ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಾಸೌಧದಲ್ಲಿ 'ಅಮ್ಮಾವ್ರ ಗಂಡ' ಹಾಗೂ ಸ್ವರಾಗ ಸಂಜೆ

By Mahesh
|
Google Oneindia Kannada News

ಬೆಂಗಳೂರು, ಜು.03: ಕೈಲಾಸಂರವರ ಬರವಣಿಗೆಯಲ್ಲಿನ ವಿಶೇಷತೆಗಳು ಹಲವು. ಆ ರೀತಿಯ ವಿಡಂಬನಾತ್ಮಕ, ಸಾಂಸಾರಿಕ ನಗೆ ನಾಟಕ ಅಮ್ಮಾವ್ರ ಗಂಡ. ಪ್ರತಿ ತಿಂಗಳ ಮೊದಲ ಭಾನುವಾರದ ಸಂಜೆ, ಕೆ.ಎಚ್.ಕಲಾಸೌಧದ ಮುಂಭಾಗದಲ್ಲಿನ ಕೋಗಿಲೆಗಳನ್ನ ಮೂಕಗೊಳಿಸುವ ಪ್ರಯತ್ನವಾಗಿ ಸ್ವರಾಗ ಸಂಜೆ ಸಂಗೀತ ಕಾರ್ಯಕ್ರಮವನ್ನು ಸಾದರ ಪಡಿಸುತ್ತಿದೆ.

ಆಮ್ಮಾವ್ರ ಗಂಡ: ಕೈಲಾಸಂರವರ ಬರವಣಿಗೆಯಲ್ಲಿನ ವಿಶೇಷತೆಗಳು ಹಲವು. ಆ ರೀತಿಯ ವಿಡಂಬನಾತ್ಮಕ, ಸಾಂಸಾರಿಕ ನಗೆ ನಾಟಕ ಅಮ್ಮಾವ್ರ ಗಂಡ. ಅಮ್ಮಾವ್ರ ಗಂಡ ಎನ್ನುವ ಮಾತಿಗೆ ವಿರುದ್ದವಾದ ವಿಚಾರಗಳನ್ನು ಸಾರುವ ಈ ನಾಟಕ ಸಂಸಾರದಲ್ಲಿನ ಸಾರವನ್ನು ಸಮಂಜಸವಾಗಿ ನೋಡುಗರ ಮನಮುಟ್ಟಿಸುವಲ್ಲಿ ಹಲವು ದಶಕಗಳಿಂದ ಯಶಸ್ವಿಯಾಗಿದೆ.

ಈಗಲೂ ಈ ನಾಟಕದ ಕಲಾವಸ್ತು ಸಂಪೂರ್ಣವಾಗಿ ಪ್ರಸ್ತುತ ಎಂಬುದು ಅಚ್ಚರಿಯ ವಿಷಯವೇ ಸರಿ. ವಿಭಿನ್ನ ಶೈಲಿಯ ಬರವಣಿಗೆಗೆ ಹೆಸರಾದ ಕೈಲಾಸಂ ರವರ ಈ ನಾಟಕದಲ್ಲಿನ ಪದಪ್ರಯೋಗಗಳು, ಶುದ್ದವಾದ ಬ್ರಿಟನ್ ಅಂಗ್ಲ ಪದಗಳು ಈಗಿನ ಕಾಲದ ಆಂಗ್ಲಮೋಹಕ್ಕೊಳಗಾದವರಿಗೂ ಹೊಸದೆನಿಸುವುದೆಂದರೆ ಅತಿಸಯೋಕ್ತಿಯೇನಲ್ಲ.

ದಿನಾಂಕ ಮತ್ತು ಸಮಯ - ಜುಲೈ 5 ಭಾನುವಾರ ಸಂಜೆ 5:00 ಕ್ಕೆ.
ಸ್ಥಳ : ಕೆಂಗಲ್ ಹನುಮಂತಯ್ಯ ಕಲಾಸೌಧ, ರಾಮಾಂಜನೇಯ ದೇವಸ್ಥಾನದ ಆವರಣ, ಹನುಮಂತನಗರ ಬೆಂಗಳೂರು 560019
ವಿವರಗಳಿಗಾಗಿ ಸಂಪರ್ಕಿಸಿ: 72599 98222/333 ಅಥವಾ http://prakasamtrust.org/ ನೋಡಿ
ರಚನೆ: ಟಿ.ಪಿ.ಕೈಲಾಸಂ | ವಿನ್ಯಾಸ ಮತ್ತು ನಿರ್ದೇಶನ: ಪಿ. ಡಿ. ಸತೀಶ್ ಚಂದ್ರ

ತಾಂತ್ರಿಕ ವರ್ಗ
ಅಮ್ಮಾವ್ರು (ಸರೋಜ) - ಸುರಭಿ ವಸಿಷ್ಟ
ಅಮ್ಮಾವ್ರ ಗಂಡ (ಸುಬ್ಬು) - ಸುಜಯ್ ಶಾಸ್ತ್ರಿ
ಯಜಮಾನ್ರ ಹೆಂಡ್ತಿ(ಕಮಲು) - ರಶ್ಮಿ
ಯಜಮಾನ್ರು(ನರಸಿಂಹಯ್ಯ) - ಚಂದನ್ ಶಂಕರ್
ಬೆಳಕು - ಮೋಹನ್
ರಂಗ ಪರಿಕರಗಳು - ಉಮೇಶ್, ವತ್ಸ
ನಿರ್ವಹಣೆ, ವಸ್ತ್ರ ವಿನ್ಯಾಸ - ಪೂಜ

Ammavra Ganda- A Kannada Comedy

ನಿರ್ದೇಶಕರ ನುಡಿ, ಪಿ ಡಿ ಸತೀಶ್ ಚಂದ್ರ: ನಮ್ಮ ತಂದೆಯವರು ನಾನು ಏಳು ವರ್ಷದವನಾಗಿದ್ದಾಗ ಅಂದು ಪ್ರಖ್ಯಾತಿ ಹೊಂದಿದ್ದ ಗುಳ್ಳೆ ನರಿ ನಾಟಕಕ್ಕೆ ಕರೆದೋಯ್ದಿದ್ದರು. ನನಗೆ ನಾಟಕದ ಹಾಡುಗಳು ಹಾಗು ಸುತ್ತಮುತ್ತಲಿನವರ ನಿಲ್ಲದ ನಗು ಇಂದಿಗೂ ಜ್ಞಾಪಕವಿದೆ.

ಶ್ರೀನಿವಾಸ್ ಪ್ರಭುರವರು ನನಗೆ ಈ ಕಥೆ ಕೇಳಿ ನಗುನಗುತ್ತಲೆ ಹಸ್ತಪ್ರತಿಯನ್ನು ಕೊಟ್ಟಿದಲ್ಲದೆ ನಿರ್ದೇಶನಕ್ಕೆ ಅನುಗುಣವಾದ ಸಲಹೆಗಳನ್ನು ನೀಡಿದರು. ನಾಟಕವನ್ನೋದಿದ ನಂತರ ನಾನು ಇದರಲ್ಲಿ ಪಾತ್ರಮಾಡದೆ ಇರಲಾಗಲಿಲ್ಲ. ಪ್ರ.ಕ.ಸಂ ಹಾಗು ನನ್ನ ನಿರ್ದೇಶನದ ವಿಶಿಷ್ಟ ನಾಟಕವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಪ್ರದರ್ಶನ ಕಲಾ ಸಂಸ್ಥೆ: ಪ್ರಕಸಂ ಪ್ರದರ್ಶನ ಕಲೆಗಳ ಪ್ರಚಾರ, ಪಾಲನೆ, ಪೋಷಣೆ, ನಿರೂಪಣೆ ಹಾಗು ನಿರ್ವಹಿಸಲು ಪಣ ತೊಟ್ಟಿರುವ ಸಂಸ್ಥೆ. ಕಲಾಸೇವೆಗಾಗಿ ಪ್ರಕಸಂ ಕೆಂಗಲ್ ಹನುಮಂತಯ್ಯ ಕಲಾಸೌಧದ ನಿರ್ವಹಣೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಗುತ್ತಿಗೆಗೆ ಪಡೆದುಕೊಂಡು ಪ್ರದರ್ಶನ ಕಲೆಗಳಾದ ನಾಟಕ, ನೃತ್ಯ, ಸಂಗೀತ ಮತ್ತು ಚಲನಚಿತ್ರಗಳ ಆಯಾಮಗಳ ಪರಿಚಯವನ್ನು ಬಸವನಗುಡಿಯ ಹಾಗು ಬೆಂಗಳೂರಿನ ಸಹೃದಯಿ ನಾಗರೀಕರರಿಗೆ ಪ್ರಸ್ತುತ ಪಡಿಸಿದೆ.

ಯುವಜನರನ್ನು ಪ್ರೋತ್ಸಾಹಿಸಿ ರಂಗಭೂಮಿಗೆ ಹೊಸ ಪ್ರೇಕ್ಷಕವರ್ಗವನ್ನು ಸೃಷ್ಟಿಸಲು ಅನುಪಮ ಪ್ರದರ್ಶನ ಕಲಾ ಪ್ರಯೋಗಗಳನ್ನು ನಿರ್ಮಿಸುತ್ತ ಬಂದಿದೆ. ಈ ರಂಗಮಂಚದ ಮೇಲೆ ಪ್ರಪಂಚದ ಎಲ್ಲಾ ಭಾಗಗಳಿಂದ ಕಲಾವಿದರು ಬಂದು ತಮ್ಮ ಅನನ್ಯ ಕಲಾಜ್ಯೋತಿಯನ್ನು ಬೆಳಗಿಸಿದ್ದಾರೆ. ಜನವರಿ 2010ರಿಂದ ಜನವರಿ 2014ರವರಗೆ 1800ಕ್ಕೂ ಹೆಚ್ಚು ಕಲಾ ಪ್ರದರ್ಶನಗಳಾಗಿವೆ.

English summary
Ammavra Ganda- A Kannada Comedy play written by T.P.Kailasam and directed by P.D.Satish Chandra. TP Kailasam's fun filled social comedy Ammavra Ganda play has strong message about life and spending life with your partner.This play is directed by P.D.Satish Chandra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X