ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀಮಂತಿಕೆಯ ಪ್ರದರ್ಶನಕ್ಕೂ ಗೋಡೆ ಬಿದ್ದರೆ ಎನ್ನುವ ಭಯ: ಅನಂತ್ ಕುಮಾರ್ ಹೆಗಡೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 18: ಟ್ರಂಪ್ ಭಾರತಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಅಹಮದಾಬಾದಿನಲ್ಲಿ ಸ್ಲಂಗಳು ಕಾಣದಂತೆ ತಡೆಗೋಡೆ ನಿರ್ಮಿಸುತ್ತಿರುವ ಕುರಿತು ಕುಮಾರಸ್ವಾಮಿ ಪ್ರಶ್ನೆಗೆ ಕೇಂದ್ರ ಸಚಿವ ಅನಂತ್ ಕುಮಾರ್ ಎದುರೇಟು ನೀಡಿದ್ದಾರೆ.

ದೇಶಲ್ಲಿರುವ ಬಡತನವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಹಲವು ಯೋಜನೆಗಳ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದ ಮಹಾನುಭಾವರಿಗೆ ಮೋದಿ ಆಡಳಿತದಲ್ಲಿ ಗೋಡೆಯ ಅರಿವು ಸ್ವಾಭಾವಿಕ ಎಂದು ಟ್ವೀಟ್ ಮಾಡಿದ್ದಾರೆ.

''ಗರೀಬಿ ಹಠಾವೋ' ದಿ. ಇಂದಿರಾ ಗಾಂಧಿ, 'ಗರೀಬಿ ಚುಪಾವೋ' ಪ್ರಧಾನಿ ಮೋದಿ''''ಗರೀಬಿ ಹಠಾವೋ' ದಿ. ಇಂದಿರಾ ಗಾಂಧಿ, 'ಗರೀಬಿ ಚುಪಾವೋ' ಪ್ರಧಾನಿ ಮೋದಿ''

ಶ್ರೀಮಂತಿಕೆ ಪ್ರದರ್ಶನಕ್ಕೂ ಗೋಡೆ

ಅಂಜಿಕೆ ಇರುವುದು ಮೋದಿಯವರನ್ನು ಹೀಗೇ ಮುಂದುವರಿಯಲು ಬಿಟ್ಟರೆ, ನಾಳೆ ಇವರ ಶ್ರೀಮಂತಿಕೆಯ ಪ್ರದರ್ಶನಕ್ಕೂ ಗೋಡೆ ಏಳಲಿದೆ ಎನ್ನುವುದು ಪ್ರಸ್ತುತ ವಾಸ್ತವ ಎಂದು ಟ್ವೀಟ್ ಮಾಡಿದ್ದಾರೆ.

ಸಿಎಎ ಹೋರಾಟ ಕಾಣಿಸದಂತೆ ಯಾವ ಭದ್ರಕೋಟೆ ನಿರ್ಮಿಸುತ್ತೀರಿ?

ಸಿಎಎ ಹೋರಾಟ ಕಾಣಿಸದಂತೆ ಯಾವ ಭದ್ರಕೋಟೆ ನಿರ್ಮಿಸುತ್ತೀರಿ?

ದೇಶವ್ಯಾಪಿ ಭುಗಿಲೆದ್ದಿರುವ ಸಿಎಎ ವಿರೋಧಿ ಹೋರಾಟ ಕಾಣಿಸದಂತೆ ಯಾವ ಭದ್ರಕೋಟೆ ನಿರ್ಮಿಸುತ್ತಾರೆ? ದೇಶದಲ್ಲಿ ತಾಂಡವವಾಡುತ್ತಿರುವ ಬಡತನ, ನಿರುದ್ಯೋಗ ಸಮಸ್ಯೆ ಮರೆಮಾಚಲು ಯಾವ ತಡೆಗೋಡೆ ನಿರ್ಮಿಸುತ್ತಾರೆ? ಮೋದಿ ಅವರೇ ಉತ್ತರಿಸುವಿರಾ? ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ 100 ಕೋಟಿ ಖರ್ಚು

ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ 100 ಕೋಟಿ ಖರ್ಚು

ಭಾರತ ಭೇಟಿಯ ವೇಳೆ ಟ್ರಂಪ್‌ ಅಹಮದಾಬಾದ್‌ನಲ್ಲಿ ಕೇವಲ ಮೂರು ಗಂಟೆ ಇರಲಿದ್ದಾರೆ. ಆದರೆ, ಆ ಕಾರ್ಯಕ್ರಮಕ್ಕೆ 100 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಇದು ಪ್ರಧಾನಿ ಮೋದಿ ಹಾಗೂ ಟ್ರಂಪ್‌ ನಡುವಣ ರಾಜಕೀಯ ಒಪ್ಪಂದ ಎಂದು ಶಿವಸೇನೆ ಕಟುವಾಗಿ ಟೀಕಿಸಿದೆ.

ಫೆಬ್ರವರಿ 24-25ರಂದು ಟ್ರಂಪ್ ಭಾರತ ಭೇಟಿ

ಫೆಬ್ರವರಿ 24-25ರಂದು ಟ್ರಂಪ್ ಭಾರತ ಭೇಟಿ

ಡೊನಾಲ್ಡ್‌ ಟ್ರಂಪ್‌ ಮತ್ತು ಪತ್ನಿ ಮೆಲಾನಿಯಾ ಟ್ರಂಪ್‌ ಅವರು ಫೆಬ್ರವರಿ 24 ಮತ್ತು 25 ರಂದು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ‘ನಮಸ್ತೇ ಟ್ರಂಪ್‌' ಹೆಸರಿನಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಬೃಹತ್‌ ಕಾರ್ಯಕ್ರಮ ಆಯೋಜಿಸಲಾಗಿದೆ. ಫೆಬ್ರವರಿ 25ರಂದು ಟ್ರಂಪ್‌ ದಿಲ್ಲಿಗೂ ಭೇಟಿ ನೀಡಲಿದ್ದಾರೆ.

English summary
Central Minister Ananth Kumar Hegde Replies To Former Chief Minister HD Kumaraswamy's Tweet Over Trump Visit To India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X