ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿದಾನಂದಮೂರ್ತಿ, ಸಿದ್ದಲಿಂಗಯ್ಯರ ಭೇಟಿ ಮಾಡಿದ ಅಮಿತ್ ಶಾ

By Manjunatha
|
Google Oneindia Kannada News

ಬೆಂಗಳೂರು, ಏಪ್ರಿಲ್ 18: ಬಸವ ಜಯಂತಿಯಂದು ಬಸವಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಿಜೆಪಿಯ ಅಮಿತ್ ಶಾ ಅವರು ಸಂಶೋಧಕ ಚಿದಾನಂದ ಮೂರ್ತಿ ಮತ್ತು ಬಂಡಾಯ ಸಾಹಿತಿ ಸಿದ್ದಲಿಂಗಯ್ಯ ಅವರನ್ನು ಭೇಟಿ ಮಾಡಿದರು.

ಸಂಗೊಳ್ಳಿ ರಾಯಣ್ಣ ನೆಲದಲ್ಲಿ ಕಂಬಳಿ ಹೊದ್ದು ಅಮಿತ್ ಶಾ ಪ್ರಚಾರ! ಸಂಗೊಳ್ಳಿ ರಾಯಣ್ಣ ನೆಲದಲ್ಲಿ ಕಂಬಳಿ ಹೊದ್ದು ಅಮಿತ್ ಶಾ ಪ್ರಚಾರ!

ಇಬ್ಬರೂ ಹಿರಿಯ ಚಿಂತಕರ ಸ್ವಗೃಹಕ್ಕೆ ತೆರಳಿ ಭೇಟಿ ಮಾಡಿದ ಅಮಿತ್ ಶಾ, ಯಡಿಯೂರಪ್ಪ ಹಾಗೂ ಇತರ ಬಿಜೆಪಿ ಮುಖಂಡರು ಕೆಲ ಕಾಲ ಅವರೊಂದಿಗೆ ಚರ್ಚೆ ನಡೆಸಿ ಉಪಯುಕ್ತ ಸಲಹೆಗಳನ್ನು ಪಡೆದರು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಹಿರಿಯ ಸಂಶೋಧಕ ಚಿದಾನಂದ ಮೂರ್ತಿ ಅವರು, 'ಲಿಂಗಾಯತ ಪ್ರತ್ಯೇಕ ಧರ್ಮ ಮಾಡುವುದಕ್ಕೆ ಬಿಡಬೇಡಿ' ಎಂದು ಅಮಿತ್ ಶಾ ಅವರಲ್ಲಿ ಮನವಿ ಮಾಡಿದರು. ಆದರೆ ಇದಕ್ಕೆ ಶಾ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎನ್ನಲಾಗಿದೆ. ಜೊತೆಗೆ ಗೋ ರಕ್ಷಣೆ ಕುರಿತು ವಿಶೇಷ ಕಾನೂನು ರಚಿಸುವಂತೆಯೂ ಚಿದಾನಂದಮೂರ್ತಿ ಅವರು ಶಾ ಅವರಲ್ಲಿ ಮನವಿ ಮಾಡಿದ್ದಾರೆ.

In Pics: ಬಿಜೆಪಿಯ ಬಸವ ಜಯಂತಿ, ಚಿಂತಕರೊಂದಿಗೆ ಚರ್ಚೆ ಮಾಡಿದ ಶಾ

ನಂತರ ದಲಿತ ಸಾಹಿತಿ ಸಿದ್ದಲಿಂಗಯ್ಯ ಅವರ ಮನೆಗೆ ತೆರಳಿದ ಬಿಜೆಪಿ ಪಟಾಲಂ ಅಲ್ಲಿಯೂ ಕೆಲ ಕಾಲ ಚರ್ಚೆ ನಡೆಸಿದರು. ಈ ಸಮಯ ಮಾತನಾಡಿದ ಸಿದ್ದಲಿಂಗಯ್ಯ ಅವರು ಅನಂತ್‌ಕುಮಾರ್ ಹಗಡೆ ಅವರ ದಲಿತ ವಿರೋಧಿ ಹಾಗೂ ಜಾತ್ಯಾತೀತವಾದಿ ವಿರೋಧಿ ಹೇಳಿಕೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿ, ಅನಂತ್‌ಕುಮಾರ್ ಹೆಗಡೆ ವಿರುದ್ಧ ಸೂಕ್ತ ಕ್ರಮ ಕೂಗೊಳ್ಳಲು ಮನವಿ ಮಾಡಿದರು ಮತ್ತು ದಲಿತರ ಹಕ್ಕುಗಳನ್ನು ಮೊಟಕುಗೊಳಿಸುವ ಯಾವುದೇ ತಿದ್ದುಪಡಿಯನ್ನು ತರದಂತೆ ಹಾಗೂ ಸುಪ್ರಿಂ ತೀರ್ಪಿನ ವಿರುದ್ಧ ಕೇಂದ್ರ ಹೋರಾಡುವಂತೆ ಮನವಿ ಮಾಡಿದರು.

ಸಿದ್ದಲಿಂಗಯ್ಯ ಅವರು ಅಂಬೇಡ್ಕರ್ ಅವರ ಚಿತ್ರಪಟ ಹಾಗೂ ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಪುಸ್ತಕವನ್ನು ಅಮಿತ್ ಶಾ ಅವರಿಗೆ ಉಡುಗೊರೆಯಾಗಿ ನೀಡಿದರು.

English summary
BJP national president Amit Shah meets Dalit poet Siddalingayya and senior researcher Chidanandamurthy. on this time Chidanandamurthy requested not to agree to split Veerashiva and Lingayatha community. Siddalingyya gifted Ambedkar biography to Amit Shah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X