• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನಂತ್ ಕುಮಾರ್ ಅಂತ್ಯ ಸಂಸ್ಕಾರ ಯಾರು ನೆರವೇರಿಸಲಿದ್ದಾರೆ?

|
   Ananth Kumar Demise : ಅನಂತ್ ಕುಮಾರ್ ಜೀವನ ಯಾನ | ಜನನ, ಬಾಲ್ಯ, ಓದು, ಮದುವೆ, ಹೋರಾಟ | Oneindia Kannada

   ಬೆಂಗಳೂರು, ನವೆಂಬರ್ 13 : ಕೇಂದ್ರ ಸಚಿವ ದಿವಂಗತ ಎಚ್ ಎನ್ ಅನಂತ್ ಕುಮಾರ್ (59) ಅವರ ಅಂತ್ಯ ಸಂಸ್ಕಾರಕ್ಕೆ ಕ್ಷಣಗಣನೆ ಆರಂಭವಾಗಿದೆ.

   ಬೆಂಗಳೂರಿನ ಚಾಮರಾಜಪೇಟೆಯ ಚಿತಾಗಾರದಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಲಿದ್ದು, ಸ್ಮಾರ್ತ ಬ್ರಾಹ್ಮಣ ಪದ್ಧತಿಯಂತೆ ಅಂತಿಮ ಕಾರ್ಯಗಳು ನಡೆಯಲಿವೆ.

   ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮತ್ತು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟ ನಂತರ, ಚಾಮರಾಜಪೇಟೆಯ ಚಿತಾಗಾರದ ವರೆಗೆ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಸಹಸ್ರಾರು ಅಭಿಮಾನಿಗಳು ಕಂಬನಿ ಮಿಡಿಯುತ್ತ ಮೆರವಣಿಗೆಯಲ್ಲಿ ಪಾಲ್ಗೊಂಡು ಅಗಲಿದ ನಾಯಕನಿಗೆ ಗೌರವ ಸೂಚಿಸಿದರು.

   ಅನಂತ್ ಅಂತಿಮ ಯಾತ್ರೆ LIVE: ಅಂತಿಮ ವಿಧಿವಿಧಾನ ಆರಂಭ

   ಕ್ಯಾನ್ಸರ್ ರೋಗಕ್ಕೆ ಬಲಿಯಾದ ಅನಂತ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ರಾಷ್ಟ್ರ ಮತ್ತು ರಾಜ್ಯ ನಾಯಕರು ಆಗಮಿಸಿದ್ದು, ತಮ್ಮ ಒಡನಾಡಿ ರಾಜಕಾರಣಿ, ಅತ್ಯುತ್ತಮ ಗೆಳೆಯ, ಸ್ನೇಹ ಜೀವಿ, ಜನಾನುರಾಗಿಗೆ ಅಂತಿಮ ವಿದಾಯ ಹೇಳಲಿದ್ದಾರೆ. ಅಷ್ಟಕ್ಕೂ ಇಬ್ಬರೂ ಹೆಣ್ಣು ಮಕ್ಕಳನ್ನು ಹೊಂದಿರುವ ಅನಂತ್ ಕುಮಾರ್ ಅವರ ಅಂತ್ಯ ಸಂಸ್ಕಾರ ನೆರವೇರಿಸುವವರು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ.

   ಅಂತ್ಯ ಸಂಸ್ಕಾರ ನೆರವೇರಿಸಲಿರುವ ಸಹೋದರ

   ಅಂತ್ಯ ಸಂಸ್ಕಾರ ನೆರವೇರಿಸಲಿರುವ ಸಹೋದರ

   ಅನಂತ್ ಕುಮಾರ್ ಅವರ ಸಹೋದರ ನಂದಕುಮಾರ್ ಅವರು ಅಂತ್ಯ ಸಂಸ್ಕಾರವನ್ನು ನೆರವೇರಿಸಲಿದ್ದಾರೆ. ಅನಂತ್ ಕುಮಾರ್ ಅವರಿಗೆ ಗಂಡು ಮಕ್ಕಳಿಲ್ಲದ ಕಾರಣ, ಹಿಂದು ಸಂಪ್ರದಾಯದ ಪ್ರಕಾರ ಅಂತಿಮ ವಿಧಿವಿಧಾನಗಳನ್ನು ಪುರುಷರೇ ಮಾಡಬೇಕಿರುವುದರಿಂದ ಅವರ ಸಹೋದರ ನಂದ ಕುಮಾರ್ ಅವರೇ ಅಂತಿಮ ವಿಧಿ ವಿಧಾನ ನೆರವೇರಿಸಲಿದ್ದಾರೆ.

   ಸ್ಮಾರ್ತ ಪದ್ಧತಿಯಂತೆ ಅಂತ್ಯ ಸಂಸ್ಕಾರ

   ಸ್ಮಾರ್ತ ಪದ್ಧತಿಯಂತೆ ಅಂತ್ಯ ಸಂಸ್ಕಾರ

   ಹಿಂದು ಸ್ಮಾರ್ತ ಬ್ರಾಹ್ಮಣ ಪಂಗಡಕ್ಕೆ ಸೇರಿರುವ ಅನಂತ್ ಕುಮಾರ್ ಅವರ ಶವಸಂಸ್ಕಾರವನ್ನು ಇದೇ ಪದ್ಧತಿಯನುಸಾರ ಮಾಡಲಾಗುತ್ತಿದೆ. ಈಗಾಗಲೇ ಪುರೋಹಿತರು ವಿಷ್ಣು ಸಹಸ್ರನಾಮ ಪಠಿಸುತ್ತಿದ್ದಾರೆ. ಮಂತ್ರಘೋಷಗಳೊಂದಿಗೆ ಅನಂತ್ ಕುಮಾರ್ ಅಂತ್ಯ ಸಂಸ್ಕಾರ ನಡೆಯಲಿದೆ.

   ಅನಂತ್ ಎಂದರೆ... ಕಣ್ಣೀರುಕ್ಕಿಸುವಂತೆ ಆಪ್ತ ಸ್ನೇಹಿತ ಬರೆದ ಸಾಲುಗಳು

   ಸರ್ಕಾರಿ ಗೌರವದೊಂದಿಗೆ ಅಂತಿಮ ವಿದಾಯ

   ಸರ್ಕಾರಿ ಗೌರವದೊಂದಿಗೆ ಅಂತಿಮ ವಿದಾಯ

   ಅನಂತ್ ಕುಮಾರ್ ಅವರು ರಾಷ್ಟ್ರ ಕಂಡ ಶ್ರೇಷ್ಠ ರಾಜಕಾರಣಿ. ಮಾತ್ರವಲ್ಲ, ಹಲವು ಬಾರಿ ಕೇಂದ್ರ ಸಚಿವರಾಗಿದ್ದವರು. ಕೇಂದ್ರ ಸಚಿವರಾಗಿದ್ದುಕೊಂಡೇ ಇಹಲೋಕ ತ್ಯಜಿಸಿರುವ ಅವರನ್ನು ಸಕಲ ಸರ್ಕಾರಿ ಗೌರವದೊಂದಿಗೆ ಬೀಳ್ಕೊಡಲಾಗುತ್ತಿದೆ. ಚಾಮರಾಜಪೇಟೆಯ ಚಿತಾಗಾರದಲ್ಲಿ 45 ನಿಮಿಷಗಳ ಕಾಲ ಅಂತಿಮ ವಿಧಿವಿಧಾನ ನಡೆಯಲಿದೆ.

   ಅನಂತ್ ರನ್ನು ಬಲಿತೆಗೆದುಕೊಂಡ ಶ್ವಾಸಕೋಶದ ಕ್ಯಾನ್ಸರ್

   ಅನಂತ್ ರನ್ನು ಬಲಿತೆಗೆದುಕೊಂಡ ಶ್ವಾಸಕೋಶದ ಕ್ಯಾನ್ಸರ್

   ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅನಂತ್ ಕುಮಾರ್ ಅವರು ಕೆಲ ದಿನಗಳ ಕಾಲ ಲಂಡನ್ನಿನಲ್ಲಿ ಚಿಕಿತ್ಸೆ ಪಡೆದಿದ್ದರಾದರೂ, ನಂತರ ಬೆಂಗಳೂರಿನ ಶಂಕರ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದ ನವೆಂಬರ್ 12 ರಂದು ಬೆಳಗ್ಗಿನ ಜಾವ 02 ಗಂಟೆಗೆ ಅವರು ಇಹಲೋಕ ತ್ಯಜಿಸಿದರು. ಅನಂತ್ ಅವರ ಅಕಾಲಿಕ ಮರಣಕ್ಕೆ ಇಡೀ ದೇಶವೂ ಕಂಬನಿ ಮಿಡಿದಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನೂರಾರು ಗಣ್ಯರು ಅವರ ಅಂತಿಮ ದರ್ಶನ ಪಡೆದಿದ್ದಾರೆ.

   ಅನಂತ್ ಕುಮಾರ್ ಇಲ್ಲದ ಬೆಂಗಳೂರು ದಕ್ಷಿಣಕ್ಕೆ ಉತ್ತರಾಧಿಕಾರಿ ಯಾರು?

   English summary
   Ananth Kumar's brother Nandkumar will be performing last rituals of his brother, as Ananth Kumar has no sons. Ananth Kumar breathed his last on 12th November in Bengaluru due to Cancer.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more