ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈದ್ಯರ ಜತೆ ಕೊರೊನಾದಿಂದ ಗುಣಮುಖನಾದ ಆಂಬ್ಯುಲೆನ್ಸ್ ಚಾಲಕನ ನೃತ್ಯ

|
Google Oneindia Kannada News

ಬೆಂಗಳೂರು, ಮೇ 26: ಕೊರೊನಾ ಸೋಂಕಿಗಿಂತ ರೋಗಿಗಳು ಮಾನಸಿಕವಾಗಿ ಕುಗ್ಗಿಹೋಗುವುದೇ ಹೆಚ್ಚು, ಇದರಿಂದಲೇ ಸೋಂಕಿನ ತೀವ್ರತೆಯೂ ಹೆಚ್ಚಾಗುತ್ತಿದೆ.

ಅದೇ ಸೋಂಕನ್ನು ಮೆಟ್ಟಿ ನಿಲ್ಲುತ್ತೇವೆ ಎಂದು ಪಣ ತೊಡಿ ಆದಷ್ಟು ಬೇಗ ಗುಣಮುಖರಾಗುತ್ತೀರಿ. 28 ವರ್ಷದ ಆಂಬ್ಯುಲೆನ್ಸ್ ಚಾಲಕನೊಬ್ಬನಿಗೆ ಕೊರೊನಾ ಸೋಂಕು ತಗುಲಿದ್ದು, ಮಂಗಳವಾರ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನಿಂದ ಡಿಸ್ಚಾರ್ಜ್ ಆಗಿದ್ದಾರೆ.

ವಿಡಿಯೋ ವೈರಲ್: ಕೊರೊನಾ ಸೋಂಕಿತರ ಜೊತೆ ಶಾಸಕ ರೇಣುಕಾಚಾರ್ಯ ಸಖತ್ ಡ್ಯಾನ್ಸ್ವಿಡಿಯೋ ವೈರಲ್: ಕೊರೊನಾ ಸೋಂಕಿತರ ಜೊತೆ ಶಾಸಕ ರೇಣುಕಾಚಾರ್ಯ ಸಖತ್ ಡ್ಯಾನ್ಸ್

ಆಸ್ಪತ್ರೆಯಿಂದ ತೆರಳುವ ವೇಳೆ ಹಾಡೊಂದಕ್ಕೆ ನೃತ್ಯ ಮಾಡಿದ್ದಾರೆ, ಇದಕ್ಕೆ ವೈದ್ಯರು ಕೂಡ ಸಾಥ್ ನೀಡಿದ್ದಾರೆ. ಚಾಲಕನಿಗೆ ಆಕ್ಸಿಜನ್ ಪ್ರಮಾಣ ಕಡಿಮೆಯಾಗಿತ್ತು, ಆಕ್ಸಿಜನ್ ಬೆಡ್ ಸಿಗದೆ ಪರದಾಡಿದ್ದರು, ಊರು ಊರು ಅಲೆದಿದ್ದರು, ಬಳಿಕ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಹಾಸಿಗೆ ಲಭಿಸಿತ್ತು.

Bengaluru: Ambulance Driver Dances With Doctor In Hospital To Celebrate Beating Covid 19

ಇಆರ್‌ಟಿ ಫರಾಹ್ ಅವರಿಂದ ಚಾಲಕನಿಗೆ ಹಾಸಿಗೆ ಸಿಕ್ಕಿತ್ತು, ಮೇ 18 ರಂದು ರಾತ್ರಿ 11.30ಕ್ಕೆ ಕರೆ ಬಂದಿತ್ತು, ಚಾಲಕ ಅನಾಥನಾಗಿದ್ದು ಮೂವರು ಸ್ನೇಹಿತರೊಂದಿಗೆ ವಾಸವಾಗಿದ್ದ, ನೂರಾರು ಮಂದಿ ಪ್ರಾಣವನ್ನು ರಕ್ಷಿಸುವ ಆಂಬ್ಯುಲೆನ್ಸ್ ಚಾಲಕನಿಗೆ ಸಹಾಯ ಮಾಡದೆ ಇದ್ದರೆ ಹೇಗೆ ಎಂದು ಆಲೋಚಿಸಿದೆ ಎಂದು ಫರಾಹ್ ಹೇಳಿದ್ದಾರೆ.

ದಿನಕ್ಕೆ 30 ಸಾವಿರ ರೂ ಖರ್ಚಾಗಲಿದೆ ಎಂದು ಫರಾಹ್ ಹೇಳಿದ್ದರು ಆದರೆ ರೋಗಿಯ ಸ್ನೇಹಿತರ ಬಳಿಯೂ ಅಷ್ಟು ಹಣವಿರಲಿಲ್ಲ ಹಾಗಾಗಿ ಬಿಬಿಎಂಪಿ ಮೂಲಕ ಚಾಲಕನಿಗೆ ಹಾಸಿಗೆ ದೊರೆಯಿತು. ಇದೀಗ ಚಾಲಕ ಸಂಪೂರ್ಣವಾಗಿ ಗುಣಮುಖನಾಗಿದ್ದು, ವೈದ್ಯರಿಗೆ ಧನ್ಯವಾದ ತಿಳಿಸಿದ್ದಾನೆ.

Recommended Video

ವರ್ಷದ ಮೊದಲ ಚಂದ್ರ ಗ್ರಹಣ ಇಂದು ಭಾರತದಲ್ಲೂ | Oneindia Kannada

English summary
A ambulance driver discharged from St John’s Medical College and Hospital here on Tuesday, celebrated his recovery from covid 19 by dancing to the popular song.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X