ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೃಪತುಂಗ ವಿಶ್ವವಿದ್ಯಾನಿಲಯ ಉದ್ಘಾಟನೆ : ವಿವಿಯ ವೈಶಿಷ್ಟ್ಯವೇನು..?

|
Google Oneindia Kannada News

ಬೆಂಗಳೂರು, ಮೇ 3: ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾನಿಲಯವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟನೆಯನ್ನು ಮಾಡಿದರು. ನೂರಾರು ವರ್ಷಗಳ ಇತಿಹಾಸವಿರುವ ಸಂಸ್ಥೆ ವಿಶ್ವ ವಿದ್ಯಾಲಯದ ಸ್ವರೂಪವನ್ನು ಪಡೆಯುತ್ತಿದೆ. ನೃಪತುಂಗ ರಸ್ತೆಯಲ್ಲಿರುವ ಕಾಲೇಜು ಇದೀಗ ವಿಶ್ವವಿದ್ಯಾಲಯವಾಗಿ ಪರಿವರ್ತನೆಯಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಮಹತ್ವದ ವಿವಿಯಾಗಿ ಬೆಳವಣಿಗೆ ಹೊಂದಲಿದೆ.

 ನೃಪತುಂಗ ವಿಶ್ವವಿದ್ಯಾನಿಲಯ ಇತಿಹಾಸವೇನು..?

ನೃಪತುಂಗ ವಿಶ್ವವಿದ್ಯಾನಿಲಯ ಇತಿಹಾಸವೇನು..?

ಮೈಸೂರಿನ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 100 ವರ್ಷಗಳ ಹಿಂದೆ ಅಂದರೆ 1921ರಲ್ಲಿ ಸ್ಥಾಪಿಸಿದ್ದ ಸಂಸ್ಥೆ. ಸರ್ಕಾರಿ ವಿಜ್ಞಾನ ಕಾಲೇಜ್ ಆಗಿದ್ದ ಈ ಸಂಸ್ಥೆಯು ಹಂತಹಂತವಾಗಿ ಬೆಳೆದು ಬಂದಿದೆ. ಈಗ ಪೂರ್ಣ ವಿಶ್ವವಿದ್ಯಾಲಯದ ರೂಪವನ್ನು ಪಡೆಯುತ್ತಿದೆ.

ಯಾವೆಲ್ಲಾ ಕೋರ್ಸ್ ಇರಲಿದೆ..

ಯಾವೆಲ್ಲಾ ಕೋರ್ಸ್ ಇರಲಿದೆ..

ನೃಪತುಂಗ ವಿವಿಗಾಗಿ ಕೇಂದ್ರ ಸರ್ಕಾರ 55 ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದೆ. ಇನ್ನು ನೃಪತುಂಗ ವಿವಿಯಲ್ಲಿ ಬಿ.ಎಸ್ಸಿ ಮತ್ತು ಬಿಸಿಎ ಪದವಿಗಳಡಿ 24 ಕೋರ್ಸುಗಳು, 7 ಸ್ನಾತಕೋತ್ತರ ಶಿಸ್ತುಗಳು ಮತ್ತು 3 ಸಂಶೋಧನಾ ಕೇಂದ್ರಗಳು ಇರಲಿವೆ.

ಎನ್‌ಇಪಿ ಪ್ರಕಾರವಾಗಿ ಶಿಕ್ಷಣ ವ್ಯವಸ್ಥೆ ಇರಲಿದ್ದು. ಮೂರು ವರ್ಷದ ಪದವಿ ಜೊತೆಗೆ ನಾಲ್ಕು ವರ್ಷದ ಆನರ್ಸ್ ಪದವಿ ಕೂಡ ಪ್ರಾರಂಭವಾಗಲಿದೆ. ಬಿಎಸ್ಸಿ, ಬಿಸಿಎ ಜೊತೆಗೆ ಏಳು ವಿಷಯಗಳ ಎಂಎಸ್ಸಿ ಪದವಿಕೋರ್ಸ್‌ ಗಳು ಮುಂದುವರೆಯಲಿದೆ.

ಎಂಟು ಸ್ಕೂಲ್‌ ಪ್ರಾರಂಭ

ಎಂಟು ಸ್ಕೂಲ್‌ ಪ್ರಾರಂಭ

1. ಸ್ಕೂಲ್ ಆಫ್ ಫಿಸಿಕಲ್ ಸೈನ್ಸ್‌

2. ಸ್ಕೂಲ್ ಆಫ್ ಕೆಮಿಕಲ್ ಸೈನ್ಸ್

3. ಸ್ಕೂಲ್ ಆಫ್ ಲೈಫ್ ಸೈನ್ಸ್

4. ಸ್ಕೂಲ್ ಆಫ್ ಅಪ್ಲೈಡ್ ಲೈಫ್ ಸೈನ್ಸ್

5. ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಾನಿಕ್ಸ್

6. ಸ್ಕೂಲ್ ಆಫ್ ಮ್ಯಾಥಮಿಟಿಕ್ ಮತ್ತು ಸ್ಯ್ಟಾಟಿಸ್ಟಿಕ್ಸ್

7. ಸ್ಕೂಲ್ ಆಫ್ ಲಾಂಗ್ವೇಜಸ್ ಮತ್ತಿ ಲಿಟರೇಚರ್

8. ಸ್ಕೂಲ್ ಆಫ್ ಮಲ್ಟಿ ಡಿಸಿಪ್ಲಿನರಿ ಮತ್ತು ಟ್ರಾನ್ಸ್ ಡಿಸಿಪ್ಲಿನರಿ ಸ್ಟಡೀಸ್

ಎಂಬ ಕೋರ್ಸ್ ಗಳಿದ್ದು ಪ್ರತಿ ಕೋರ್ಸ್ ನಲ್ಲೂ ಬೇರೆ ಬೇರೆ ವಿಭಾಗಗಳಿದ್ದು ವಿದ್ಯಾರ್ಥಿಗಳು ಕೆಲವು ಆಯ್ಕಯನ್ನು ಮಾಡಿಕೊಂಡು ವ್ಯಾಸಂಗ ಮಾಡಬಹುದಾಗಿದೆ.

ಎರಡು ಪ್ರಧಾನ ವಿಷಯಗಳ ಜೊತೆಗೆ ಒಂದು ಮುಕ್ತ ವಿಷಯದ ಆಯ್ಕೆಯನ್ನು ಮಾಡಿಕೊಳ್ಳಬಹುದಾಗಿದೆ. ಮೂರು ವರ್ಷ ಕಲಿತ ಬಳಿಕ ನಾಲ್ಕನೇ ವರ್ಷದಲ್ಲಿ ಯಾವುದಾದರೂ ಪ್ರಧಾನ ವಿಷಯವವನ್ನು ಕಲಿಯಲು ಅವಕಾಶವಿರುತ್ತದೆ. ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶವಿದ್ದು ಬೇರೆ ವಿಷಯದಲ್ಲಿ ಮತ್ತೊಂದು ವರ್ಷ ಕೋರ್ಸ್ ಅನ್ನು ಮಾಡಬಹುದಾಗಿದೆ. ಎನ್ ಇಪಿಯಲ್ಲಿರುವ ಅಂಶಗಳನ್ನು ಪ್ರಧಾನವಾಗಿ ಕೇಂದ್ರೀಕರಿಸಿ ವಿಶ್ವವಿದ್ಯಾಲಯ ಎರಡು ವಿಷಯದಲ್ಲೂ ಪದವಿ, ಆನರ್ಸ್ ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಎಚ್ ಡಿಯನ್ನು ಪಡೆಯಬಹುದಾಗಿದೆ.

Recommended Video

CSK ವಿರುದ್ಧ ಸೇಡು ತೀರಿಸಿಕೊಳ್ಳಲು ವಿರಾಟ್ ಹೇಗೆ ರೆಡಿಯಾಗಿದ್ದಾರೆ ಗೊತ್ತಾ? | Oneindia Kannad
ನೃಪತುಂಗ ವಿಶ್ವವಿದ್ಯಾಲಯದಲ್ಲಿ ಕನ್ನಡ ಕಡ್ಡಾಯ

ನೃಪತುಂಗ ವಿಶ್ವವಿದ್ಯಾಲಯದಲ್ಲಿ ಕನ್ನಡ ಕಡ್ಡಾಯ

ನೃಪತುಂಗ ವಿಶ್ವವಿದ್ಯಾಲಯದಲ್ಲಿ ನಾಲ್ಕನೇ ವರ್ಷಕ್ಕೆ ಕನ್ನಡ ವಿಷಯವನ್ನು ಕಡ್ಡಾಯ ಮಾಡಲಾಗಿದೆ. ಕನ್ನಡ ಬರದಿರವೋ ಅನ್ಯ ಭಾಷಿಕರಿಗೋ, ಅನ್ಯ ರಾಜ್ಯದ ವಿದ್ಯಾರ್ಥಿಗಳೋ ದಾಖಲಾತಿಯನ್ನು ಮಾಡಿಕೊಂಡಿದ್ದರೆ. ಸರಳ ಕನ್ನಡದ ರೂಪದಲ್ಲಿ ಕನ್ನಡವನ್ನು ಹೇಳಿಕೊಡಲಾಗುತ್ತದೆ.

ಎನ್ ಇಪಿ ಜಾರಿಯ ಮೂಲ ಉದ್ದೇಶವೇ ಮಕ್ಕಳನ್ನು ಸರ್ವೋತೋಮುಖವಾಗಿ ಅಭಿವೃದ್ದಿಗೊಳಿಸುವುದಾಗಿದೆ. ಹೀಗಾಗಿ ಕೌಶಲ್ಯಾಭಿವೃದ್ಧಿಗೆ ಸಂಬಂಧಿಸದಂತೆ ಕೆಲವು ಕೋರ್ಸ್ ಮತ್ತು ಕೋರ್ಸ್ ನಲ್ಲಿಯು ಅಡಕವಾಗಿರುವಂತೆ ಪದವಿಯ ವಿನ್ಯಾಸವನ್ನು ಮಾಡಲಾಗಿರುತ್ತದೆ. ಇದೇ ಕಾರಣಕ್ಕಾಗಿ ನೃಪತುಂಗ ವಿಶ್ವವಿದ್ಯಾಲಯವು ಬಹಳ ಮಹತ್ವವನ್ನು ಪಡೆದಿದೆ. ಸರ್ಕಾರಿ ವಿಜ್ಞಾನ ಕಾಲೇಜು ನೃಪತುಂಗ ವಿಶ್ವವಿದ್ಯಾನಿಲಯವಾಗಿ ಲೋಕಾರ್ಪಣೆಯಾಗಿದೆ. ಅಮಿತ್ ಶಾ ಮಾತನಾಡಿದಂತೆ ಜ್ಞಾನಾಧಾರಿತ ಸೂಪರ್ ಪವರ್ ಭಾರತವನ್ನು ಸೃಷ್ಟಿಸುವ ಸಂಕಲ್ಪ ಮಾಡಿದ್ದಾರೆ.

English summary
Nrupatunga University was inaugurated by Union Home Minister Amit Shah. Know the Specialities of Nrupatunga University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X