ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಂತ್ ಕುಮಾರ್ ರಿಂದ ಬೇರೆಯವರ ಯೋಜನೆ ಹೈಜಾಕ್

|
Google Oneindia Kannada News

ಬೆಂಗಳೂರು, ಏ. 14 : ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಬೇರೆ ನಾಯಕರು ಮಾಡಿದ ಕೆಲಸಗಳನ್ನು ನಮ್ಮದು ಎಂದು ಹೇಳಿಕೊಳ್ಳುತ್ತಿದ್ದಾರೆ. ಚುನಾವಣೆಯಲ್ಲಿ ಸೋಲುವ ಭಯದಿಂದ ಅನಂತ್ ಕುಮಾರ್ ಇತರ ನಾಯಕರ ಯೋಜನೆಗಳನ್ನು ಹೈಜಾಕ್ ಮಾಡುತ್ತಿದ್ದಾರೆ ಎಂದು ನಂದನ್ ನಿಲೇಕಣಿ ಆರೋಪಿಸಿದ್ದಾರೆ.

ಸೋಮವಾರ ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಅನಂತ್ ಕುಮಾರ್, ಬಿಎಂಟಿಎಫ್ ನಿರ್ಮಲಾ ಶೌಚಾಲಯಗಳಿಗೆ ತಾವು ಅನುದಾನ ನೀಡಿದ್ದು ಎಂದು ಹೇಳಿದ್ದಾರೆ. ಆದರೆ, ನಿರ್ಮಲ ಶೌಚಾಲಯಗಳಿಗೆ ಸುಧಾಮೂರ್ತಿ ಅವರು ಅನುದಾನ ನೀಡಿದ್ದು, ಈ ಯೋಜನೆಯನ್ನು ಅನಂತ್ ಕುಮಾರ್ ಹೈಜಾಕ್ ಮಾಡಿದ್ದಾರೆ ಎಂದು ನಿಲೇಕಣಿ ದೂರಿದರು.

Nandan Nilekani, Ananth Kumar

ಉಳಿದಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮತ್ತು ಅದಕ್ಕೆ ಕೆಂಪೇಗೌಡ ಅವರ ಹೆಸರು ನಾಮಕರಣ ಮಾಡಲು ಶ್ರಮಿಸಿದ್ದು ಕಾಂಗ್ರೆಸ್ ನಾಯಕರು. ಎಸ್ಎಂ ಕೃಷ್ಣ ಅವರು ಸಿಎಂ ಆಗಿದ್ದಾಗ, ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸಿದರು. ಕೃಷ್ಣ ಅವರು ಕೇಂದ್ರದಲ್ಲಿ ಸಚಿವರಾಗಿದ್ದಾಗ ಕೆಂಪೇಗೌಡ ಅವರ ಹೆಸರು ಇಡಲು ತೀರ್ಮಾನ ಕೈಗೊಳ್ಳಲಾಯಿತು ಇದರಲ್ಲಿ ಅನಂತ್ ಕುಮಾರ್ ಸಾಧನೆ ಏನೂ ಇಲ್ಲ ಎಂದರು. [ನಿಲೇಕಣಿ ಪರ ರೆಬಲ್ ಸ್ಟಾರ್ ಪ್ರಚಾರ]

ಅನಂತ್ ಕುಮಾರ್ ಅವರಿಗೆ ಚುನಾವಣೆಯಲ್ಲಿ ಸೋಲಿನ ಭೀತಿ ಕಾಡುತ್ತಿದೆ. ಆದ್ದರಿಂದ ಇತರ ನಾಯಕರು ಮಾಡಿದ ಕೆಲಸಗಳನ್ನು ತಮ್ಮದು ಎಂದು ಹೇಳಿಕೊಳ್ಳುತ್ತಿದ್ದಾರೆ. ಬೇರೆಯವರ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಅನಂತ್ ಕುಮಾರ್ ಪ್ರಯತ್ನಿಸುತ್ತಿದ್ದಾರೆ ಎಂದು ನಿಲೇಕಣಿ ದೂರಿದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಜನರು 18 ವರ್ಷಗಳಿಂದ ಕೇವಲ ಅನಂತ್ ಕುಮಾರ್ ಅವರ ಭರವಸೆಗಳನ್ನು ಕೇಳಿದ್ದಾರೆ. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ನಮಗೆ ಭರವಸೆ ನೀಡುವ ವ್ಯಕ್ತಿ ಬೇಡ ಕೆಲಸ ಮಾಡುವ ವ್ಯಕ್ತಿ ಬೇಕು ಎಂದು ನಿರ್ಧರಿಸಿದ್ದಾರೆ ಎಂದರು.

ಕ್ಷೇತ್ರದಲ್ಲಿ ಪ್ರಚಾರ ನಡೆಸುವಾಗ ನಾನು ಜನರಿಗೆ ನನಗೊಂದು ಅವಕಾಶ, ಐದು ವರ್ಷ ಕೊಡಿ, ನಾನು ಸಾಧಿಸಿ ತೋರಿಸುತ್ತೇನೆ ಎಂದು ಜನರಲ್ಲಿ ಮನವಿ ಮಾಡುತ್ತಿದ್ದೇನೆ. ದಕ್ಷಿಣ ಕ್ಷೇತ್ರದ ಜನರು ನನಗೆ ಬೆಂಬಲ ನೀಡಲಿದ್ದಾರೆ ಎಂದು ನಂದನ್ ನಿಲೇಕಣಿ ವಿಶ್ವಾಸ ವ್ಯಕ್ತಪಡಿಸಿದರು.

English summary
Elections 2014 : Bangalore South constituency Congress candidate Nandan Nilekani noted that, Ananth Kumar is now taking credit not just for work done by other political leaders, but also work done by Bangalore citizens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X