ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹ್ಯಾಕರ್ ಶ್ರೀಕೃಷ್ಣ ವಿರುದ್ಧ ಮತ್ತೊಂದು ಕೇಸು : 13 ದಿನ ಸಿಸಿಬಿ ವಶಕ್ಕೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 02 : ಡ್ರಗ್ ಡೀಲ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಹ್ಯಾಕರ್ ಶ್ರೀಕೃಷ್ಣ ವಿರುದ್ಧ ಸಿಸಿಬಿ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿ ಹದಿಮೂರು ದಿನ ಪೊಲೀಸ್ ವಶಕ್ಕೆ ಪಡೆದಿದ್ದಾರೆ.ಅನೇಕ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿರುವ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಹ್ಯಾಕರ್ ಶ್ರೀಕಿ ಅನೇಕ ವೆಬ್ ತಾಣ ಹಾಗೂ ಗೇಪ್ ಆಪ್ ಗಳನ್ನು ಹ್ಯಾಕ್ ಮಾಡಿ ಅಕ್ರಮ ಎಸಗಿದ್ದಾನೆ. ಸರ್ಕಾರಿ ವೆಬ್ ತಾಣಗಳನ್ನು ಹ್ಯಾಕ್ ಮಾಡಿದ್ದು ವಿಚಾರಣೆ ವೇಳೆ ಸಾಕಷ್ಟು ಮಾಹಿತಿ ಹೊರ ಬಂದಿದೆ. ಈ ಹಿನ್ನೆಲೆಯಲ್ಲಿ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ‌. ಈ ಹೊಸ ಪ್ರಕರಣದ ವಿಚಾರಣೆಗಾಗಿ ಶ್ರೀಕೃಷ್ಣ ನನ್ನು ಪುನಃ ಹದಿಮೂರು ದಿನಗಳ ವಶಕ್ಕೆ ಪಡೆದುಕೊಂಡಿದ್ದಾರೆ. ಎಸಿಪಿ ಶ್ರೀಧರ್ ಪೂಜಾರ್ ವಿಚಾರಣೆ ನಡೆಸುತ್ತಿದ್ದು, ಇನ್ನಷ್ಡು ಸ್ಫೋಟಕ ಸಂಗತಿಗಳು ಹೊರ ಬೀಳುವ ಸಾಧ್ಯತೆ ಇವೆ.

ಮತ್ತೆರಡು ಪ್ರಕರಣದಲ್ಲಿ ಹ್ಯಾಕರ್ ಶ್ರೀಕಿ ವಿಚಾರಣೆಮತ್ತೆರಡು ಪ್ರಕರಣದಲ್ಲಿ ಹ್ಯಾಕರ್ ಶ್ರೀಕಿ ವಿಚಾರಣೆ

ನ್ಯಾಯಾಂಗ ಬಂಧನಲ್ಲಿರುವ ಡ್ರಗ್ ಡೀಲ್ ಪ್ರಮುಖ ಆರೋಪಿ ಪ್ರಸಿದ್ಧ ಶೆಟ್ಡಿ, ಸುನೀಶ್ ಹೆಗ್ಡೆ ಅವರು ಹ್ಯಾಕರ್ ಶ್ರೀಕಿಗಾಗಿ ಹುಡುಕಾಡಿದ್ದರು. ಅತ ಸಿಗಲಿಲ್ಲ ಎಂಬ ಕಾರಣಕ್ಕೆ ಶ್ರೀಕೃಷ್ಣ ಸ್ನೇಹಿತರನ್ನು ಅಪಹರಿಸಿ ಹಲ್ಲೆ ಮಾಡಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ಶ್ರೀಕಿ ಯ ಸ್ನೇಹಿತರು ಪ್ರಸಿದ್ಧ ಶೆಟ್ಟಿ ಹಾಗೂ ಸುನೀಶ್ ವಿರುದ್ಧ ದೂರು ದಾಖಲಿಸಿದ್ದರು‌.

 Another case registered against Hacker Sri krishna

ಇದರ ಬೆನ್ನಲ್ಲೇ ಹ್ಯಾಕರ್ ಶ್ರೀಕೃಷ್ಣ ವಿರುದ್ಧ ಮತ್ತೊಂದು ಕೇಸು ದಾಖಲಾಗಿದೆ. ಸಿಸಿಬಿ ಪೊಲೀಸರ ವಿಚಾರಣೆ ಮುಗಿದ ಕೂಡಲೇ ಸಿಐಡಿ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. ಜತೆಗೆ ವಿದ್ವತ್ ಹಲ್ಲೆ ಪ್ರಕರಣದಲ್ಲೂ ಶ್ರೀಕಿ ಮೂರನೇ ಆರೋಪಿಯಾಗಿದ್ದು, ವಿಚಾರಣೆ ಎದುರಿಸಬೇಕಾಗಿದೆ‌.

English summary
CCB police file another case against a hacker Sri krishna, who was arrested in a drug deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X