ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಸಂಘಟನಾ ಚತುರ' ಅನಂತಕುಮಾರ್ ಅಮರ್ ರಹೇ : ರಾಷ್ಟ್ರೀಯ ಸ್ವಯಂಸೇವಕ ಸಂಘ

|
Google Oneindia Kannada News

ಜಯನಗರದ ಸಂಸದ, ಕೇಂದ್ರ ಸಚಿವ ಎಚ್.ಎನ್ ಅನಂತಕುಮಾರ್ ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್) ತೀವ್ರ ಸಂತಾಪ ವ್ಯಕ್ತಪಡಿಸಿದೆ. ಆರೆಸ್ಸೆಸ್ ಮುಖಂಡ ಭಯ್ಯಾಜಿ ಜೋಶಿ ಹಾಗೂ ಕರ್ನಾಟಕ ಘಟಕದ ಸದಸ್ಯರು ಸಂತಾಪ ಸಂದೇಶವನ್ನು ಪ್ರಕಟಿಸಿದ್ದಾರೆ.

ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಹೆಸರು ಮಾಡಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ, ಕೇಂದ್ರೀಯ ರಸಗೊಬ್ಬರ ಖಾತೆ ಸಚಿವರಾದ ಅನಂತ ಕುಮಾರ್ ಅವರು ಇಂದು ನಮ್ಮನ್ನು ಅಗಲಿದ್ದಾರೆ.

ಬಾಲ್ಯದಿಂದಲೂ ಸಂಘದ ಸ್ವಯಂಸೇವಕರಾದ ಇವರು, ತಮ್ಮ ಕಾಲೇಜು ದಿನಗಳಲ್ಲಿ ಎಬಿವಿಪಿಯ ಸಕ್ರಿಯ ನಾಯಕರಾಗಿದ್ದರು ಹಾಗೂ ಆ ಸಮಯದ ಕರಾಳ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿದವರಾಗಿದ್ದರು. ಆರು ಬಾರಿ ಸಂಸತ್ತಿಗೆ ಆಯ್ಕೆಯಾಗಿರುವ ಸಜ್ಜನರಾದ ಅನಂತಕುಮಾರ್ ಅವರ ಸೇವೆ ಶ್ಲಾಘನೀಯ.

Ananthkumar’s death is an irreparable loss: RSS condolence message

ರಸಗೊಬ್ಬರ ಖಾತೆಯ ಸಚಿವರಾಗಿ ತಾವು ಮಾಡಿದ ಕೆಲಸದಿಂದಾಗಿ ರಸಗೊಬ್ಬರದ ಕೃತಕ ಅಭಾವವನ್ನು ನಿಲ್ಲಿಸುವಲ್ಲಿ ಅವರ ಪ್ರಯತ್ನ ಸ್ಮರಣೀಯ. ಆ ಕಾರಣಗಳಿಂದಾಗಿಯೇ ಎಲ್ಲರ ಪ್ರಶಂಸೆ ಪಡೆದವರು ಶ್ರೀ ಅನಂತಕುಮಾರ್.

ರಾಜ್ಯದಲ್ಲಿ ಎಬಿವಿಪಿ, ಭಾಜಪ ಸಂಘಟನೆಗಳ ಬಲವರ್ಧನೆಯಲ್ಲಿ ಅನಂತಕುಮಾರ್ ಅವರ ಪಾತ್ರ ಮರೆಯುವಂತಿಲ್ಲ ಹಾಗೂ ಸಂಘಟನಾ ಕಾರ್ಯದಲ್ಲಿನ ಅವರ ದೂರದೃಷ್ಟಿ ಹಾಗೂ ನಿಷ್ಠೆಯಿಂದಾಗಿ ಆ ಸಂಘಟನೆಗಳು ಸಾಕಷ್ಟು ಬೆಳೆದಿವೆ.

Ananthkumar’s death is an irreparable loss: RSS condolence message

ಅವರ ಅಕಾಲಿಕ ಮರಣದಿಂದಾಗಿ ರಾಜಕೀಯ ಕ್ಷೇತ್ರಕ್ಕೆ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವುಂಟಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಹಾಗೂ ಅವರ ಕುಟುಂಬದವರಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸುತ್ತದೆ.

- ವಿ ನಾಗರಾಜ, ಮಾನ್ಯ ಸಂಘಚಾಲಕ, ದಕ್ಷಿಣ ಮಧ್ಯಕ್ಷೇತ್ರ, ಆರೆಸ್ಸೆಸ್
- ಎನ್ ತಿಪ್ಪೇಸ್ವಾಮಿ, ಮಾನ್ಯ ಸಹಕಾರ್ಯವಾಹ, ದಕ್ಷಿಣ ಮಧ್ಯಕ್ಷೇತ್ರ, ಆರೆಸ್ಸೆಸ್
- ಮಾ ವೆಂಕಟರಾಮು, ಮಾನ್ಯ ಸಂಘಚಾಲಕ, ಕರ್ನಾಟಕ ದಕ್ಷಿಣ ಪ್ರಾಂತ, ಆರೆಸ್ಸೆಸ್
- ಖಗೇಶನ್ ಪಟ್ಟಣಶೆಟ್ಟಿ, ಮಾನ್ಯ ಸಂಘಚಾಲಕ, ಕರ್ನಾಟಕ ಉತ್ತರ ಪ್ರಾಂತ, ಆರೆಸ್ಸೆಸ್

English summary
RSS Sarkaryavah Bhaiyyaji Joshi and Karnrataka RSS unit has issued condolence message on the sad demise of MP HN Ananth Kumar.Ananth Kumar a tall leader in state and central politics, an MP from Bengaluru South constituency and a Central minister has passed away today(Nov 12)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X