ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹರ್ಬಲ್ ಲೈಫ್ ಒಂದು ಕೋಟಿ ರೂ. ಹನಿಟ್ರ್ಯಾಪ್ ಕಿಂಗ್‌ಪಿನ್ ಅಂದರ್

|
Google Oneindia Kannada News

ಬೆಂಗಳೂರು ಅ. 14: ಹರ್ಬಲ್ ಲೈಫ್ ತಗೊಳ್ಳಿ ಎಂದು ಯಾರಾದರೂ ದುಂಬಾಲು ಬಿದ್ದರೆ ಎಚ್ಚರದಿಂದ ಇರಬೇಕು. ಬಾಡಿ ತೆಳ್ಳಗೆ ಮಾಡುವುದಾಗಿ ನಂಬಿಸಿ ಸಂಪರ್ಕ ಸಾಧಿಸುವ ಮಾನಿನಿಯರು ಹನಿ ಟ್ರ್ಯಾಪ್ ಮಾಡಿ ಬದುಕನ್ನೇ ತೆಳ್ಳಗೆ ಮಾಡಿ ಬಿಡುತ್ತಾರೆ. ಹರ್ಬಲ್ ಲೈಫ್ ಮೆಡಿಸಿನ್ ಕೊಡುವ ನೆಪದಲ್ಲಿ ಹನಿಟ್ರ್ಯಾಪ್ ಮಾಡಿ ಕೋಟ್ಯಂತರ ರೂಪಾಯಿ ಕೀಳಲು ಹೋದ ಜಾಲವೊಂದು ಬೆಂಗಳೂರು ಪೊಲೀಸರಿಗೆ ಸಿಕ್ಕಿ ಬಿದ್ದಿದೆ.

ಆತನ ಹೆಸರು ಲೋಹಿತ್, ಸಿವಿಲ್ ಕಾಂಟ್ರಾಕ್ಟ್ ಗುತ್ತಿಗೆದಾರ. ಮೂರು ತಿಂಗಳ ಹಿಂದೆ ನಾಗರಭಾವಿ ಸಮೀಪದ ನಮ್ಮೂರ ತಿಂಡಿ ಹೋಟೆಲ್ ಬಳಿ ಕಾಫಿ ಕುಡಿಯುತ್ತಿದ್ದ ವೇಳೆ ಇಬ್ಬರು ಯುವಕರು ಹರ್ಬಲ್ ಲೈಫ್ ಸೇಲ್ಸ್ ಮ್ಯಾನ್‌ಗಳಾಗಿ ಪರಿಚಯಿಸಿಕೊಂಡಿದ್ದರು. ಹರ್ಬಲ್ ಲೈಫ್ ಮೆಡಿಸಿನ್ ತಗೊಂಡರೆ ಮೂರು ತಿಂಗಳಲ್ಲಿ ಸಣ್ಣ ಆಗ್ತೀರಾ ಅಂತ ನಂಬಿಸಿ ಮೊಬೈಲ್ ನಂಬರ್ ಕೊಟ್ಟು ಹೋಗಿದ್ದರು.

ಆ ನಂಬರ್‌ಗೆ ಕರೆ ಮಾಡಿದ್ದ ಲೋಹಿತ್‌ಗೆ ವಿದ್ಯಾ ಎಂಬ ಮಹಿಳೆ ಪರಿಚಯವಾಗಿದ್ದರು. ಇಬ್ಬರ ನಡುವಿನ ಪರಿಚಯ ರೆಸಾರ್ಟ್‌ಗೆ ಹೋಗಿ ಏಕಾಂತದಲ್ಲಿ ಕಳೆಯುವ ಹಂತಕ್ಕೆ ತಲುಪಿತ್ತು. ಇಬ್ಬರೂ ಒಮ್ಮೆ ಕನಕಪುರ ರಸ್ತೆಯಲ್ಲಿರುವ ಗುಹಾಂತರ ರೆಸಾರ್ಟ್‌ಗೆ ಹೋಗಿದ್ದಾರೆ. ಆನಂತರ ಲೋಹಿತ್ ಮತ್ತು ವಿದ್ಯಾ ಸ್ನೇಹಿತರು ಒಡಗೂಡಿ ಅಗಲಗುರ್ಕಿ ರೆಸಾರ್ಟ್‌ಗೆ ಹೋಗಿ ತಂಗಿದ್ದಾರೆ. ಈ ವೇಳೆ ವಿದ್ಯಾ ಮತ್ತು ಲೋಹಿತ್ ಏಕಾಂತವಾಗಿ ಸಿಮ್ಮಿಂಗ್ ಪೂಲ್‌ನಲ್ಲಿ ಈಜಾಡಿದ್ದಾರೆ. ಆನಂತರ ಕೊಠಡಿಗೆ ಹೋಗಿ ಏಕಾಂತವಾಗಿ ಕಾಲ ಕಳೆದಿದ್ದಾರೆ.

 Bengaluru: Annapurneshwari nagar police arrest woman involving in honey trap case

ಈ ನಡುವೆ ರೆಸಾರ್ಟ್‌ನಲ್ಲಿ ಹುಡುಗರ ಜತೆ ವಿದ್ಯಾ ಕಿರಿಕ್ ಮಾಡಿಕೊಂಡಿದ್ದಾಳೆ. ಜಗಳ ಬಿಡಿಸಿದ ಲೋಹಿತ್ ತನ್ನ ಸ್ನೇಹಿತರ ಜತೆ ವಾಪಸು ಮನೆಗೆ ಬಂದಿದ್ದಾರೆ.

ಗೊತ್ತಿಲ್ಲದೇ ಹನಿ ಟ್ರ್ಯಾಪ್: ಹರ್ಬಲ್ ಲೈಫ್ ವಿದ್ಯಾ ಜತೆ ಏಕಾಂತವಾಗಿ ಕಳೆದ ಲೋಹಿತ್ ಪೋಟೋ ಮತ್ತು ವಿಡಿಯೋ ಮಾಡಿಕೊಂಡಿದ್ದಾರೆ. ರೆಸಾರ್ಟ್ ಪಾರ್ಟಿ ಮುಗಿದ ಕೆಲ ದಿನಗಳ ಬಳಿಕ ಲೋಹಿತ್‌ಗೆ ಕರೆ ಮಾಡಿರುವ ವಿದ್ಯಾ, ನಿನ್ನ ಬಳಿ ಖಾಸಗಿಯಾಗಿ ಮಾತನಾಡಬೇಕು ಎಂದು ನಾಗರಭಾವಿ ಸಮೀಪದ ಖಾಸಗಿ ಹೋಟೆಲ್‌ಗೆ ಕರೆಸಿಕೊಂಡಿದ್ದಾಳೆ. ರೆಸಾರ್ಟ್‌ನಲ್ಲಿ ಏಕಾಂತವಾಗಿ ಕಳೆದ ಪೋಟೋಗಳನ್ನು ತೋರಿಸಿ, ನನಗೆ ಹಣ ಬೇಕು ಎಂದು ಕೇಳಿದ್ದಾಳೆ. ಇದರಿಂದ ಗಾಬರಿ ಬಿದ್ದ ಲೋಹಿತ್ ಎಷ್ಟು ಬೇಕು ಎಂದು ಕೇಳಿದಾಗ ಒಂದು ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಹಣ ಕೊಡುವ ವಿಚಾರದಲ್ಲಿ ಮಾತುಕತೆ ನಡೆದಿದೆ.

ವಿದ್ಯಾ ಜತೆ ಏಕಾಂತವಾಗಿ ಕಳೆದ ಪೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆದರೆ ಮರ್ಯಾದೆ ಹೋಗುತ್ತದೆ ಎಂದು ಭಯಗೊಂಡ ಲೋಹಿತ್ ಒಂದಷ್ಟು ಹಣ ಕೊಟ್ಟು ಇತ್ಯರ್ಥ ಮಾಡಿಕೊಳ್ಳಲು ಮುಂದಾಗಿದ್ದಾನೆ. ಆದರೆ ಕಡಿಮೆ ಹಣಕ್ಕೆ ಒಪ್ಪದ ವಿದ್ಯಾ ಒಂದು ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾಳೆ. ಹೀಗೆ ದಿನ ಕಳೆಯುತ್ತಿದ್ದ ಗುತ್ತಿಗೆದಾರ ಲೋಹಿತ್‌ಗೆ ಪೆನ್ ಡ್ರೈವ್ ಕೊಟ್ಟು ಕಳಿಸಿದ್ದು, ಅದನ್ನು ನೋಡಿ ಮತ್ತಷ್ಟು ಗಾಬರಿಯಾಗಿದ್ದಾನೆ. ಹರ್ಬಲ್ ಲೈಫ್ ಹೆಸರಿನಲ್ಲಿ ಪರಿಚಯಿಸಿಕೊಂಡು ನನ್ನನ್ನು ಹನಿಟ್ರ್ಯಾಪ್ ಮಾಡಿ ಮೋಸ ಮಾಡಿದ್ದಾಗಿ ಲೋಹಿತ್ ದೂರು ನೀಡಿದ್ದಾನೆ.

 Bengaluru: Annapurneshwari nagar police arrest woman involving in honey trap case

Recommended Video

IPL ಟ್ರೋಫಿ ಗೆಲ್ಲೋದಕ್ಕೆ ಅರ್ಹವಾಗಿರೋರು ನಾವಲ್ಲ ಎಂದ ಧೋನಿ!ಮತ್ಯಾರು? | Oneindia Kannada

ಲೋಹಿತ್ ನೀಡಿದ ದೂರಿನ ಮೇರೆಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ತನಿಖೆ ನಡೆಸಿದ್ದು, ವಿದ್ಯಾ ಎಂಬಾಕೆಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಹಲವರಿಗೆ ಇದೇ ರೀತಿ ಹನಿಟ್ರ್ಯಾಪ್ ಮಾಡಿರುವ ವಿಚಾರ ತಪ್ಪೊಪ್ಪಿಕೊಂಡಿದ್ದಾಳೆ. ಈ ಜಾಲದಲ್ಲಿ ಶಾಮೀಲಾಗಿರುವ ಇತರರ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಯಾರಾದರೂ ಹರ್ಬಲ್ ಲೈಫ್ ಹೆಸರಿನಲ್ಲಿ ಮಾತ್ರವಲ್ಲದೇ ನಾನಾ ರೂಪದಲ್ಲಿ ಹನಿಟ್ರ್ಯಾಪ್ ಮಾಡಲಾಗುತ್ತಿದೆ. ಮಾನಿನಿಯರ ಆಸೆಗೆ ಬಿದ್ದು ಮಾನ ಕಳೆದುಕೊಳ್ಳುವ ಬದಲಿಗೆ ಇಂತಹ ಹನಿಟ್ರ್ಯಾಪ್ ಕರೆಗಳಿಂದ ದೂರ ಇರಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.

English summary
Bengaluru's Annapurneshwari nagar police arrest woman involving in honey trap case. Woman named vidya targeting person in the name of Herballife and demanded Rs 1 crore. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X