ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಮತ್ತೊಂದು ಎಲಿವೇಟೆಡ್ ಕಾರಿಡಾರ್ : ಪೂರ್ಣ ಮಾಹಿತಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 12: ಬೆಂಗಳೂರಲ್ಲಿ ಮತ್ತೊಂದು ಎಲಿವೇಟೆಡ್ ಕಾರಿಡಾರ್ ನಿರ್ಮಾಣವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಒಟ್ಟು 102 ಕಿ.ಮೀ ಉದ್ದದ 25,500 ಕೋಟಿ ಅಂದಾಜು ವೆಚ್ಚದ ಯೋಜನೆ ಇದಾಗಿದ್ದು, ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಬದಲು ಕೆಆರ್ ಪುರದಿಂದ ಗೊರಗುಂಟೆ ಪಾಳ್ಯದ ವರೆಗೆ ಎತ್ತರಿಸಿದ ರಸ್ತೆ ನಿರ್ಮಾಣವಾಗಲಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ.

ಎಲಿವೇಟೆಡ್ ಕಾರಿಡಾರ್ ಯೋಜನೆಯಿಂದ 1,100 ಆಸ್ತಿಗಳಿಗೆ ಹಾನಿಎಲಿವೇಟೆಡ್ ಕಾರಿಡಾರ್ ಯೋಜನೆಯಿಂದ 1,100 ಆಸ್ತಿಗಳಿಗೆ ಹಾನಿ

-ಹೆಬ್ಬಾಳದ ಸೆಂಟ್ರಲ್ ಸಿಲ್ಕ್‌ಬೋರ್ಡ್‌-6/4 ಲೇನ್ ಒಟ್ಟು 7,224 ಕೋಟಿ ರೂ ವೆಚ್ಚವಾಗಲಿದೆ.
-ಕೆಆರ್ ಪುರ ಗುರಗೊಂಟೆ ಪಾಳ್ಯ-4 ಲೇನ್, 6,245 ಕೋಟಿ ರೂ. ವೆಚ್ಚ.
-ವರ್ತೂರು ಕೋಡಿ-ಮೈಸೂರು ರಸ್ತೆ-4 ಲೇನ್, 7,083 ಕೋಟಿ ರೂ ವೆಚ್ಚ
-ಸೇಂಟ್ ಜಾನ್ ಆಸ್ಪತ್ರೆ-ಅಗರ, 4 ಲೇನ್, 826 ಕೋಟಿ ರೂ.
-ಹಲಸೂರು-ಡಿಸೋಜ ವೃತ್ತ,4 ಲೇನ್ , 733 ಕೋಟಿ ರೂ.
-ವೀಲರ್ಸ್ ಜಂಕ್ಷನ್- ಕಲ್ಯಾಣನಗರ-4 ಲೇನ್ 1633 ಕೋಟಿ ರೂ ವೆಚ್ಚ
-ರಾಮಮೂರ್ತಿನಗರ-ಐಟಿಪಿಎಲ್-4 ಲೇನ್-1731 ಕೋಟಿ ರೂ. ವೆಚ್ಚ ತಗುಲಲಿದೆ.

ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಬಿಜೆಪಿ ಮುಂದು

ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಬಿಜೆಪಿ ಮುಂದು

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಹಿಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರೂಪಿಸಿದ 102 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ಕೈಗೆತ್ತಿಕೊಳ್ಳಲು ಬಿಜೆಪಿ ಸರ್ಕಾರ ನಿರ್ಧರಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮೊದಲ ಹಂತದಲ್ಲಿ ಏನೇನು ಕೆಲಸ

ಮೊದಲ ಹಂತದಲ್ಲಿ ಏನೇನು ಕೆಲಸ

ಬಿಜೆಪಿ ಸರ್ಕಾರ ಮೊದಲ ಹಂತದಲ್ಲಿ ಕೆಆರ್ ಪುರಂ ಕಂಟೋನ್ಮೆಂಟ್ ಮಾರ್ಗವಾಗಿ ಗೊರಗುಂಟೆ ಪಾಳ್ಯವರೆಗಿನ 6245 ಕೋಟಿ ರೂ ವೆಚ್ಚದ 20 ಕಿ.ಮೀ ಉದ್ದದ ಯಜನೆ ಕೈಗೆತ್ತಿಕೊಳ್ಳಲು ಸಿದ್ಧವಾಗಿದೆ. ಇದಕ್ಕೆ ಹೊಸದಾಗಿ ಟೆಂಡರ್ ಕರೆಯಲಾಗುತ್ತದೆ. ಹೈಕೋರ್ಟ್ ತಡೆ ನೀಡಿರುವ ಟೆಂಡರ್ ಮಾರ್ಗ ಬೇರೆ ಆಗಿರುವುದರಿಂದ ಪ್ರಸ್ತುತ ಮತ್ತೊಂದು ಹಂತದ ಮಾರ್ಗಕ್ಕೆ ಟೆಂಡರ್ ಪ್ರಕ್ರಿಯೆ ಆರಂಭಿಸಲು ಸಮಸ್ಯೆ ಆಗುವುದಿಲ್ಲ. ಜೊತೆಗೆ ಹೈಕೋರ್ಟ್ ಗೂ ಯೋಜನೆಯ ಮಹತ್ವ ಮನವರಿಕೆ ಮಾಡಿಕೊಡಬಹುದು ಎಂದು ಅಂದಾಜಿಸಲಾಗಿದೆ.

ಒಟ್ಟು 3 ಯೋಜನೆಗಳ ಪರಿಶೀಲನೆ

ಒಟ್ಟು 3 ಯೋಜನೆಗಳ ಪರಿಶೀಲನೆ

ಬಿಜೆಪಿ ಸರ್ಕಾರವು ಮೈತ್ರಿ ಸರ್ಕಾರದ ಅವಧಿಯ ಮೂರು ಯೊಜನೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.ಈ ಸಂಬಂಧ ಬಿಎಂಆರ್‌ಸಿಎಲ್ ಸಿದ್ಧಪಡಿಸಿರುವ ಸಮಗ್ರ ಸಾರಿಗೆ ಯೋಜನೆಯಲ್ಲಿ ಮೆಟ್ರೋ ಯೋಜನೆಗೆ ಅಡ್ಡಲಾಗುವ ಉತ್ತರ ದಕ್ಷಿಣ ಕಾರಿಡಾರ್ , ಪೂರ್ವ ಪಶ್ಚಿಮ ಕಾರಿಡಾರ್-2 ಮತ್ತು ಹೆಚ್ಚುವರಿ ಕಾರಿಡಾರ್ ಯೋಜನೆಯ ಮರುಪರಿಶೀಲಿಸುವ ಅಗತ್ಯವಿದೆ ಎಂದು ಉಲ್ಲೇಖಿಸಲಾಗಿದೆ.

ಮೈತ್ರಿ ಸರ್ಕಾರದ ಯೋಜನೆಗೆ ವಿರೋಧ ವ್ಯಕ್ತವಾಗಿತ್ತು

ಮೈತ್ರಿ ಸರ್ಕಾರದ ಯೋಜನೆಗೆ ವಿರೋಧ ವ್ಯಕ್ತವಾಗಿತ್ತು

25,500 ಕೋಟಿ ರೂ ಮೊತ್ತದಲ್ಲಿ ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ನಿರ್ಮಿಸಿ ಒಟ್ಟು ಏಳು ಹಂತಗಳಲ್ಲಿ ಪೂರ್ಣಗೊಳಿಸಲು ರೂಪುರೇಷೆಯನ್ನು ತಯಾರಿಸಲಾಗಿತ್ತು. ಆದರೆ ಯೋಜನೆಗೆ ನಗರದ ವಿವಿಧ ನಾಗರಿಕ ಸಂಘಟನೆಗಳು ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗಿತ್ತು. ಇನ್ನು ಕೆಲ ಸಂಘಟನೆಗಳು ಕೋರ್ಟ್ ಮೆಟ್ಟಿಲೇರಿ ಟೆಂಡರ್ ಪ್ರಕ್ರಿಯೆಗೆ ತಡೆಯೊಡ್ಡಿದ್ದವು. ಇದು 2012ರ ಅಂಕಿ ಅಂಶಗಳ ಆಧಾರದಲ್ಲಿ ರೂಪಿಸಿರುವ ಯೋಜನೆಯಾಗಿದೆ. ಯೋಜನೆಗೆ ಹತ್ತಾರು ವರ್ಷ ಬೇಕು ಅ್ಷಟರೊಳಗೆ ವಾಹನ ದಟ್ಟಣೆಯೂ ಇನ್ನಷ್ಟು ಹೆಚ್ಚಳವಾಗಲಿದೆ ಎನ್ನುವ ವಾದವೂ ಇತ್ತು.

English summary
There is information that another elevated corridor will be built in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X