ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರ್‌ ಶೋ, ಕೆಂಪೇಗೌಡ ಏರ್‌ಪೋರ್ಟ್‌ಗೆ ಪರ್ಯಾಯ ರಸ್ತೆ ಬಳಸಲು ಸೂಚನೆ

|
Google Oneindia Kannada News

ಬೆಂಗಳೂರು, ಜನವರಿ 21: ನಗರದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಏರೋ ಇಂಡಿಯಾ ಆರಂಭವಾಗಲಿದೆ. ಅದಕ್ಕೂ ಮುನ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಜಂಟಿ ತಪಾಸಣೆ ನಡೆಸಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯಭಾಸ್ಕರ್ ಲೋಕೋಪಯೋಗಿ, ಅರಣ್ಯ, ಬೆಸ್ಕಾಂ ಸಂಸ್ಥೆಗಳಿಗೆ ಸೂಚಿಸಿದ್ದಾರೆ.

ಏರ್‌ ಶೋ ಬೆಂಗಳೂರಿನಿಂದ ಸ್ಥಳಾಂತರ : ಮೋದಿಗೆ ಎಚ್‌ಡಿಕೆ ಪತ್ರ ಏರ್‌ ಶೋ ಬೆಂಗಳೂರಿನಿಂದ ಸ್ಥಳಾಂತರ : ಮೋದಿಗೆ ಎಚ್‌ಡಿಕೆ ಪತ್ರ

ಫೆಬ್ರವರಿ 21ರಿಂದ ಆರಂಭವಾಗಲಿರುವ 5 ದಿನಗಳ ಏರೋ ಶೋಗೂ ಮುನ್ನ ಪರ್ಯಾಯ ಮಾರ್ಗ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಬೇಗೂರು, ಹೆಣ್ಣೂರು, ಬಾಗಲೂರು ಹಾಗೂ ಮೈಲನಹಳ್ಳಿ ಮಾರ್ಗದಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿದ್ದು, ರಸ್ತೆ ವಿಸ್ತರಣೆ ಮಾಡಲಾಗಿದೆ. ಬಾಗಲೂರುವರೆಗಿನ ರಸ್ತೆ ಬಿಬಿಎಂಪಿ ವ್ಯಾಪ್ತಿಗೆ ಬರಲಿದ್ದು, ನಂತರದ ಮಾರ್ಗವು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರಲಿದೆ.

Alternative road for KIA during aero India show?

ರಸ್ತೆಯಲ್ಲಿ ಎರಡು ಮರಗಳನ್ನು ಕತ್ತರಿಸಿ ಕೇಬಲ್ ಅಳವಡಿಕೆಗೆ ಅರಣ್ಯ ಇಲಾಖೆಯ ಅನುಮತಿ ಬೇಕಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಬೆಂಗಳೂರಿನಿಂದ ಏರ್ ಶೋ ಸ್ಥಳಾಂತರ?, ಪರಮೇಶ್ವರ ಟ್ವೀಟ್ ಬೆಂಗಳೂರಿನಿಂದ ಏರ್ ಶೋ ಸ್ಥಳಾಂತರ?, ಪರಮೇಶ್ವರ ಟ್ವೀಟ್

ಫೆಬ್ರವರಿಯಲ್ಲಿ ನಡೆಯುವ ಏರೋ ಇಂಡಿಯಾ ಶೋಗೆ ಈಗಾಗಲೇ ಸಾಕಷ್ಟು ತಯಾರಿಗಳು ಆರಂಭವಾಗಿವೆ, ಶೋ ಫೆಬ್ರವರಿ 20ಕ್ಕೆ ಆರಂಭವಾಗಲಿದ್ದು ಐದು ದಿನಗಳ ಕಾಲ ಶೋ ನಡೆಯಲಿದೆ.

English summary
Chief secretary wrote a letter to different departments regarding alternative road for Kempegowda international airport during Aero India show.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X