ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆಪ್ಟೆಂಬರ್‌ 22 ರಂದು ಅನಂತಕುಮಾರ್‌ ಪ್ರತಿಷ್ಠಾನ ಪ್ರಾರಂಭ

|
Google Oneindia Kannada News

ಬೆಂಗಳೂರು, ಸೆ. 20: ಕೇಂದ್ರದ ಮಾಜಿ ಸಚಿವ, ದಿವಂಗತ ಎಚ್. ಎನ್ ಅನಂತಕುಮಾರ್ ಅವರ ಜನ್ಮದಿನ ಸೆಪ್ಟೆಂಬರ್ 22 ರ ಭಾನುವಾರದಂದು ಹೊಸ ಪ್ರತಿಷ್ಠಾನ ಆರಂಭಿಸಲಾಗುತ್ತಿದೆ." 'ದೇಶಮೊದಲು' ಎಂಬ ಧ್ಯೇಯವನ್ನೇ ಕಣ್ಣಮುಂದಿಟ್ಟುಕೊಂಡು ವಿದ್ಯಾರ್ಥಿ ದೆಸೆಯಲ್ಲಿಯೇ ಸಮಾಜಕಾರ್ಯಕ್ಕೆ ಧುಮುಕಿದ ಅನಂತಕುಮಾರ್ ನಾಲ್ಕು ದಶಕಗಳಷ್ಟು ಕಾಲ ಅಹರ್ನಿಶಿ ದುಡಿದವರು. ತಮಗೆ ಯಾವುದೇ ಅಧಿಕಾರ ಸಿಗಲಿ, ಅದನ್ನು ದೇಶಸೇವೆ ಮತ್ತು ಸಮಾಜಸೇವೆಯ ಸದವಕಾಶವೆಂದು ತಿಳಿದು ಕೆಲಸ ಮಾಡಿದವರು. ಅವರ ಆಶಯಕ್ಕೆ ತಕ್ಕಂತೆ ಟ್ರಸ್ಟ್ ಕಾರ್ಯ ನಿರ್ವಹಿಸಲಿದೆ " ಎಂದು ಅನಂತಕುಮಾರ್ ಪತ್ನಿ ತೇಜಸ್ವಿನಿ ಹೇಳಿದರು.

ಪೌಷ್ಟಿಕಾಂಶಯುಕ್ತ ಹಾಲು ವಿತರಣೆ ರಾಜ್ಯದೆಲ್ಲೆಡೆ ವಿಸ್ತರಣೆ: ಸುರೇಶ್ ಕುಮಾರ್ಪೌಷ್ಟಿಕಾಂಶಯುಕ್ತ ಹಾಲು ವಿತರಣೆ ರಾಜ್ಯದೆಲ್ಲೆಡೆ ವಿಸ್ತರಣೆ: ಸುರೇಶ್ ಕುಮಾರ್

ಅನಂತಕುಮಾರ್ ಅವರು ಕಂಡಿದ್ದ ಕನಸುಗಳು ಅಪಾರ. ಅವುಗಳು ನನಸಾಗುವ ಹಾದಿಯಲ್ಲಿರುವಾಗಲೇ ಅವರ ಅನಿರೀಕ್ಷಿತ ಕಣ್ಮರೆ ದುರ್ದೈವದ ಸಂಗತಿ. ಆದರೆ, ಅವರ ಶಾರೀರಿಕ ಕಣ್ಮರೆಯ ಅನಂತರವೂ ಅವರು ನಮ್ಮ ನಡುವೆ ಶಾಶ್ವತವಾಗಿ ಇರುವಂತೆ ಮಾಡಲು ಅವರು ಕಂಡ ಕನಸುಗಳನ್ನು ನನಸಾಗಿಸುವುದೊಂದೇ ಮಾರ್ಗ. ಅಂತಹ ಸಾರ್ಥಕ ಹಾದಿಯಲ್ಲಿ ಸಾಗಲು ನಾಡಿನ ಹಲವಾರು ಹಿರಿಯರು ಮತ್ತು ಹಿತೈಷಿಗಳ ಅಪೇಕ್ಷೆಯಂತೆ ಮಾಜಿ ವಿಧಾನ ಪರಿಷತ್ ಸದಸ್ಯರೂ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಮಾಜಿ ರಾಷ್ಟ್ರೀಯ ಅಧ್ಯಕ್ಷರೂ ಆದ ಪ್ರೊ. ಪಿ.ವಿ.ಕೃಷ್ಣಭಟ್ ಅವರ ನೇತೃತ್ವದಲ್ಲಿ ಅನಂತಕುಮಾರ್ ಹೆಸರಿನಲ್ಲಿ ಟ್ರಸ್ಟ್ ವೊಂದನ್ನು ಸ್ಥಾಪಿಸಲು ನಿರ್ಣಯಿಸಲಾಗಿದ್ದು ಅದರ ಉದ್ಘಾಟನೆಯು ಅವರ ಹುಟ್ಟುಹಬ್ಬದಂದೇ ನೆರವೇರಲಿದೆ.

Ananthkumar Trust will be launched on his Birthday Sept 22: Tejaswini Ananth Kumar

ಪ್ರತಿಭಾವಂತ ಮಕ್ಕಳಿಗೆ ಸನ್ಮಾನ

ಪ್ರತಿಭಾವಂತ ಬಡ ಮಕ್ಕಳೆಂದರೆ ಅನಂತಕುಮಾರ್ ಅವರಿಗೆ ಎಲ್ಲಿಲ್ಲದ ಕಾಳಜಿ. ಪ್ರತಿವರ್ಷವೂ ಅವರ ಹುಟ್ಟುಹಬ್ಬದಂದು ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆಯಾದ ಬಿಸಿಯೂಟ ಸರಬರಾಜಿನ ಶಾಲೆಯ ಮಕ್ಕಳಿಗೆ ಸನ್ಮಾನಿಸಿ ಸಂಭ್ರಮಿಸುವುದು ಅವರು ದಶಕಗಳಿಂದ ನಡೆಸಿಕೊಂಡು ಬಂದಿರುವ ಪದ್ಧತಿ. ಪ್ರಸ್ತುತ ವರ್ಷವೂ ಅನಂತಕುಮಾರ್ ಅವರ ಜನ್ಮದಿನದಂದು ಅಂತಹ ಮಕ್ಕಳನ್ನು ಗುರುತಿಸಿ ಸನ್ಮಾನಿಸಬೇಕೆಂದು ನಿರ್ಧರಿಸಲಾಗಿದೆ.

* ಸಂಜೆ 3 ಗಂಟೆಗೆ ಪ್ರತಿಭಾ ಪುರಸ್ಕಾರ.

* ಸಂಜೆ 5 ಗಂಟೆಗೆ ಮಾನ್ಯ ಮುಖ್ಯಮಂತ್ರಿಗಳ ಕಾರ್ಯಕ್ರಮ

ಸೆಪ್ಟೆಂಬರ್ 22 ರ ಭಾನುವಾರ ಬೆಂಗಳೂರಿನ ಜಯನಗರದ ಎನ್‍ಎಂಕೆಆರ್ ವಿ ಕಾಲೇಜಿನ ಮಂಗಳ ಸಭಾಮಂಟಪದಲ್ಲಿ ಸಂಜೆ 3 ಗಂಟೆಗೆ ಅನಂತಕುಮಾರ್ ಅವರ ಜನ್ಮದಿನದ ಪ್ರಯುಕ್ತ ಮೇಲ್ಕಂಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿ ಪರಿಷತ್ತಿನಲ್ಲಿ ಕೆಲಸ ಮಾಡುತ್ತಿದ್ದ ಕಾಲದಿಂದಲೂ ಅನಂತಕುಮಾರ್ ಅವರಿಗೆ ಆತ್ಮೀಯರಾಗಿದ್ದ ಪ್ರಸ್ತುತ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಜಗತ್ ಪ್ರಕಾಶ್ ನಡ್ಡಾ, ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಇತರ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

English summary
Former MP Ananthkumar Trust will be launched on his Birthday Sept 22, MLC, ABVP former National president Prof PV Krisha Bhat will be the President said Adamya Chetana chief Tejaswini Ananth Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X