• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ, ಬಿಜೆಪಿ ವಿರುದ್ಧ ಆಧಾರರಹಿತ ಸುದ್ದಿ ಪ್ರಸಾರ ಮಾಡದಂತೆ ಟಿವಿ 5 ಕನ್ನಡಕ್ಕೆ ಮಧ್ಯಂತರ ಆದೇಶ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ಆನೇಕಲ್, ಜುಲೈ 23: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಯಾವುದೇ ಆಧಾರರಹಿತ ಸುದ್ದಿ ಪ್ರಸಾರ ಮಾಡದಂತೆ ಟಿವಿ 5 ಕನ್ನಡಕ್ಕೆ ಆನೇಕಲ್ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ.

ಯಾವುದೇ ಚಾರಿತ್ರ್ಯವಧೆ ಅಥವಾ ಮಾನಹಾನಿಕರ ವರದಿಯನ್ನು ತಮ್ಮ ಸುದ್ದಿಸರಣಿಯಲ್ಲಿ ಅಥವಾ ʼಆರ್‌ ವೀ ಸ್ಟುಪಿಡ್‌ʼ ಕಾರ್ಯಕ್ರಮದಲ್ಲಿ ಪ್ರಸಾರ ಮಾಡದಂತೆ ಆನೇಕಲ್‌ನ ನ್ಯಾಯಾಲಯವೊಂದು ಇತ್ತೀಚೆಗೆ ಮಧ್ಯಂತರ ಆದೇಶ ನೀಡಿದೆ.

ಕೊರೊನಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಟಿವಿ 5 ಸುದ್ದಿವಾಹಿನಿಯ ವಿರುದ್ಧ ಬಿಜೆಪಿ ಕಾನೂನು ಪ್ರಕೋಷ್ಠದ ಸದಸ್ಯರಾದ ಆರ್‌ ಹರೀಶ್ ಕುಮಾರ್‌ ಅವರು ಆನೇಕಲ್ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.

ʼಟಿವಿ 5 ಕನ್ನಡʼ ಸುದ್ದಿಸಂಸ್ಥೆ, ವಾಹಿನಿಯ ಕಾರ್ಯನಿರ್ವಾಹಕ ಸಂಪಾದಕ ಆರ್‌ ಚೇತನ್‌, ನಿರೂಪಕ ರಮಾಕಾಂತ್ ಆರ್ಯನ್‌ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.

"ಮಂಡಿತವಾದ ಸಾಕ್ಷ್ಯಗಳ ಪ್ರಕಾರ ಈ ಹಂತದಲ್ಲಿ ನ್ಯಾಯಾಲಯ ಅಭಿಪ್ರಾಯಪಡುವುದೇನೆಂದರೆ ʼಆರ್‌ ವಿ ಸ್ಟುಪಿಡ್‌ʼ ಹೆಸರಿನಲ್ಲಿ ಪ್ರಸಾರ ಮಾಡಲಾದ ಕಂತು ಭಾರತದ ಪ್ರಧಾನಮಂತ್ರಿ ಅವರ ಇಮೇಜ್‌ ಅನ್ನು ಕಳಂಕಗೊಳಿಸುತ್ತದೆ. ಮೂರನೇ ಪ್ರತಿವಾದಿ (ರಮಾಕಾಂತ್‌ ಆರ್ಯನ್) ಅವರು ಬಳಸಿದ ಪದಗಳನ್ನು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಯೊಳಗೆ ಬಳಸಿಲ್ಲ ಎಂದು ತೋರುತ್ತದೆ. ಪ್ರತಿಯೊಬ್ಬ ಭಾರತೀಯ ಪ್ರಜೆಗೆ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ.

ಆದರೆ ಇದರರ್ಥ ಯಾವುದೇ ವ್ಯಕ್ತಿ ಆಧಾರರಹಿತವಾಗಿ ಇಲ್ಲವೇ ಬಲವಿಲ್ಲದೇ ಮಾನಹಾನಿ ಮಾಡಬಹುದು ಎಂದಲ್ಲ" ಎಂಬುದಾಗಿ ನ್ಯಾಯಾಧೀಶರಾದ ಎಂ ಎನ್‌ ರಾಮ್‌ ಪ್ರಶಾಂತ್‌ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಒಪ್ಪಿತವಾಗಿರುವಂತೆ ಭಾರತದ ಪ್ರಧಾನಿ ಇಡೀ ದೇಶವನ್ನು ಪ್ರತಿನಿಧಿಸುತ್ತಾರೆ ಮತ್ತು ಆಧಾರವಿಲ್ಲದೆ ಅವರ ವಿರುದ್ಧ ಮಾಡಲಾಗುವ ಯಾವುದೇ ಹೇಳಿಕೆ ಖಂಡಿತವಾಗಿಯೂ ಅವರ ವರ್ಚಸ್ಸಿಗೆ ಧಕ್ಕೆ ತರುತ್ತದೆ. ಪ್ರತಿವಾದಿ ಸಂಖ್ಯೆ 1 (ʼಟಿವಿ 5 ಕನ್ನಡʼ) ಕೂಡ ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭವಾಗಿದೆ. ಪ್ರತಿವಾದಿಗಳು ಆರೋಗ್ಯಕರ ಹೇಳಿಕೆಗಳನ್ನು ನೀಡಬಹುದು.
ಆದರೆ ನೇರವಾಗಿ ಮತ್ತು ಪರೋಕ್ಷವಾಗಿ ಮಾನಹಾನಿಕರ ಪದಗಳನ್ನು ಉಪಯೋಗಿಸುವಂತಿಲ್ಲ. ಒಟ್ಟಾರೆಯಾಗಿ ಯಾವುದೇ ವ್ಯಕ್ತಿಯನ್ನು ದೂಷಿಸುವ ಹಕ್ಕು ಯಾವುದೇ ವ್ಯಕ್ತಿಗೆ ಇಲ್ಲ" ಎಂದು ನ್ಯಾಯಾಧೀಶರು ವಿವರಿಸಿದ್ದಾರೆ.

ಅಲ್ಲದೆ ಇತ್ತೀಚೆಗೆ ವಾಹಿನಿಯ ಉದ್ಯೋಗ ತೊರೆದಿದ್ದ ನಿರೂಪಕಿ ಶ್ರೀಲಕ್ಷ್ಮೀ ಅವರ ಹೇಳಿಕೆಯನ್ನೂ ಆದೇಶ ಪ್ರತಿಯಲ್ಲಿ ಪ್ರಸ್ತಾಪಿಸಲಾಗಿದೆ. ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರನ್ನು ನಿಂದಿಸಬೇಕಿತ್ತು ಎಂಬ ಶ್ರೀಲಕ್ಷ್ಮಿ ಅವರ ಹೇಳಿಕೆಯನ್ನು ಗಮನಿಸಿರುವ ನ್ಯಾಯಾಲಯ, "ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪಕ್ಷದ ವಿರುದ್ಧ ಮಾನಹಾನಿಕರ ಮತ್ತು ಅಸತ್ಯದ ಸಂಗತಿಗಳನ್ನು ಪ್ರಸಾರ ಮಾಡುವುದು ಅವರ ಚಾರಿತ್ರ್ಯವಧೆ ಇಲ್ಲವೇ ಮಾನಹಾನಿ ಮಾಡಿದಂತಾಗುತ್ತದೆ.

ಪ್ರತಿವಾದಿಗಳನ್ನು ನ್ಯಾಯಾಲಯ ನಿರ್ಬಂಧಿಸದಿದ್ದರೆ ಖಂಡಿತವಾಗಿಯೂ ಮುಂದಿನ ಕಂತುಗಳ ಪ್ರಸಾರದಲ್ಲಿ ಹೆಚ್ಚು ಮಾನಹಾನಿ ಉಂಟಾಗಬಹುದು ಎಂದು ಅದು ತಿಳಿಸಿದೆ.

ಈ ಹಿನ್ನೆಲೆಯಲ್ಲಿ ವಾಹಿನಿ ಅದರ ಪ್ರತಿನಿಧಿಗಳು, ನಿರೂಪಕರು ಪ್ರಧಾನಮಂತ್ರಿ ಅವರ ವಿರುದ್ಧ ಮತ್ತು ಅವರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಮತ್ತು ಬಿಜೆಪಿ ವಿರುದ್ಧ ಪ್ರದರ್ಶನ, ಬರವಣಿಗೆ, ಪ್ರಕಟಣೆ, ಪ್ರಚಾರ, ಪ್ರಸಾರ ರೂಪದಲ್ಲಿ ಮಾನಹಾನಿಕರ ಮತ್ತು ಅಸತ್ಯದ ಹೇಳಿಕೆಗಳನ್ನು ತಮ್ಮ ಸುದ್ದಿ ಸರಣಿಯಲ್ಲಿ ಅಥವಾ ʼಆರ್‌ ವೀ ಸ್ಟುಪಿಡ್‌ ಕಾರ್ಯಕ್ರಮದಲ್ಲಿ ನೀಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.

   ಬರುವಾಗ ಒಟ್ಟಿಗೇ ಬಂದಿದೀವಿ ಹೋಗುವಾಗ್ಲೂ ಒಟ್ಟಿಗೆ ಹೋಗ್ತೀವಿ | Oneindia Kannada

   ಜೊತೆಗೆ ಫಿರ್ಯಾದಿಗಳು ಸಲ್ಲಿಸಬೇಕಾದ ದಾಖಲೆಗಳ ಕುರಿತಂತೆ ಕೆಲವು ಸೂಚನೆಗಳನ್ನು ನೀಡಿ ಪ್ರಕರಣವನ್ನು ಆಗಸ್ಟ್‌ 10ಕ್ಕೆ ಮುಂದೂಡಿದೆ.( ಮಾಹಿತಿ ಕೃಪೆ-ಬಾರ್ ಅಂಡ್ ಬೆಂಚ್)

   English summary
   Bengaluru: Anekal Court Restrains TV5 Kannada News Channel from Broadcasting Dafamatory Content Against PM Nardera Modi and BJP In an Interim Order.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X