ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಬಾಡಿಗೆ ಮನೆಯೂ ದುಬಾರಿ: ಕಾರಣ ಓದಿ ತಿಳಿಯಿರಿ

|
Google Oneindia Kannada News

ಬೆಂಗಳೂರು, ಜೂನ್ 11: ಸಿಲಿಕಾನ್ ಸಿಟಿ ಕಡೆಗೆ ಖಾಸಗಿ ಕಂಪನಿಯ ಉದ್ಯೋಗಿಗಳು ಮುಖ ಮಾಡುತ್ತಿದ್ದಂತೆ ಬಾಡಿಗೆ ಮನೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ ಅನ್ನೋ ಟ್ರೆಂಡ್ ಸೃಷ್ಟಿ ಆಗುತ್ತಿದೆ.

ರಾಜ್ಯದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಕೊಂಚ ಇಳಿಕೆ ಆಯಿತು ಎಂದುಕೊಂಡಿರುವ ಖಾಸಗಿ ಕಂಪನಿಗಳು ಕಚೇರಿಗೆ ಆಗಮಿಸುವಂತೆ ತಮ್ಮ ಉದ್ಯೋಗಿಗಳಿಗೆ ಬುಲಾವ್ ನೀಡಿವೆ.

ಬೆಂಗಳೂರು; ಬಡಿದಾಡಿಕೊಂಡ ಮನೆ ಮಾಲೀಕ, ಬಾಡಿಗೆದಾರ!ಬೆಂಗಳೂರು; ಬಡಿದಾಡಿಕೊಂಡ ಮನೆ ಮಾಲೀಕ, ಬಾಡಿಗೆದಾರ!

ಬೆಂಗಳೂರಿನಿಂದ ವಿಮುಖರಾಗಿ ತಮ್ಮ ತಮ್ಮ ಊರುಗಳಿಗೆ ಹೋಗಿದ್ದ ಖಾಸಗಿ ಕಂಪನಿಯ ಉದ್ಯೋಗಿಗಳು ಮತ್ತೆ ರಾಜಧಾನಿ ಕಡೆಗೆ ಹೊರಳುತ್ತಿದ್ದಾರೆ. ಇದನ್ನೇ ಅವಕಾಶವಾಗಿ ಬಳಸಿಕೊಳ್ಳುವುದಕ್ಕೆ ಮುಂದಾಗಿರುವ ಮನೆ ಮಾಲೀಕರು ಮನೆ ಬಾಡಿಗೆಯನ್ನು ಏರಿಕೆ ಮಾಡುತ್ತಿದ್ದಾರೆ. ಇನ್ನೊಂದು ಮಗ್ಗಲಿನಲ್ಲಿ ಪಿಜಿ ಹಾಗೂ ಸ್ಟೇ ಹೋಮ್ ಬಾಡಿಗೆಯಲ್ಲೂ ಹೆಚ್ಚಳವಾಗುತ್ತಿದೆ.

ಬೆಂಗಳೂರಿನಲ್ಲಿ ಮನೆೆ ಬಾಡಿಗೆ ದುಬಾರಿ

ಬೆಂಗಳೂರಿನಲ್ಲಿ ಮನೆೆ ಬಾಡಿಗೆ ದುಬಾರಿ

ಕೊವಿಡ್-19 ಹಾವಳಿ ತಗ್ಗಿರುವ ಹಿನ್ನೆಲೆ ಕಚೇರಿಗಳಿಗೆ ಹಾಜರಾಗುವಂತೆ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಕಟ್ಟಪ್ಪಣೆ ಹೊರಡಿಸಿವೆ. ಇದರಿಂದ ಬೆಂಗಳೂರಿನಲ್ಲಿ ನೆಲೆ ಹುಡುಕುವುದಕ್ಕೆ ಉದ್ಯೋಗಿಗಳು ಶುರು ಮಾಡಿದ್ದಾರೆ. ಈ ಹಿಂದೆ ತಾವು ವಾಸವಾಗಿದ್ದ ಮನೆೆಗಳಿಗೆ ಈಗ ಬಾಡಿಗೆ ಹೆಚ್ಚಾಗಿದೆ. ಹೊಸ ಮನೆಗಳನ್ನು ಹುಡುಕುತ್ತಾ ಹೊರಟವರಿಗೆ ಸಿಲಿಕಾನ್ ಸಿಟಿಯಲ್ಲಿ ಮನೆ ಬಾಡಿಗೆ ದುಬಾರಿ ಆಗಿರುವುದು ಗಮನಕ್ಕೆ ಬಂದಿದೆ. ಈ ಮೊದಲು ತಾವೇ ಬಾಡಿಗೆಯಿದ್ದ ಮನೆಯ ಬಾಡಿಗೆಯಲ್ಲಿ ಶೇ.10ರಷ್ಟು ಹೆಚ್ಚಳವಾಗಿದೆ ಎಂದು ಉದ್ಯೋಗಿಯೊಬ್ಬರು ಹೇಳಿದ್ದಾರೆ.

ಖಾಸಗಿ ವಲಯಗಳು ತೆರೆದ ಪರಿಣಾಮದ ಮನೆಗಳಿಗೆ ಡಿಮ್ಯಾಂಡ್

ಖಾಸಗಿ ವಲಯಗಳು ತೆರೆದ ಪರಿಣಾಮದ ಮನೆಗಳಿಗೆ ಡಿಮ್ಯಾಂಡ್

ಬೆಂಗಳೂರಿನಲ್ಲಿ ಹೆಚ್ಚಿನ ವಲಯಗಳು ಮತ್ತೆ ತೆರೆದುಕೊಂಡಿವೆ. ಖಾಸಗಿ ಕಂಪನಿಗಳ ಉದ್ಯೋಗಿಗಳು ನಗರದತ್ತ ಧಾವಿಸಿ ಬರುತ್ತಿದ್ದಾರೆ. ಹೀಗಾಗಿ ಬಾಡಿಗೆ ಮನೆಗಳಿಗೆ ಬೇಡಿಕೆ ಹೆಚ್ಚಿದೆ. ಈ ಅವಕಾಶವನ್ನು ಬಳಸಿಕೊಂಡು, ಆಸ್ತಿ ಮಾಲೀಕರು ಉತ್ತಮ ಬಾಡಿಗೆಗೆ ಬೇಡಿಕೆ ಇಡುತ್ತಿದ್ದಾರೆ,'' ಎಂದು ಪ್ರಾಪರ್ಟಿ ಮ್ಯಾನೇಜ್‌ಮೆಂಟ್ ಏಜೆನ್ಸಿಯಾದ ವಿಕ್ಟರಿ ಇಂಡಿಯಾದ ಮಾಲೀಕ ಬಾಲಾಜಿ ಆರ್ ತಿಳಿಸಿದ್ದಾರೆ.

ದಕ್ಷಿಣ ಬೆಂಗಳೂರಿನ ರಿಯಾಲ್ಟರ್‌ಗಳಲ್ಲಿ ಶೇ.10ರಷ್ಟು ಮನೆ ಬಾಡಿಗೆಯನ್ನು ಏರಿಕೆ ಮಾಡುತ್ತಿರುವುದರ ಬಗ್ಗೆ ವರದಿ ಆಗಿದೆ, ಆದರೆ ಪ್ರಮುಖ ಪ್ರದೇಶಗಳಲ್ಲಿ ಭೂಮಾಲೀಕರು ಶೇ.30ರಷ್ಟು ಬಾಡಿಗೆಯನ್ನು ಹೆಚ್ಚಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಊರ ಹೊರಗೆಯೊಂದು ಮನೆ ಮಾಡಿ ಎನ್ನುತ್ತಿರುವ ಜನ

ಊರ ಹೊರಗೆಯೊಂದು ಮನೆ ಮಾಡಿ ಎನ್ನುತ್ತಿರುವ ಜನ

ಸಿಲಿಕಾನ್ ಸಿಟಿಯ "ಪ್ರಮುಖ ಪ್ರದೇಶಗಳಲ್ಲಿ ಮನೆ ಬಾಡಿಗೆಯ ಹೆಚ್ಚಳವು ಸ್ಪಷ್ಟವಾಗಿ ಕಂಡುಬರುತ್ತದೆ. ಹೊರ ಪ್ರದೇಶಗಳಲ್ಲೂ ಬಾಡಿಗೆ ಹೆಚ್ಚಳವಾಗಿದ್ದರೂ, ಅಗ್ಗದ ದರದ ಕಾರಣದಿಂದ ಅನೇಕರು ಈಗ ಹೊರ ಪ್ರದೇಶಗಳಿಗೆ ತೆರಳಲು ಮುಂದಾಗಿದ್ದಾರೆ. "ಉದಾಹರಣೆಗೆ, ಮೆಟ್ರೋ ನಿಲ್ದಾಣಗಳ ಬಳಿ ಮನೆಗಳಿಗೆ ಆದ್ಯತೆ ನೀಡುತ್ತಿದ್ದವವರು, ಈಗ ಬಾಡಿಗೆಗೆ ಕೈಗೆಟುಕುವ ಒಳಾಂಗಣ ಪ್ರದೇಶದ ಮನೆಗಳಿಗೆ ಹೋಗುವುದಕ್ಕೆ ಆಯ್ಕೆ ಮಾಡುತ್ತಿದ್ದಾರೆ," ಎಂದು ದಕ್ಷಿಣ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ರಿಯಾಲ್ಟರ್ ಪ್ರದೀಪ್ ಎಂ ಹೇಳಿದರು.

ಬಾಡಿಗೆ ಹೆಚ್ಚಳದ ಕುರಿತು ಬ್ರೋಕರ್ ಹೇಳುವುದೇನು?

ಬಾಡಿಗೆ ಹೆಚ್ಚಳದ ಕುರಿತು ಬ್ರೋಕರ್ ಹೇಳುವುದೇನು?

ಮನೆ ಬಾಡಿಗೆ ಏರಿಕೆಯ ಹೊರತಾಗಿಯೂ, ಬಾಡಿಗೆ ಮಾರುಕಟ್ಟೆಯು ಕೋವಿಡ್ ಪೂರ್ವದ ಸಮಯದಷ್ಟು ಇಲ್ಲ. "ಖಂಡಿತವಾಗಿಯೂ ಬಾಡಿಗೆಗಳಲ್ಲಿ ಹೆಚ್ಚಳ ಮತ್ತು ಬಾಡಿಗೆ ಮನೆಗಳಿಗೆ ಬೇಡಿಕೆಯಿದೆ, ಆದರೆ ಮಾರುಕಟ್ಟೆಯು ಕೋವಿಡ್ ಪೂರ್ವದ ಸಮಯಕ್ಕೆ ಇನ್ನೂ ಮರಳಿಲ್ಲ," ಎಂದು ರಾಜಾಜಿನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ರೋಕರ್ ಮತ್ತು ಪ್ರಾಪರ್ಟಿ ಮ್ಯಾನೇಜರ್ ಗೋಪಾಲಯ್ಯ ಕೆ ಹೇಳಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಪಿಜಿಗಳಿಗೂ ಡಿಮ್ಯಾಂಡ್

ಸಿಲಿಕಾನ್ ಸಿಟಿಯಲ್ಲಿ ಪಿಜಿಗಳಿಗೂ ಡಿಮ್ಯಾಂಡ್

"ಕಳೆದ ಕೆಲವು ತಿಂಗಳುಗಳಲ್ಲಿ ಬಾಡಿಗೆ ಮನೆಗಳಲ್ಲದೆ, ಪೇಯಿಂಗ್ ಗೆಸ್ಟ್ (PG) ವಸತಿಗಳು ಕೂಡ ವೇಗವಾಗಿ ಭರ್ತಿಯಾಗುತ್ತಿವೆ. ಸಾಂಕ್ರಾಮಿಕ ರೋಗ ಏರಿಕೆಯಾಗಿದ್ದ ಸಂದರ್ಭದಲ್ಲಿ ಸಂಪೂರ್ಣವಾಗಿ ಖಾಲಿಯಾಗಿದ್ದ ಪಿಜಿಗಳು ಈಗ ಶೇ.70ರಷ್ಟು ಭರ್ತಿ ಆಗಿವೆ. "ನಾವು ಶೇಕಡಾ 70-80 ರಷ್ಟು ಚೇತರಿಕೆ ಕಂಡಿದ್ದೇವೆ, ಏಕೆಂದರೆ ಅವರಲ್ಲಿ ಹಲವರು ಹಿಂತಿರುಗಲು ಪ್ರಾರಂಭಿಸಿದ್ದಾರೆ. ಜೀವನ ವೆಚ್ಚವು ಕನಿಷ್ಠ 10 ಪ್ರತಿಶತದಷ್ಟು ಏರಿಕೆಯಾಗಿದ್ದರೂ, ನಾವು ಪೂರ್ವ ಕೋವಿಡ್ ದರದಲ್ಲಿ ವಸತಿಗಳನ್ನು ನೀಡಿದ್ದೇವೆ," ಎಂದು ಬೆಂಗಳೂರು ಪಿಜಿ ಓನ್‌ನ ಕಾರ್ಯದರ್ಶಿ ಸುಖಿ ಸಿಯೊ ಹೇಳಿದ್ದಾರೆ.

Recommended Video

ಪ್ರವಾದಿ ಬಗ್ಗೆ ವಿವಾದಿತ ಹೇಳಿಕೆ: ಜಾರ್ಖಂಡ್ನಲ್ಲಿ ಹಿಂಸಾರೂಪ ಪಡೆದ ಪ್ರತಿಭಟನೆ:ಇಬ್ಬರ ಸಾವು | Oneindia Kannada

English summary
Amid employees rapid return-to-office hint bengaluru House Owner rising house rent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X