ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಾಂಧಿ ಉಪವಾಸ ಸತ್ಯಾಗ್ರಹವನ್ನು ದೊಡ್ಡ ಡ್ರಾಮಾ: ಅನಂತ್ ಹೆಗಡೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 03: ಉತ್ತರ ಕನ್ನಡ ಸಂಸದ, ಮಾಜಿ ಕೇಂದ್ರ ಸಚಿವ,
ಬಿಜೆಪಿಯ 'ಉರಿ ನಾಲಗೆ' ಯ ಮುಖಂಡ ಅನಂತಕುಮಾರ್ ಹೆಗಡೆ ಮತ್ತೊಮ್ಮೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ವಿರುದ್ಧ ತಮ್ಮ ನಾಲಗೆ ಹರಿಬಿಟ್ಟಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರು, ಮಹಾತ್ಮಾ ಗಾಂಧಿ ಅವರ ಮೇಲೆ ಬಿಜೆಪಿ ನಾಯಕರಿಗೆ ಸ್ವಲ್ಪವಾದರೂ ಗೌರವ ವಿದ್ದರೆ ತಕ್ಷಣ ಅನಂತ್ ಕುಮಾರ ಹೆಗಡೆಯನ್ನು ಬಿಜೆಪಿಯಿಂದ ವಜಾಗೊಳಿಸಬೇಕು ಎಂದು ಡಿ.ಕೆ. ಸುರೇಶ್ ಆಗ್ರಹಿಸಿದ್ದಾರೆ.

ಅನಂತ್ ಕುಮಾರ್ ಹೆಗಡೆ ಅವರು ಈ ಹಿಂದೆ ಗಾಂಧಿ ಕೊಂದ ನಾಥೂರಾಮ್ ಗೋಡ್ಸೆ ಸಮರ್ಥಿಸಿಕೊಂಡು ಟ್ವೀಟ್ ಮಾಡಿ ಪೇಚಿಗೆ ಸಿಲುಕಿದ್ದರು. ನಂತರ ತಮ್ಮ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ಖಾತೆ ಹ್ಯಾಕ್ ಅಗಿತ್ತು ಎಂದು ಸಮರ್ಥನೆ ನೀಡಿದ್ದರು.

Anantkumar Hegde calls Gandhis Freedom struggle as a drama

ಈಗ ಗಾಂಧಿ ಅಂಥವರನ್ನು ''ಮಹಾತ್ಮ" ಎಂದು ಭಾರತದಲ್ಲಿ ಏಕೆ ಕರೆಯುತ್ತಾರೋ ಎಂದು ಪ್ರಶ್ನಿಸಿದ್ದಾರೆ. ಗಾಂಧಿ ನಡೆಸಿದ ಸ್ವಾತಂತ್ರ್ಯ ಹೋರಾಟವನ್ನು ದೊಡ್ಡ ನಾಟಕ ಎಂದು ಕರೆದಿದ್ದಾರೆ.

ಟ್ವಿಟ್ಟರ್ ಖಾತೆ ಹ್ಯಾಕ್, ಗಾಂಧೀಜಿ ಕೊಲೆ ಸಮರ್ಥನೀಯವಲ್ಲ : ಅನಂತಕುಮಾರ್ ಹೆಗಡೆಟ್ವಿಟ್ಟರ್ ಖಾತೆ ಹ್ಯಾಕ್, ಗಾಂಧೀಜಿ ಕೊಲೆ ಸಮರ್ಥನೀಯವಲ್ಲ : ಅನಂತಕುಮಾರ್ ಹೆಗಡೆ

ಬ್ರಿಟಿಷರ ಬೆಂಬಲದಿಂದ ನಡೆದ ಪೂರ್ವನಿಯೋಜಿತ ನಾಟಕದಲ್ಲಿ ಗಾಂಧಿ ಪಾತ್ರಧಾರಿಯಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಈ ನಾಯಕರನ್ನು ಪೊಲೀಸರು ಎಂದು ಮುಟ್ಟಿಲ್ಲ. ಬ್ರಿಟಿಷರ ಅನುಮತಿಯಿಂದ ಸತ್ಯಾಗ್ರಹ, ಪ್ರತಿಭಟನೆ ನಾಟಕ ನಡೆಸಲಾಗಿತ್ತು. ಇದು ನಿಜವಾದ ಸ್ವಾತಂತ್ರ್ಯ ಹೋರಾಟವೇ ಅಲ್ಲ, ಅನುಕೂಲ ಸ್ವಾತಂತ್ರ್ಯ ಚಳವಳಿ ಎಂದು ಅನಂತಕುಮಾರ್ ಹೇಳಿದರು.

ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಗಾಂಧಿ ಅವರು ನಡೆಸಿದ ಅಮರಣಾಂತ ಉಪವಾಸ ಸತ್ಯಾಗ್ರಹವೇ ಕಾರಣ ಎಂದು ಬಿಂಬಿಸಲಾಗಿದೆ. ಆದರೆ ಇದು ನಿಜವಲ್ಲ, ಸತ್ಯಾಗ್ರಹದಿಂದ ಬ್ರಿಟಿಷರು ಭಾರತವನ್ನು ತೊರೆಯಲಿಲ್ಲ ಎಂದರು.

ಭಾರತದ ಇತಿಹಾಸ ಓದಿದರೆ ನನ್ನ ರಕ್ತಕುದಿಯುತ್ತದೆ. ಹೇಗೆ ಇಂಥವರನ್ನು ಮಹಾತ್ಮ ಎಂದು ಕರೆಯಲಾಗುತ್ತದೆ ಎಂದು ತಮ್ಮ ಭಾಷಣದಲ್ಲಿ ಅನಂತಕುಮಾರ್ ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರರು, ಮಾಹಾತ್ಮಾ ಗಾಂಧೀಜಿ ಅವರ ಮೇಲೆ ಬಿಜೆಪಿ ನಾಯಕರಿಗೆ ಸ್ವಲ್ಪವಾದರೂ ಗೌರವ ವಿದ್ದರೆ ತಕ್ಷಣ ಅನಂತ್ ಕುಮಾರ ಹೆಗಡೆಯನ್ನು ಬಿಜೆಪಿಯಿಂದ ವಜಾಗೊಳಿಸಬೇಕು ಎಂದು ಡಿ.ಕೆ. ಸುರೇಶ್ ಆಗ್ರಹಿಸಿದ್ದಾರೆ.

English summary
Former Union minister and BJP MP Anantkumar Hegde this time attacks Mahatma Gandhi and calls his freedom struggle led by him a drama.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X