ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶವ ಸಾಗಿಸಲು 60 ಸಾವಿರ ಕೇಳಿದ್ದ ಆಂಬ್ಯುಲೆನ್ಸ್ ಚಾಲಕನ ಬಂಧನ

|
Google Oneindia Kannada News

ಬೆಂಗಳೂರು, ಏಪ್ರಿಲ್ 23: ಸ್ಮಶಾನಕ್ಕೆ ಶವ ಸಾಗಿಸಲು 60 ಸಾವಿರ ರೂ. ಬೇಡಿಕೆ ಇಟ್ಟಿದ್ದ ಆಂಬ್ಯುಲೆನ್ಸ್ ಚಾಲಕರನ್ನು ಬಂಧಿಸಲಾಗಿದೆ.

ಈ ಚಾಲಕರು ಮೃತರ ಕುಟುಂಬಸ್ಥರಿಂದ 16 ಸಾವಿರ ರೂ. ವಸೂಲಿ ಮಾಡಿದ್ದ ಹನುಮಂತಪ್ಪ ಸಿಂಗ್ರಿ ಹಾಗೂ ಹರೀಶ್ ಬಂಧಿತ ಆರೋಪಿಗಳು‌.

ಅಂತ್ಯಸಂಸ್ಕಾರದಲ್ಲೂ ಬ್ಲಾಕ್‌ ಮಾರ್ಕೆಟ್, ಪ್ಯಾಕೇಜ್; ಬೆಂಗಳೂರಿನಲ್ಲಿ ಇದೆಂಥ ದುಃಸ್ಥಿತಿ?ಅಂತ್ಯಸಂಸ್ಕಾರದಲ್ಲೂ ಬ್ಲಾಕ್‌ ಮಾರ್ಕೆಟ್, ಪ್ಯಾಕೇಜ್; ಬೆಂಗಳೂರಿನಲ್ಲಿ ಇದೆಂಥ ದುಃಸ್ಥಿತಿ?

ಚಿತಾಗಾರಕ್ಕೆ ಶವ ಸಾಗಿಸಲು ಆ್ಯಂಬುಲೆನ್ಸ್ ಮಾಲೀಕರು 60 ಸಾವಿರಕ್ಕೆ ಡಿಮ್ಯಾಂಡ್ ಮಾಡಿದ್ದರು. ಈ ವೇಳೆ‌ ಕುಟುಂಬಸ್ಥರು 16 ಸಾವಿರ ರೂಪಾಯಿ ನೀಡಿದ್ದಾರೆ.‌ ಉಳಿದ ಹಣ ನೀಡದಿದ್ದರೆ ಶವವನ್ನು ರಸ್ತೆಯಲ್ಲೇ ಬಿಸಾಡುವುದಾಗಿ ಧಮ್ಕಿ ಹಾಕಿದ್ದರು ಎನ್ನಲಾಗುತ್ತಿದೆ.

Ambulance Driver, Owner Arrested For Charging ₹60K To Ferry Body

ಏ.20ರಂದು ಪ್ರಸಾದ್ ಎಂಬುವರು ಕೊರೊನಾದಿಂದ ಮೃತಪಟ್ಟಿದ್ದರು. ಆ್ಯಂಬುಲೆನ್ಸ್ ಮೂಲಕ ಚಿತಾಗಾರಕ್ಕೆ ಶವ ಸಾಗಿಸಲು ಈ ವಾಹನದ ಮೊರೆ ಹೋಗಿದ್ದರು‌.

ಜೈ ಹನುಮಾನ್ ಆ್ಯಂಬುಲೆನ್ಸ್ ಮಾಲೀಕ ಹಾಗೂ ಚಾಲಕ ಹನುಮಂತಪ್ಪ ಮತ್ತು ನಂದನ ಇಂಟರ್​ ನ್ಯಾಷನಲ್ ಆ್ಯಂಬುಲೆನ್ಸ್ ಮಾಲೀಕ ಹರೀಶ್ ಎಂಬುವರನ್ನು ಮೃತರ ಮಗಳಾದ ಭವ್ಯ ಸಂಪರ್ಕಿಸಿದ್ದರು.

ಆರೋಪಿಗಳು ಇದೇ ರೀತಿ ಹಲವರಿಂದ ಹಣಕ್ಕೆ ಡಿಮ್ಯಾಂಡ್ ಮಾಡಿರುವ ಶಂಕೆಯಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ನಗರ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ. ಶವ ಸಾಗಿಸಲು ಹಣ‌ ಕೇಳಿದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ಭರವಸೆ ನೀಡಿದ್ದಾರೆ.

Recommended Video

#Covid19Update : ದೇಶದಲ್ಲಿ 24 ಗಂಟೆಯಲ್ಲಿ 3,32,730 ಜನರಿಗೆ ಸೋಂಕು..! | Oneindia Kannada

ಈ ವೇಳೆ ಮಾಂಗಲ್ಯ ಸರ ಮಾರಿ ಹಣ ನೀಡಲು ಮುಂದಾಗಿದ್ದರು. ಈ ಕುರಿತು ಮಾಧ್ಯಮಗಳಲ್ಲಿ‌ ಸುದ್ದಿ ಪ್ರಸಾರವಾಗುತ್ತಿದ್ದಂತೆ ಅಮೃತಹಳ್ಳಿ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 384, 269, 270 ಹಾಗೂ ರಾಷ್ಟ್ರೀಯ ವಿಕೋಪ ನಿರ್ವಹಣಾ ಕಾಯ್ದೆ (ಎನ್​ಡಿಎಂಎ) ಸೆಕ್ಷನ್ 54 ಅಡಿ ಎಫ್​ಐಆರ್ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿ ಆ್ಯಂಬುಲೆನ್ಸ್ ಸಹ ವಶಪಡಿಸಿಕೊಂಡಿದ್ದಾರೆ.

English summary
The Amruthahalli police on Thursday arrested the owner of an ambulance service and a driver for allegedly demanding ₹60,000 from the family of 55-year-old R.V. Prasad, who succumbed to COVID-19 on April 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X