ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೇಸಿಗೆ ಆರಂಭಕ್ಕೂ ಮುನ್ನವೇ ಲೋಡ್ ಶೆಡ್ಡಿಂಗ್ ಶುರುವಾಯ್ತಾ?

|
Google Oneindia Kannada News

ಬೆಂಗಳೂರು, ನವೆಂಬರ್ 8: ಬೇಸಿಗೆ ಆರಂಭವಾಗುವ ಮೊದಲೇ ರಾಜ್ಯದಲ್ಲಿ ವಿದ್ಯುತ್ ಅಭಾವ ತಲೆದೋರಿದೆ. ಈಗಾಗಲೇ ರಾಜ್ಯದ ಬಹುತೇಕ ಕಡೆಗಳಲ್ಲಿ ಲೋಡ್ ಶೆಡ್ಡಿಂಗ್ ಸದ್ದಿಲ್ಲದೇ ಶುರುವಾಗಿದೆ.

ರಾಜ್ಯದ ವಿದ್ಯುತ್ ಸಮಸ್ಯೆ ಏಕೆ, ನಿವಾರಣೆ ಹೇಗೆ?ರಾಜ್ಯದ ವಿದ್ಯುತ್ ಸಮಸ್ಯೆ ಏಕೆ, ನಿವಾರಣೆ ಹೇಗೆ?

ರಾಜಧಾನಿ ಸಿಲಿಕಾನ್‌ ಸಿಟಿಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ವಿದ್ಯುತ್ ಕಣ್ಣ ಮುಚ್ಚಾಲೆ ಶುರುವಾಗಿದೆ. ಬೆಂಗಳೂರಿನಲ್ಲಿ ಕರೆಂಟ್ ಯಾವಾಗಾ ಬರುತ್ತೋ? ಯಾವಾಗಾ ಹೋಗುತ್ತೋ ಎಂಬುವುದು ಸಾರ್ವಜನಿಕರಿಗೆ ಒಂದು ತಿಳಿಯುತ್ತಿಲ್ಲ. ಇನ್ನು ಈ ಬಗ್ಗೆ ಬೆಸ್ಕಾಂ ಸಹ ಯಾವುದೇ ಆದೇಶವನ್ನು ಸಹ ಹೊರಡಿಸಿಲ್ಲ.

Already load shedding started in Bengaluru

ನಿತ್ಯದ ಕೆಲಸಕ್ಕೆ ಹೋಗುವವರು, ಶಾಲೆ -ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಈಗಲೇ ಹೀಗಾದರೇ ಇನ್ನು ಬೇಸಿಗೆಯಲ್ಲಿ ಕಥೆಯೇನು? ಎನ್ನುವುದು ಜನರಲ್ಲಿ ಈಗಿನಿಂದಲೇ ನಡುಕ ಶುರುವಾಗಿದೆ.

ಮಾರ್ಚ್ ವೇಳೆಗೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ. ಪರೀಕ್ಷೆಗಳು ಆರಂಭವಾಗಲಿವೆ. ವಿದ್ಯಾರ್ಥಿಗಳು ಪರೀಕ್ಷೆ ತಯಾರಿಗೆ ಕರೆಂಟ್ ಕಾಯುತ್ತ ಕುಳಿತರೆ ಅವರ ಕಥೆ ಅಷ್ಟೇ.

ಬೆಸ್ಕಾಂ ಸಹಾಯವಾಣಿ ಸಂಖ್ಯೆ SMS: 58888, Helpline: 1912 ಮತ್ತು 9449844640

English summary
Before summeer load shedding started in Bengaluru. But Bescom till did not given any infarmation about load shadding
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X