ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಆರ್ ಡಿಒನ ಸತೀಶ್ ರೆಡ್ಡಿ ಅವರಿಗೆ ಅಮೆರಿಕದ ಕ್ಷಿಪಣಿ ಪ್ರಶಸ್ತಿ

|
Google Oneindia Kannada News

ಬೆಂಗಳೂರು, ಮಾರ್ಚ್ 4: ಡಿಫೆನ್ಸ್ ರೀಸರ್ಚ್ ಅಂಡ್ ಡೆವಲಪ್ ಮೆಂಟ್ ಆರ್ಗನೈಸೇಷನ್ (ಡಿಆರ್ ಡಿಒ) ಅಧ್ಯಕ್ಷ ಜಿ.ಸತೀಶ್ ರೆಡ್ಡಿ ಅವರಿಗೆ ಅಮೆರಿಕನ್ ಇನ್ ಸ್ಟಿಟ್ಯೂಟ್ ಆಫ್ ಏರೋನಾಟಿಕ್ಸ್ ಹಾಗೂ ಅಸ್ಟ್ರೋನಾಟಿಕ್ಸ್ ಅವರ ಪ್ರಶಸ್ತಿ ಲಭಿಸಿದೆ. ಕ್ಷಿಪಣಿ ವ್ಯವಸ್ಥೆಯಲ್ಲಿ 2019ರ ಸಾಲಿನ ಜಂಟಿ ಪ್ರಶಸ್ತಿ ವಿಜೇತರಾಗಿದ್ದಾರೆ ಸತೀಶ್ ರೆಡ್ಡಿ.

ಭಾರತದ ಸ್ವದೇಶಿ ನಿರ್ಮಿತ ಕ್ಷಿಪಣಿ ವ್ಯವಸ್ಥೆಯ ವಿನ್ಯಾಸ, ಅಭಿವೃದ್ಧಿ, ನಿಯೋಜನೆಗೆ ಮೂರು ದಶಕಗಳಿಂದ ಸತೀಶ್ ರೆಡ್ಡಿ ನೀಡಿದ ಕೊಡುಗೆಯನ್ನು ಪರಿಗಣಿಸಲಾಗಿದೆ. ನಿರ್ದೇಶಿತ ಶಸ್ತ್ರಾಸ್ತ್ರ, ಅತ್ಯಾಧುನಿಕ ಏವಿಯೋನಿಕ್ಸ್ ಮತ್ತು ಭಾರತದ ನೇವಿಗೇಷನ್ ತಂತ್ರಜ್ಞಾನಕ್ಕೆ ರೆಡ್ಡಿ ಅವರು ನೀಡಿದ ಕೊಡುಗೆಯನ್ನು ಕೂಡ ಪರಿಗಣಿಸಲಾಗಿದೆ ಎಂದು ಅಮೆರಿಕದ ವರ್ಜಿನೀಯಾ ಮೂಲದ ವೈಮಾಂತರಿಕ್ಷ (ಏರೋಸ್ಪೇಸ್) ತಾಂತ್ರಿಕ ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.

DRDO ಅತ್ಯಾಧುನಿಕ ಕ್ಷಿಪಣಿಗಳ ಪ್ರಯೋಗ ಪರೀಕ್ಷೆ ಯಶಸ್ವಿDRDO ಅತ್ಯಾಧುನಿಕ ಕ್ಷಿಪಣಿಗಳ ಪ್ರಯೋಗ ಪರೀಕ್ಷೆ ಯಶಸ್ವಿ

ಐವತ್ತೈದು ವರ್ಷದ ರೆಡ್ಡಿ ಅವರು ರಕ್ಷಣಾ ಕಾರ್ಯದರ್ಶಿ ಮತ್ತು ಬೆಂಗಳೂರಿನಲ್ಲಿರುವ ಡಿಆರ್ ಡಿಒ ಮತ್ತೊಂದು ಅಂಗ ಏರೋನಾಟಿಕಲ್ ಡೆವಲಪ್ ಮೆಂಟ್ ಏಜೆನ್ಸಿಯ ನಿರ್ದೇಶಕರಾಗಿದ್ದಾರೆ. ಅಗ್ನಿ- 5 ಕ್ಷಿಪಣಿಗೆ ರೆಡ್ಡಿ ಅವರ ಕೊಡುಗೆ ಇದೆ. ಇದೇ ಕ್ಷಿಪಣಿ ಪ್ರಶಸ್ತಿಯ ಮತ್ತೊಬ್ಬ ವಿಜೇತರು ಅರಿಜೋನಾದ ಟಕ್ಸನ್ ಎಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪಾಂಶುಪಾಲರು.

American missile award for DRDO chairman Satheesh Reddy

ಮೇ ಏಳರಿಂದ ಒಂಬತ್ತರವರೆಗೆ ಅಮೆರಿಕದಲ್ಲಿ ನಡೆಯುವ ರಕ್ಷಣಾ ಸಭೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯುತ್ತದಾದರೂ ಸತೀಶ್ ರೆಡ್ಡಿ ಅವರಿಗೆ ಭಾರತದಲ್ಲಿಯೇ ಪ್ರದಾನ ಮಾಡಲಾಗುವುದು. "ಕ್ಷಿಪಣಿ ವ್ಯವಸ್ಥೆ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಜಾರಿಯಲ್ಲಿ ಅದ್ಭುತ ಸಾಧನೆ ಮಾಡಿದವರನ್ನು ಗುರುತಿಸಲು ಹಾಗೂ ಕ್ಷಿಪಣಿ ವ್ಯವಸ್ಥೆಯಲ್ಲಿ ಸ್ಫೂರ್ತಿದಾಯಕ ನಾಯಕತ್ವ ಪ್ರದರ್ಶಿಸಿದವರಿಗೂ ಈ ಪ್ರಶಸ್ತಿ ನೀಡಲಾಗುವುದು" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

1986ರಲ್ಲಿ ಸತೀಶ್ ರೆಡ್ಡಿ ಅವರು ಹೈದರಾಬಾದ್ ನಲ್ಲಿರುವ ಡಿಅರ್ ಡಿಎಲ್ (ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ ಮೆಂಟ್ ಲ್ಯಾಬೋರೇಟರಿ) ಸೇರಿದ್ದಾರೆ. ಆ ನಂತರ ರೀಸರ್ಚ್ ಸೆಂಟರ್ ಇಮಾರತ್ ಸೇರಿದ್ದಾರೆ. ಜವಾಹರ್ ಲಾಲ್ ನೆಹರೂ ತಾಂತ್ರಿಕ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಮಾಡಿರುವ ಅವರು, ಎಂ.ಎಸ್., ಹಾಗೂ ಪಿಎಚ್.ಡಿ., ಕೂಡ ಪೂರ್ಣಗೊಳಿಸಿದ್ದಾರೆ.

English summary
State-run Defence Research and Development Organisation (DRDO) chairman G Satheesh Reddy is the joint winner of the 2019 Missile Systems Award given by the American Institute of Aeronautics and Astronautics in the US, said the Virginia-based aerospace technical society on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X