ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರೋ ಇಂಡಿಯಾ ಶೋನಲ್ಲಿ ಅಮೆರಿಕ ರಾಯಭಾರಿ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಫೆಬ್ರವರಿ 21: ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2019ರಲ್ಲಿ "ಯುಎಸ್ ಎ ಪಾರ್ಟನರ್ ಷಿಪ್ ಪೆವಿಲಿಯನ್" ಅನ್ನು ಭಾರತಕ್ಕೆ ಅಮೆರಿಕ ರಾಯಭಾರಿ ಕೆನೆತ್ ಐ ಜಸ್ಟರ್ ಬುಧವಾರದಂದು ಅಧಿಕೃತವಾಗಿ ಉದ್ಘಾಟನೆ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏರೋ ಇಂಡಿಯಾದಲ್ಲಿ ಅಮೆರಿಕವು ವಿಶ್ವದ ಅತ್ಯಾಧುನಿಕ ಏರೋಸ್ಪೇಸ್, ರಕ್ಷಣೆ ಮತ್ತು ಸಂವಹನ ತಂತ್ರಜ್ಞಾನವನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಿದೆ. ಇಲ್ಲಿ ಹಾರಾಡುವ ವಿಮಾನಗಳೆಂದರೆ: F-16 ಫೈಟಿಂಗ್ ಫಾಲ್ಕನ್; F/A-18 ಸೂಪರ್ ಹಾರ್ನೆಟ್; C-17 ಗ್ಲೋಬ್ ಮಾಸ್ಟರ್; P-8I ಪೊಸೈಡಾನ್; ಮತ್ತು B-52 ಸ್ಟ್ರಾಟೋಫೋರ್ಟ್ರೆಸ್ ಬಾಂಬರ್ ಎಂದು ಹೇಳಿದರು.

ಏರೋ ಇಂಡಿಯಾ: ಭಾರತ-ಅಮೆರಿಕ ನಡುವೆ ರಕ್ಷಣಾ ಬಾಂಧವ್ಯ ವೃದ್ಧಿಗೆ ವೇದಿಕೆಏರೋ ಇಂಡಿಯಾ: ಭಾರತ-ಅಮೆರಿಕ ನಡುವೆ ರಕ್ಷಣಾ ಬಾಂಧವ್ಯ ವೃದ್ಧಿಗೆ ವೇದಿಕೆ

ಈ ವಿಮಾನಗಳು ಭಾರತದ ಭದ್ರತಾ ಸವಾಲುಗಳಿಗೆ ಅತ್ಯಾಧುನಿಕ ಪರಿಷ್ಕಾರಗಳನ್ನು ಒದಗಿಸುತ್ತದೆ. ಅಮೆರಿಕದ ರಕ್ಷಣಾ ಉತ್ಪನ್ನ ವಲಯವು ಭಾರತಕ್ಕೆ ಉನ್ನತ ದರ್ಜೆಯ, ತಾಂತ್ರಿಕವಾಗಿ ಮುಂದಿರುವ ರಕ್ಷಣಾ ಸಲಕರಣೆ ಹಾಗೂ ವ್ಯವಸ್ಥೆಗಳನ್ನು ಒದಗಿಸಲು ಸಿದ್ಧವಿದೆ. ಇವುಗಳ ಮೇಲೆ ಜಗತ್ತಿನಾದ್ಯಂತ ನಂಬಿಕೆ ಇದೆ. ಈಗಾಗಲೇ ಭಾರತದ ಸೇನಾ ಬಲ ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಹಾಗೂ ಅಮೆರಿಕ ಒಟ್ಟಾಗಿ ರಕ್ಷಣಾ ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಉತ್ಪಾದನೆ ಮಾಡುತ್ತಿವೆ ಎಂದರು.

Juster

ಏರೋ ಇಂಡಿಯಾದಲ್ಲಿ ಇರುವ ಯುಎಸ್ ಎ ಪಾರ್ಟನರ್ ಷಿಪ್ ಪೆವಿಲಿಯನ್ ನಲ್ಲಿ ಉತ್ತಮ ವಿಮಾನಗಳು, ಶಸ್ತಾಸ್ತ್ರ ವ್ಯವಸ್ಥೆ, ಜಗತ್ತಿನ ಅತ್ಯುತ್ತಮ ಸೇನಾ ತಂತ್ರಜ್ಞಾನವನ್ನು ಪ್ರದರ್ಶಿಸಲಾಗಿದೆ. ಅಮೆರಿಕದ ಇಪ್ಪತ್ತೆಂಟು ಕಂಪನಿಗಳು ಪಾಲ್ಗೊಂಡಿವೆ. ಅದರಲ್ಲಿ ಹತ್ತೊಂಬತ್ತು ಕಂಪನಿ ಯುಎಸ್ ಎ ಪಾರ್ಟನರ್ ಷಿಪ್ ಪೆವಿಲಿಯನ್ ನಲ್ಲಿ ಪ್ರದರ್ಶಿಸಿವೆ. ಇದೇ ಮೊದಲ ಬಾರಿಗೆ ಏರೋ ಇಂಡಿಯಾದಲ್ಲಿ ನಾಲ್ಕು ಪೆವಿಲಿಯನ್ ಪ್ರದರ್ಶಕರಿದ್ದಾರೆ.

English summary
The U.S. Ambassador to India Kenneth I. Juster officially opened the “USA Partnership Pavilion” at the Aero India 2019 in Bengaluru on Wednesday, February 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X