದೆ. ಟ್ರಿನಿಟಿ, ಇಂದಿರಾನಗರ ನಿಲ್ದಾಣದಲ್ಲಿನ ಕಂಬದಂತೆಯೇ ಈ ಕಂಬದಲ್ಲೂ ಬೇರಿಂಗ್ ದುರಸ್ತಿಗೆ ಬಂದಿದೆ.

 ಕಳೆದ ಎರಡು ದಿನಗಳಿಂದ ದುರಸ್ತಿ ಕಾರ್ಯ

ಕಳೆದ ಎರಡು ದಿನಗಳಿಂದ ದುರಸ್ತಿ ಕಾರ್ಯ

ಕಳೆದ ಎರಡು ದಿನಗಳಿಂದ ರಾತ್ರಿ ವೇಳೆ ದುರಸ್ತಿ ಕಾಮಗಾರಿ ನಡೆಯುತ್ತಿದೆ.ಬಿಎಂಆರ್‌ಸಿಎಲ್ 2011ರಲ್ಲಿ ಬೈಯಪ್ಪನಹಳ್ಳಿ-ಎಂಜಿ ರಸ್ತೆ ರ್ಮಾದಲ್ಲಿ ರೈಲು ಕಾರ್ಯಾಚರಣೆ ಆರಂಭಿಸಿತ್ತು. ಹಳೇ ಮಾರ್ಗವಾಗಿರುವ ಹಿನ್ನೆಲೆಯಲ್ಲಿ ಆಗಾಗ ದೋಷ ಕಾಣಿಸಿಕೊಳ್ಳುತ್ತಿದೆ. ಕಳೆದ ವರ್ಷ ಟ್ರಿನಿಟಿ ನಿಲ್ದಾಣದ ಕಂಬವೊಂದರಲ್ಲಿ ಬೇರಿಂಗ್ ಹಾಳಾದಾಗ ದುರಸ್ತಿ ಮಾಡಲಾಗಿತ್ತು. ದೊಡ್ಡ ಮಟ್ಟದ ಕಾಮಗಾರಿ ನಡೆಸಿದ್ದರಿಂದ ಅಂದು ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಹಸಿರು ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿಹಸಿರು ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ

 ಕಳಪೆ ಕಾಮಗಾರಿಯೇ ಕಾರಣ?

ಕಳಪೆ ಕಾಮಗಾರಿಯೇ ಕಾರಣ?

ಬಿಎಂಆರ್‌ಸಿಎಲ್ ಕಳಪೆ ಕಾಮಗಾರಿಯಿಂದ ಪಿಲ್ಲರ್ ಬೇರಿಂಗ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆಯೇ ಎಂಬ ಅನಮಾನಗಳು ಶುರುವಾಗಿದೆ. ಇತ್ತ ಪ್ರಯಾಣಿಕರ ಕಣ್ಣು ತಪ್ಪಿಸಿ ಬಿಎಂಆರ್‌ಸಿಎಲ್ ದುರಸ್ತಿ ಕಾರ್ಯ ಮಾಡುತ್ತಿದೆ. ರಾತ್ರೋರಾತ್ರಿ ಪಿಲ್ಲರ್ ದುರಸ್ತಿ ಮಾಡಿದ್ದು, ಮೆಟ್ರೋ ಮೊದಲ ಹಂತದ ನಿರ್ಮಾಣ ಕಾಮಗಾರಿಯಲ್ಲಿ ಲೋಪ ಉಂಟಾಗಿದೆಯಾ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.

 ಮೊದಲ ಬಾರಿ ಟ್ರಿನಿಟಿ ವೃತ್ತದಲ್ಲಿ ದೋಷ ಕಾಣಿಸಿಕೊಂಡಿತ್ತು

ಮೊದಲ ಬಾರಿ ಟ್ರಿನಿಟಿ ವೃತ್ತದಲ್ಲಿ ದೋಷ ಕಾಣಿಸಿಕೊಂಡಿತ್ತು

ಮೊದಲ ಬಾರಿಗೆ ಟ್ರಿನಿಟಿ ವೃತ್ತದ ಮೆಟ್ರೊ ನಿಲ್ದಾಣದಲ್ಲಿರುವ ಪಿಲ್ಲರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ನಂತರ ಇಂದಿರಾನಗರ, ಇದೀಗ ಮೇಯೋಹಾಲ್‌ಬಳಿ ಸಮಸ್ಯೆ ಕಾಣಿಸಿಕೊಂಡಿದೆ.ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡಲು ಬಂದ ನಮ್ಮ ಮೆಟ್ರೋ ಸೇವೆಯಿಂದ ಟ್ರಾಫಿಕ್ ಕಟಿಮೆ ಆಗದೇ ಇದ್ದರೂ ಜನರಿಗೆ ಸಮಯದ ಉಳಿತಾಯವಂತೂ ಆಗಿದೆ.

ನಮ್ಮ ಮೆಟ್ರೋ ಸ್ಮಾರ್ಟ್‌ ಕಾರ್ಡ್ ಆನ್‌ಲೈನ್ ರೀಚಾರ್ಜ್ ಏಕಾಏಕಿ ಸ್ಥಗಿತನಮ್ಮ ಮೆಟ್ರೋ ಸ್ಮಾರ್ಟ್‌ ಕಾರ್ಡ್ ಆನ್‌ಲೈನ್ ರೀಚಾರ್ಜ್ ಏಕಾಏಕಿ ಸ್ಥಗಿತ

English summary
Another Metro Pillar loses Its Bearing Near MG Road- Baiyappanahalli Station Route Of Mayohall, The bearings sit in between the pillars and the via-duct and take the whole load of the duct.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X