ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನೇಕಲ್ ಕರಗ: ಪೊರಕೆ ಹೊಡೆತ -ವಿಶಿಷ್ಟ ಆಚರಣೆಯ ಹಿತ

|
Google Oneindia Kannada News

ಬೆಂಗಳೂರು, ಏಪ್ರಿಲ್ 19: ಆನೇಕಲ್ ಕರಗ ವಿಶಿಷ್ಟವಾದದ್ದು. ರಾಜಧಾನಿ ಬೆಂಗಳೂರು ಕರಗ ವಿಶ್ವ ವಿಖ್ಯಾತಿಯನ್ನು ಪಡೆದಿದ್ದರೆ ಆನೇಕಲ್ ಕರಗವೂ ಸಾಕಷ್ಟು ಖ್ಯಾತಿಯನ್ನು ಪಡೆದಿದೆ. ಕರಗ ಉತ್ಸವದ ಎರಡನೇ ದಿನ ನಡೆಯುವ ವಿಭಿನ್ನ ವೈಶಿಷ್ಟ್ಯತೆ ಅಂದರೆ ಕೋಟೆ ಜಗಳ ಮತ್ತು ಪೊರಕೆಯಲ್ಲಿ ಹೊಡೆಸಿಕೊಳ್ಳುವುದು. ಇದು ರಾಜ್ಯದಲ್ಲೇ ಇಲ್ಲದ ವಿಶಿಷ್ಟ ಆಚರಣೆ.

ಬೆಂಗಳೂರು ನಗರಕ್ಕೆ ವಿಖ್ಯಾತಿಯನ್ನ ತಂದುಕೊಟ್ಟ ಧಾರ್ಮಿಕ ಆಚರಣೆಯೇ ಕರಗ ಉತ್ಸವ ಇದೊಂದು ಐತಿಹಾಸಿಕ ಹಿನ್ನಲೆಯುಳ್ಳ ಆಚರಣೆ ಬೆಂಗಳೂರು ನಗರದಲ್ಲಿ ನಡೆಯುದಕ್ಕಿಂತ ವಿಶಿಷ್ಟವಾಗಿ ಆನೇಕಲ್ ಪಟ್ಟಣದಲ್ಲಿ ಕರಗ ಉತ್ಸವ ನಡೆಯುತ್ತದೆ. ದ್ರಾವಿಡ ಶೈಲಿಯಲ್ಲಿ ನಡೆಯುವ ಈ ಉತ್ಸವ ಎಲ್ಲರನ್ನೂ ಆಕರ್ಷಿಸುತ್ತದೆ, ಚೈತ್ರ ಮಾಸದ ಹುಣ್ಣಿಮೆಯಂದು ಬೆಂಗಳೂರು ನಗರದಲ್ಲಿ ಹೂವಿನ ಕರಗ ನಡೆದರೆ ಅಂದು ಆನೇಕಲ್ ಪಟ್ಟಣದಲ್ಲಿ ಹಸಿ ಕರಗ ಅಂದ್ರೇ ಹೂವಿನ ಕರಗದಷ್ಟೇ ವೈಭವಯುತವಾಗಿ ನಡೆದು ಮಾರನೇ ದಿನ ನಡೆಯುವುದೇ ಕೋಟೆ ಜಗಳ ಇದರ ವೈಶಿಷ್ಟ್ಯದ ವಿವರಣೆಗಳಿದೆ.

ಕೆಂಪು ಬಟ್ಟೆ ತೊಟ್ಟು, ಮುಖಕ್ಕೆ ಬಣ್ಣದ ಬಡಿದುಕೊಂಡು ಆವೇಶಭರಿತನಾಗಿ ಪೊರಕೆ ಹಾಗೂ ಮೊರ ಕೈಯಲ್ಲಿ ಹಿಡಿದು ಮನಸೋ ಇಚ್ಚೆ ಜನರನ್ನು ಹೊಡೆಯುವುದು. ಆವೇಶಭರಿತ ವ್ಯಕ್ತಿಯಿಂದ ಏಟು ತಿಂದು ವಿಬಿನ್ನವಾದ ರೀತಿಯಲ್ಲಿ ಹರಕೆ ತೀರಿಸಿಕೊಳ್ಳುತ್ತಿರುವ ಉತ್ಸವಕ್ಕೆ ಸಾವಿರಾರು ಜನ ಸಾಕ್ಷಿಯಾಗುತ್ತಾರೆ.

Anekal Karaga Special Striking With Broom

*ಆವೇಷ ಬರಿತ ವ್ಯಕ್ತಿಯಿಂದ ಬಿತ್ತು ಪೊರಕೆ ಹಾಗೂ ಮೊರದಿಂದ ಏಟು.
*ಹಣ ಕೊಟ್ಟು ಏಟು ತಿಂದರೆ ಇಷ್ಟಾರ್ಥ ಈಡೇರುತ್ತದೆ ಎನ್ನುವ ನಂಬಿಕೆ.
*ಕರಗ ಉತ್ಸವದ ಎರಡನೇ ದಿನ ಆಯೋಜಿಸಲ್ಪಡುವ ಕೋಟೆ ಜಗಳ.
*ಆನೇಕಲ್ ಕರಗ ಉತ್ಸವದ ಎರಡನೇ ದಿನ ನಡೆಯುವ ವಿಭಿನ್ನ ಕಾರ್ಯಕ್ರಮ.

Anekal Karaga Special Striking With Broom

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಪಟ್ಟಣದಲ್ಲಿ, ಹೆಸರಾಂತ ಪುರಾಣ ಪ್ರಸಿದ್ದ ಧರ್ಮರಾಯ ಸ್ವಾಮಿ ದ್ರೌಪತಮ್ಮ ಹಸಿಕರಗದ ನಂತರ ಎರಡನೇ ದಿನ ನಡೆಯುವ ಕೋಟೆ ಜಗಳ ಆನೇಕಲ್ ಪಟ್ಟಣದ ಸಂತೆ ಮೈದಾನದಲ್ಲಿ ನಡೆಯಿತು. ಪಾಂಡವರು ಹಾಗೂ ಕೌರವರ ಮಧ್ಯೆ ನಡೆದ ಕುರುಕ್ಷೇತ್ರ ಯುದ್ಧದ ಮಾದರಿಯಲ್ಲಿ ಕೋಟೆ ಜಗಳ ಏರ್ಪಡಿಸಲಾಗಿತ್ತು. ಯುದ್ಧದ ಅಂತ್ಯದಲ್ಲಿ ಪ್ರತ್ಯಕ್ಷವಾಗುವ ರಣಕಾಳಿ ದುಷ್ಟರನ್ನು ಸಂಹರಿಸಿ, ಭಕ್ತರನ್ನು ಪಾಲಿಸುವ ಸಂಕೇತವಾಗಿ ಈ ಉತ್ಸವ ನಡೆಯುತ್ತದೆ. ಕೌರವರು ದುಷ್ಟತನದಿಂದ ರಚಿಸಿದ 'ಪದ್ಮವ್ಯೂಹ'ವನ್ನು ಅರ್ಜುನನ ಮಗ ವೀರ ಅಭಿಮನ್ಯು ಭೇದಿಸಿ ವಿಜಯಿಯಾದ ಕಲ್ಪನೆ ಈ ಕೊಟೆ ಜಗಳ ಆಗಿದ್ದು, ಸಂತೆ ಮೈದಾನದ ಮರಗಳಿಂದ ಕೋಟೆ ನಿರ್ಮಾಣ ಮಾಡಿ, ಉತ್ಸವ ಆರಂಭವಾಗುತ್ತಿದ್ದಂತೆ ಪಾಂಡವರು ಹಾಗೂ ಶ್ರೀಕೃಷ್ಣನ ಉತ್ಸವ ಮೂರ್ತಿಗಳನ್ನು ತಂದು ಕೂರಿಸಲಾಗುತ್ತದೆ.

Anekal Karaga Special Striking With Broom

ಕರಗ ಹೊರುವ ಚಂದ್ರಪ್ಪ ಇಲ್ಲಿಗೆ ಬಂದಾಗ ಉತ್ಸವಕ್ಕೆ ಬಂದ ಭಕ್ತರು ಆತನ ಕಾಲಿಗೆ ನಮಸ್ಕರಿಸಿ ಅರಿಶಿನ ಪ್ರಸಾದ ಸ್ವೀಕರಿಸುತ್ತಾರೆ. ರಣ ಕಾಳಿ ವೇಷಧಾರಿ ವ್ಯಕ್ತಿಯೊಬ್ಬ ನೆರೆದ ಭಕ್ತರ ತಲೆಯ ಮೇಲೆ ಪೊರಕೆ ಹಾಗೂ ಮೊರದಿಂದ ಹೊಡೆದು ದಕ್ಷಿಣೆ ಸ್ವೀಕರಿಸುತ್ತಾನೆ. ಕೊಟೆಯೊಳಗೆ ನಾಲ್ಕು ಮೂಲೆಯಲ್ಲಿ ಯುವಕರನ್ನು ಶವಗಳಂತೆ ಮಲಗಿಸಿ ಮೈಮೇಲೆ ಬಿಳಿ ಪಂಚೆ ಹೊದಿಸಲಾಗಿತ್ತೆ. ಆಯುಧ ಹಿಡಿದ ಕೆಲವರು ಕೋಟೆ ಸಂರಕ್ಷಣೆ ಮಾಡಿದರೆ, ಮಕರಂದನ ಪಾತ್ರಧಾರಿ ಹಾಸ್ಯ ಮಾಡುತ್ತಾ ಎಲ್ಲರ ಗಮನ ಸೆಳೆದನು. ಇದಾದ ಕೆಲ ಕ್ಷಣಗಳಲ್ಲಿ ರಣಕಾಳಿಗೆ ಮೇಕೆಯೊಂದನ್ನು ಬಲಿ ನೀಡಿ, ನಂತರ ಅದರ ದೇಹ ಸೀಳಿ ಶ್ವಾಸಕೋಶವನ್ನು ಹೊರತೆಗೆದು ಈ ಸಮಯದಲ್ಲಿ ರಣಕಾಳಿ ವೇಷಧಾರಿ ವ್ಯಕ್ತಿಗೆ ಆವೇಶ ಬಂದು ಆತ ಹೂಂಕರಿಸುತ್ತಾ ಜೋರಾಗಿ ಘರ್ಜಿಸಿ ಬಾಯಿ ತೆಗೆದಾಗ, ಈ ಶ್ವಾಸಕೋಶವನ್ನು ಆತನ ಬಾಯಿಗೆ ತುರುಕಲಾಗುತ್ತದೆ.

ಈ ವೇಳೆ ಆವೇಶ ಬಂದ ಸಮಯದಲ್ಲಿ ಈತನಿಂದ ಪೊರಕೆ ಮತ್ತು ಮೊರದ ಪೆಟ್ಟು ತಿಂದರೆ ಒಳಿತಾಗುತ್ತದೆಂಬ ಭಾವನೆ ಇದೆ. ಇದ್ರಿಂದ ಏಟು ತಿನ್ನಲು ಸಾವಿರಾರು ಜನ ಹಣ ನೀಡಿ ಏಟು ತಿಂದು ತಮ್ಮ ಹರಕೆಯನ್ನು ತೀರಿಸಿದರು. ಆ ಮೂಲಕ ಆನೇಕಲ್ ಕರಗ ವಿಶಿಷ್ಟ ರೀತಿಯಲ್ಲಿ ಕಳೆ ಗಟ್ಟಿದಂತಾಗಿದೆ.

Recommended Video

ಹಿಂದೂ ಆಕ್ಟಿವಿಸ್ಟ್ ಸಾದ್ವಿ ರಿತುಂಬರ್ ಏನ್ ಹೇಳಿದಾರೆ ಗೊತ್ತಾ!! | Oneindia Kannada

English summary
Anekal karaga also very special festival : second day Fort war and broom striking .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X