ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓಮಿಕ್ರಾನ್ ಸೋಂಕಿತರಲ್ಲಿ ಒಬ್ಬರು ವೈದ್ಯರು: ಡಾ.ಕೆ ಸುಧಾಕರ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 2: ಸಿಲಿಕಾನ್ ಸಿಟಿಯಲ್ಲಿ ಓಮಿಕ್ರಾನ್ ವೈರಸ್ ಕಾಣಿಸಿಕೊಂಡ ಸೋಂಕಿತರಲ್ಲಿ ಓರ್ವ ವ್ಯಕ್ತಿ ವೈದ್ಯರಾಗಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ. ಇಂದು ಬೆಂಗಳೂರಿನಲ್ಲಿ ಐವರಲ್ಲಿ ಓಮಿಕ್ರಾನ್ ವೈರಸ್ ಪತ್ತೆಯಾಗಿದೆ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ. ಈ ನಡುವೆ ಸೋಂಕಿತರ ಟ್ರಾವೆಲ್ ಹಿಸ್ಟ್ರಿ ಪತ್ತೆ ಮಾಡಲಾಗುತ್ತಿದೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್, "ಬಹುಬೇಗ ನಾವು ಓಮಿಕ್ರಾನ್ ಇರುವುದನ್ನು ಪತ್ತೆ ಮಾಡಿದ್ದೇವೆ. ಬೆಂಗಳೂರಿನಲ್ಲಿ ಐವರಿಗೆ ಓಮಿಕ್ರಾನ್ ವೈರಸ್ ಹರಡಿರುವುದು ದೃಢಪಟ್ಟಿದೆ. ಐವರಲ್ಲಿ ಓರ್ವ ಸೋಂಕಿತರಿಗೆ ಪ್ರಯಾಣದ ಹಿನ್ನೆಲೆ ಇದೆ. ಆದರೆ ಇನ್ನುಳಿದವರಿಗೆ ಯಾವುದೇ ಟ್ರಾವೆಲ್ ಹಿಸ್ಟ್ರಿ ಇಲ್ಲ. ಇವರಲ್ಲಿ ಓರ್ವ ಸೋಂಕಿತರು 46 ವರ್ಷದ ವೈದ್ಯರಾಗಿದ್ದಾರೆ" ಎಂದಿದ್ದಾರೆ.

ಓಮಿಕ್ರಾನ್‌ ದೃಢ: ಶೀಘ್ರ ಹೊಸ ಮಾರ್ಗಸೂಚಿ ಬಿಡುಗಡೆ ಎಂದ ಸಿಎಂ ಬೊಮ್ಮಾಯಿಓಮಿಕ್ರಾನ್‌ ದೃಢ: ಶೀಘ್ರ ಹೊಸ ಮಾರ್ಗಸೂಚಿ ಬಿಡುಗಡೆ ಎಂದ ಸಿಎಂ ಬೊಮ್ಮಾಯಿ

"ವೈದ್ಯರಿಗೆ ಅತೀಯಾದ ಆಯಾಸ, ಸ್ವಲ್ಪ ಜ್ವರ, ನಿಃಶಕ್ತಿ ಕಾಣಿಸಿಕೊಂಡಿದೆ. ತಡಮಾಡದೆ ಕೊರೊನಾ ಪರೀಕ್ಷೆ ಮಾಡಿಸಿದ್ದಾರೆ. ವರದಿ ಪಾಸಿಟಿವ್ ಬಂದಿದೆ. ಇವರಲ್ಲಿ ಹೈ ವೈರಸ್ ಲೋಡ್ ಕಂಡುಬಂದಿದ್ದು ಜಿನೋಮಿಕ್‌ ಸೀಕ್ವೆನ್ಸ್‌ ವರದಿಯಲ್ಲಿ ಓಮಿಕ್ರಾನ್ ಇರುವುದು ದೃಢಪಟ್ಟಿದೆ. ಹೀಗಾಗಿ ಅವರ ಪ್ರಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿ ಇದ್ದವರನ್ನು ಪರೀಕ್ಷೆ ಒಳಪಡಿಸಲಾಯಿತು. ಆರಂಭದಲ್ಲಿ ಐವರು ವೈದ್ಯರಲ್ಲಿ ಕೊರೊನಾ ದೃಢಪಟ್ಟಿತ್ತು. ಜಿನೋಮಿಕ್‌ ಸೀಕ್ವೆನ್ಸ್‌ ವರದಿಯಲ್ಲಿ ಇವರಲ್ಲಿ ಒಬ್ಬರಿಗೆ ಮಾತ್ರ ಓಮಿಕ್ರಾನ್ ದೃಢಪಟ್ಟಿದೆ. ವಿಷೇಶ ಅಂದರೆ ಇವರಿಗೆ ಯಾವುದೇ ಟ್ರಾವೆಲ್ ಹಿಸ್ಟ್ರಿ ಇಲ್ಲ. ಅವರು ಐಸೋಲೇಟ್ ಆಗಿದ್ದಾರೆ. ಬೆಂಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ" ಎಂದರು.

Among the omicron infected One is a doctor - Dr K Sudhakar

'ರಾಜ್ಯದಲ್ಲಿ ಜನರಿಗೆ ನಾನು ಮನವಿ ಮಾಡುತ್ತೇನೆ. ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಿ. ಎರಡು ಡೋಸ್‌ ಗಳನ್ನು ಆದಷ್ಟು ಶೀಘ್ರದಲ್ಲಿ ತೆಗೆದುಕೊಳ್ಳಬೇಕು. ಅನಗತ್ಯ ಗುಂಪು ಗುಂಪು ಸೇರುವುದು ಮಾಡಬೇಡಿ. ಸಭಾಂಗಣದಲ್ಲಿ ಸೇರುವುದನ್ನು ತಪ್ಪಿಸಬೇಕು. ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ಪರೀಕ್ಷೆಗೆ ಸೂಚಿಸಲಾಗಿದೆ. ಟೆಸ್ಟಿಂಗ್ ಮಾಡು ನಿರ್ಧರಿಸಲಾಗಿದೆ. ಡೆಲ್ಟಾದಂತೆ ಉಸಿರಾಟದ ಸಮಸ್ಯೆ ಇರುವಂತೆ ಇದರಲ್ಲಿ ಭೀಕರತೆ ಕಂಡುಬಂದಿಲ್ಲ. ಓಮಿಕ್ರಾನ್ ಸೋಂಕಿತರಿಗೆ ಯಾವುದೇ ತೀವ್ರವಾದ ಸಮಸ್ಯೆ ಇಲ್ಲ. ಯಾರಿಗೂ ಗೊಂದಲ ಬೇಡ. ಊಹಾಪೋಹಗಳಿಗೆ ಕಿವಿಕೊಡಬೇಡಿ' ಎಂದರು.

ರಾಜ್ಯದಲ್ಲಿ ಐದು ಜನಕ್ಕೆ ಹರಡಿದೆ ಓಮಿಕ್ರಾನ್: ಬಿಬಿಎಂಪಿ ಸ್ಪಷ್ಟನೆರಾಜ್ಯದಲ್ಲಿ ಐದು ಜನಕ್ಕೆ ಹರಡಿದೆ ಓಮಿಕ್ರಾನ್: ಬಿಬಿಎಂಪಿ ಸ್ಪಷ್ಟನೆ

ಸಿಎಂ ನೇತೃತ್ವದಲ್ಲಿ ಸಭೆ:

ಜೊತೆಗೆ 'ಈ ಬಗ್ಗೆ ನಾಳೆ ಮಹತ್ವದ ಸಭೆ ನಡೆಸುತ್ತೇವೆ. ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಆರೋಗ್ಯ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು, ತಜ್ಞರು ಭಾಗಿಯಾಗಲಿದ್ದಾರೆ. ಸೂಕ್ತ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತದೆ. ಕೇಂದ್ರ ಆರೋಗ್ಯ ಸಚಿವರೊಂದಿಗೆ ನಾನು ಮಾತನಾಡಿದ್ದೇನೆ. ಅವರು ಸಹಲೆಯನ್ನು ನೀಡಿದ್ದಾರೆ. ಇಷ್ಟರಲ್ಲೇ ಎಲ್ಲಾ ವಿಷಯಗಳನ್ನು ಅರಿತುಕೊಂಡು ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಾದ್ಯಮದವರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ" ಎಂದಿದ್ದಾರೆ.

ವ್ಯಕ್ತಿಯ ವೈಯಕ್ತಿಕ ವಿಚಾರಗಳನ್ನು ನಾವು ಹೇಳುವಂತಿಲ್ಲ. ಓಮಿಕ್ರಾನ್ ಎಷ್ಟು ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಪರಿಶೀಲನೆ ಮಾಡುತ್ತಿದೆ. ಅದು ಮಾಹಿತಿ ನೀಡಿದ ಬಳಿಕ ನಾವು ಮಾಹಿತಿ ನೀಡುತ್ತೇವೆ. ನಾಳೆ ಸಿಎಂ ಬಸವರಾಜ ಬೊಮ್ಮಾಯಿಯೊಂದಿಗೆ ಸಭೆ ಮಾಡಿ ಹೊಸ ಮಾರ್ಗಸೂಚಿಗಳ ನಿರ್ಧಾರಗಳ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದರು.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದೇ ದಿನ ಓಮಿಕ್ರಾನ್ ಐದು ಕೇಸ್ ದಾಖಲಾಗಿವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸುದ್ದಿ ಗೋಷ್ಠಿಯಲ್ಲಿ ಹೇಳಿದರು. '46 ವರ್ಷದ ಸೋಂಕಿತ ವ್ಯಕ್ತಿ ನವೆಂಬರ್ 20ರಂದು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿರುತ್ತಾರೆ. ವಿಮಾನ ನಿಲ್ದಾಣದಲ್ಲಿ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಮೂರು ದಿನ ಮಾತ್ರ ಹೋಟೆಲ್‌ನಲ್ಲಿ ಕ್ವಾರಂಟೈನ್ ಆಗಿದ್ದರು. ಮೂರು ದಿನಗಳ ನಂತರ ಪರೀಕ್ಷೆ ಮಾಡಲಾಗಿದೆ. ಆಗ ಅವರಿಗೆ ವರದಿ ನೆಗೆಟಿವ್ ಬಂದಿದೆ. ಈ ವ್ಯಕ್ತಿಯಲ್ಲಿ ರೋಗ ಲಕ್ಷಣಗಳು ಕಂಡು ಬಂದಿರಲಿಲ್ಲ' ಎಂದು ಗುಪ್ತಾ ಹೇಳಿದ್ದಾರೆ. ಪರೀಕ್ಷೆ ಬಳಿಕ ಇವರು ನೇರವಾಗಿ ಬೊಮ್ಮಸಂದ್ರಕ್ಕೆ ತೆರಳಿದ್ದಾರೆ. ನಂತರ ಅವರು ಮೀಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಕಂಪನಿ ಬೋರ್ಡ್ ಮೀಟಿಂಗ್‌ನಲ್ಲಿ ಆರು ಜನ ಭಾಗಿಯಾಗಿದ್ದರು. ಹೋಮ್ ಕ್ವಾರಂಟೈನ್ ಆಗದೇ ಮೀಟಿಂಗ್ನಲ್ಲಿ ಅವರು ಭಾಗಿಯಾಗಿದ್ದಾರೆ. ಹೀಗಾಗಿ ಪ್ರಥಮ ಸಂಪರ್ಕದಲ್ಲಿದ್ದವರಲ್ಲಿ ಸೋಂಕು ಹರಡಿರುವ ಸಾಧ್ಯತೆ ಇದೆ. ಈ ಬಗ್ಗೆ ಪರಶೀಲನೆ ನಡೆಸಲಾಗಿದ್ದು ಮಾದರಿಗಳನ್ನು ಪರೀಕ್ಷೆಗೆ ನೀಡಲಾಗಿದೆ.

ಇನ್ನೂ 'ಎರಡನೇ ವ್ಯಕ್ತಿಗೆ ಯಾವುದೇ ಟ್ರಾವೆಲ್ ಹಿಸ್ಟ್ರಿ ಇಲ್ಲ. ಇದರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ನವೆಂಬರ್ 22 ರಂದು ಎರಡನೇ ವ್ಯಕ್ತಿಗೆ ಪರೀಕ್ಷೆ ಮಾಡಲಾಗಿದೆ. ಈ ವೇಳೆ ಪಾಸಿಟಿವ್ ಬಂದಿದೆ. ನವೆಂಬರ್ 24 ಸೋಂಕು ದೃಢಪಟ್ಟಿದೆ. 13 ಪ್ರಥಮ 213 ದ್ವೀತಿಯ ಸಂಪರ್ಕದಲ್ಲಿದ್ದರು. ಇವರಲ್ಲಿ ಮೂವರಿಗೆ ಪಾಸಿಟಿವ್ ಬಂದಿದೆ. ಒಟ್ಟು ಐದು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ' ಎಂದು ಗುಪ್ತಾ ಹೇಳಿದರು.

Posted by Dr. Sudhakar K on Thursday, December 2, 2021

English summary
Health Minister Dr K Sudhakar has informed that one of the victims of the Omicron virus infection in Silicon City is a doctor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X