ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೀದಿ ನಾಯಿಗಳಿಗೆ ಅನ್ನ ಹಾಕಿದರೆ ಚಪ್ಪಲಿ ಏಟು ಬೀಳುತ್ತೆ ಹುಷಾರ್ !

|
Google Oneindia Kannada News

ಬೆಂಗಳೂರು, ಮಾರ್ಚ್‌ 06 : ಬೀದಿ ನಾಯಿಗಳಿಗೆ ಅನ್ನ ಹಾಕಿದರೆ ಚಪ್ಪಲಿಯಲ್ಲಿ ಹೊಡೆಯುವ ಮಂದಿ ಬೆಂಗಳೂರಿನಲ್ಲಿದ್ದಾರೆ. ಹೌದು, ಇಂತಹ ಮನ ಕಲುಕುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ. ಬೀದಿ ನಾಯಿಗಳಿಗೆ ಅನ್ನ ಹಾಕುತ್ತಿದ್ದ ಮಹಿಳಾ ಟೆಕ್ಕಿ ಜತೆ ಜಗಳ ತೆಗೆದ ಸ್ಥಳೀಯರು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಮಾತ್ರವಲ್ಲ ಸಾರ್ವಜನಿಕವಾಗಿ ಯುವಕನೊಬ್ಬ ಚಪ್ಪಲಿಯಿಂದ ಬೆನ್ನಿಗೆ ಎಸೆದು ವಿಕೃತ ಮೆರೆದಿದ್ದಾನೆ. ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ನಾಗರಬಾವಿಯ ವಿನಾಯಕ ಲೇಔಟ್ ಸತ್ಯಜಿತ್ ಎಂಬುವರ ಪತ್ನಿ ವೃತ್ತಿಯಲ್ಲಿ ಸಾಫ್ಟ್‌ ವೇರ್ ಇಂಜಿನಿಯರ್ ಆಗಿದ್ದು, ನಾಯಿಯನ್ನು ಸಾಕಿದ್ದರು. ಪ್ರತಿ ನಿತ್ಯ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದಳು. ಈ ನಾಯಿ ನೋಡಿ ಬೊಗಳುತ್ತಿದ್ದ ಬೀದಿ ನಾಯಿಗಳಿಗೆ ಪ್ರತಿ ನಿತ್ಯ ಆಹಾರ ಕೊಟ್ಟು ಸಲಹುತ್ತಿದ್ದಳು. ಇದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿತ್ತು. ಮಹಿಳಾ ಟೆಕ್ಕಿ ಅನ್ನ ಹಾಕುವ ಕಾರಣದಿಂದಲೇ ಬೀದಿ ನಾಯಿಗಳು ರಾತ್ರಿ ವೇಳೆ ಬೈಕ್ ಸವಾರರ ಮೇಲೆ ಎರಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಈ ಬೀದಿಯಲ್ಲಿ ಓಡಾಡದಂತೆ ಮಹಿಳಾ ಟೆಕ್ಕಿಗೆ ಎಚ್ಚರಿಕೆ ನೀಡಿದ್ದರು.

Annapurneshwari nagar Women Techie allegedly assaulted by her neighbours for feeding street dogs

ಇದಕ್ಕೆ ತಲೆ ಕೆಡಿಸಿಕೊಳ್ಳದ ಮಹಿಳಾ ಟೆಕ್ಕಿ ಶುಕ್ರವಾರ ಸಂಜೆ ಎಂದಿನಂತೆ ಬೀದಿ ನಾಯಿಗಳಿಗೆ ಅನ್ನ ಹಾಕಿದ್ದಾರೆ. ಈ ವೇಳೆ ಜಮಾಯಿಸಿದ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಯುವಕನೊಬ್ಬ ಮಹಿಳಾ ಟೆಕ್ಕಿಯ ಬೆನ್ನಿಗೆ ಚಪ್ಪಲಿಯಿಂದ ಹೊಡೆದಿದ್ದಾನೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಹಿಳಾ ಟೆಕ್ಕಿ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಮಹಿಳೆಗೆ ಸಾರ್ವಜನಿಕವಾಗಿ ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ವೈರಲ್ ಆಗಿದೆ.

English summary
Neighbours allegedly assaulted a women software engineer for feeding street dogs in Annapurneshwari nagar, Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X