ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಮನ ಬದಲು, ಬೆಂಗಳೂರು ರಸ್ತೆಗಿಳಿದ ಆಂಜನೇಯ

|
Google Oneindia Kannada News

ಬೆಂಗಳೂರು, ಜನವರಿ, 30: ಹೆಲ್ಮೆಟ್ ಹಾಕದೆ ಗಾಡಿ ಚಲಾಯಿಸುವುದು, ಟ್ರಾಫಿಕ್ ನಿಯಮಗಳನ್ನು ಬ್ರೇಕ್ ಮಾಡುವವರಿಗೆ ಎಚ್ಚರಿಕೆ ನೀಡಲು ಯಮನ ವೇಷಧಾರಿ ನಗರದಲ್ಲೆಡೆ ಸಂಚರಿಸಿದ್ದು ನೀವು ನೋಡಿದ್ದೀರಾ.

ಆದರೆ ಈಗ ಯಮ ಫುಲ್ ಬ್ಯುಸಿಯಂತೆ ಹಾಗಾಗಿ ಆಂಜನೇಯನನ್ನು ಕಳಿಸಿದ್ದಾನೆ. ನಗರದಲ್ಲಿರುವ ರಸ್ತೆಗುಂಡಿಗಳ ಬಗ್ಗೆ ಹೈಕೋರ್ಟ್ ಎಷ್ಟು ಎಚ್ಚರಿಕೆ ನೀಡಿ ಸರಿ ಮಾಡಿಸಿದ್ದರೂ ಕೂಡ ನಗರದ ಸಾಕಷ್ಟು ಭಾಗಗಳಲ್ಲಿ ರಸ್ತೆಗುಂಡಿಗಳ ಸಮಸ್ಯೆ ಇನ್ನೂ ಇದೆ.

ಯಮ ಬರ್ತಾನೆ, ನಿಮ್ಮ ಬೈಕ್‌ ಹಿಂದೆ ಕೂರ್ತಾನೆ, ಹೆಲ್ಮೆಟ್‌ ಹಾಕ್ತೀರಾ ಇಲ್ವಾ? ಯಮ ಬರ್ತಾನೆ, ನಿಮ್ಮ ಬೈಕ್‌ ಹಿಂದೆ ಕೂರ್ತಾನೆ, ಹೆಲ್ಮೆಟ್‌ ಹಾಕ್ತೀರಾ ಇಲ್ವಾ?

ಇದರ ಬಗ್ಗೆ ಗಮನ ಸೆಳೆಯಲು ಹನುಮಂತ ವೇಷಧಾರಿಯೊಬ್ಬ ಫೂಟ್ ಪಾತ್‌ಗಳು, ರಸ್ತೆಗುಂಡಿಗಳ ಮೇಲೆ ಹಾರುತ್ತಾ ಬಿಬಿಎಂಪಿಗೆ ತನ್ನ ಕರ್ತವ್ಯದ ಅರಿವು ಮೂಡಿಸುತ್ತಿದ್ದಾರೆ. ರಸ್ತೆಗುಂಡಿಗಳು ವಿಪರೀತವಾಗಿದೆ ಸಾಮಾನ್ಯ ಮನುಷ್ಯರಿಗೆ ಆ ಗುಂಡಿ ದಾಟಿ ಮುಂದೆ ಸಾಗಲು ಕಷ್ಟ ಕೇವಲ ಆಂಜನೇಯ ಮಾತ್ರ ಇಂತಹ ಗುಂಡಿಗಳನ್ನು ಹಾರಬಲ್ಲ ಎನ್ನುವ ಸಂದೇಶ ಇದರಲ್ಲಿದೆ. ಅಂದ ಮೇಲೆ ರಸ್ತೆ ಗುಂಡಿಗಳು ಎಷ್ಟು ದೊಡ್ಡದಾಗಿವೆ ಎಂಬುದನ್ನು ಕೂಡ ನೀವು ಗಮನಿಸಲೇ ಬೇಕು.

Anjaneya replaces Yama for traffic rules awareness

ಒಂದೆಡೆ ರಸ್ತೆ ದುರಸ್ತಿ ಕಾಮಗಾರಿ ಮಾಡುತ್ತಿದ್ದರೆ ಇನ್ನೊಂದೆಡೆ ಕಂದಕದಂತಹ ರಸ್ತೆಗುಂಡಿ ನಿರ್ಮಾಣವಾಗುತ್ತಿವೆ ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ. ಬೆಂಗಳೂರನ್ನು ರಸ್ತೆಗುಂಡಿ ಮುಕ್ತವಾಗಿಸಲು ಬಿಬಿಎಂಪಿ ಪಣ ತೊಡಲೇ ಬೇಕಾಗಿದೆ.

English summary
Yama was busy , so Anjaneya replaces him for traffic rules awareness and patholes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X